Ukraine: ನಾಯಿಗೂಡಿನಲ್ಲಿ ಬೆಳೆದ ಓಕ್ಸಾನಾ, ನಂತರ ನಾಯಿ ತರಹನೇ ಆದಳು

Ukraine: ನೀವು ಟಾರ್ಜನ್‌ ಮತ್ತು ಮೋಗ್ಲಿಯ ಕಥೆಯನ್ನು ಕೇಳಿರಬಹುದು. ಅವರು ಮನುಷ್ಯರ ಸಂಗದಿಂದ ಬೇರ್ಪಟ್ಟು ಕಾಡಿನಲ್ಲಿ ಕಾಡು ಪ್ರಾಣಿಗಳೊಂದಿಗೆ ಬೆಳೆದಿದ್ದು, ಇಂತಹ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಅಂತಹ ಒಂದು ಆಸಕ್ತಿದಾಯಕ ಮತ್ತು ಹರ್ಷದಾಯಕವಾಗಿದ್ದರೂ, ಇದರಲ್ಲೂ ವಾಸ್ತವತೆಯಿದೆ. ಪ್ರಾಣಿಗಳು ಮಕ್ಕಳನ್ನು ನಿಜವಾಗಿ ಆ ರೀತಿಯಲ್ಲೇ ಬೆಳೆಸಿದ ಕೆಲವೊಂದು ಘಟನೆಗಳು ದಾಖಲಾಗಿದೆ. ಉಕ್ರೇನ್‌ನ ಒಕ್ಸಾನಾ ಮಲಯಾ ಕೂಡಾ ಅಂತಹ ಒಂದು ಪ್ರಕರಣಗಳಲ್ಲಿ ಒಂದು. ತನ್ನ ಬಾಲ್ಯವನ್ನು ನಾಯಿಗಳೊಂದಿಗೆ ಕಳೆದಿರುವ ಈಕೆ ತನ್ನ ಬಾಲ್ಯದ ದಿನಗಳ ಬಗ್ಗೆ ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ: New Delhi: ಐಎಎಸ್ ಅಧಿಕಾರಿ ಸುರಭಿ ಗೌತಮ್ ಯಶೋಗಾಥೆ; ಯುಪಿಎಸ್ಸಿ, GATE, BAARC, ISRO, SAIL, SSC-CGL, IES ಪರೀಕ್ಷೆಗಳನ್ನು ಪಾಸ್‌ ಮಾಡಿದ ದಿಟ್ಟ ಯುವತಿ

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಆಕೆಯ ಮದ್ಯವ್ಯಸನಿ ಪೋಷಕರು 3 ನೇ ವಯಸ್ಸಿನಲ್ಲಿ ಅವಳನ್ನು ಚಳಿಯಲ್ಲಿ ಹೊರಗೆ ಬಿಟ್ಟಾಗ ಅವಳ ಜೀವನವು ತಿರುವು ಪಡೆದುಕೊಂಡಿತು. ಚಳಿಯನ್ನು ತಡೆದುಕೊಳ್ಳಲಾಗದೆ ಹತಾಶಳಾದ ಆ ಬಾಲಕಿ ತನ್ನ ಮುದ್ದಿನ ನಾಯಿಯ ಜೊತೆ ಸರಿಸುಮಾರು ಐದು ವರ್ಷಗಳ ಕಾಲ ಅಲ್ಲಿಯೇ ಇದ್ದಳು.

ಈಗ 40 ರ ಹರೆಯದಲ್ಲಿರುವ ಶ್ರೀಮತಿ ಮಲಯಾ, ಆ ಸಮಯದಲ್ಲಿ ಬೊಗಳುವುದು, ಗೊಣಗುವುದು ಮತ್ತು ನಾಲ್ಕು ಕಾಲುಗಳ ಮೇಲೆ ನಡೆಯುವಂತಹ ಪ್ರಾಣಿಗಳ ಗುಣಲಕ್ಷಣಗಳನ್ನು ಅಳವಡಿಸಿಕೊಂಡಿದ್ದರು. “ಅಮ್ಮನಿಗೆ ತುಂಬಾ ಮಕ್ಕಳಿದ್ದರು, ನಮಗೆ ಸಾಕಷ್ಟು ಹಾಸಿಗೆಗಳು ಇರಲಿಲ್ಲ. ಹಾಗಾಗಿ ನಾನು ನಾಯಿಯ ಬಳಿಗೆ ತೆವಳಿಕೊಂಡು ಅದರೊಂದಿಗೆ ವಾಸಿಸಲು ಪ್ರಾರಂಭಿಸಿದೆ” ಎಂದು ಹೇಳಿದರು. ಪೋಸ್ಟ್‌ನ ಪ್ರಕಾರ, ಬದುಕುಳಿಯಲು, ಅವಳು ತನ್ನ ನಾಯಿಯ ಮೋರಿಯಲ್ಲಿ ತನಗಾಗಿ ಒಂದು ಮನೆಯನ್ನು ಮಾಡಿಕೊಂಡಳು. ಮುಂದಿನ ಐದು ವರ್ಷಗಳ ಕಾಲ – 3 ರಿಂದ 9 ನೇ ವಯಸ್ಸಿನವರೆಗೆ ಆಕೆ ನಾಯಿ ಜೊತೆಯಲ್ಲಿ ವಾಸಿಸಿದ್ದಳು.

ಮಲಯಾ ತನ್ನನ್ನು ತಾನು ನಾಯಿಯಂತೆ ತನ್ನ ದೇಹವನ್ನು ನೆಕ್ಕಿ ಸ್ವಚ್ಛಗೊಳಿಸುತ್ತಿದ್ದಳು. ಹಸಿ ಮಾಂಸವನ್ನು ತಿನ್ನುತ್ತಿದ್ದಳು. ಅವಳು ಮನುಷ್ಯರಿಗಿಂತ ಪುಟ್ಟ ನಾಯಿಯಂತೆ ಇದ್ದಳು. “ಅವಳು ನೀರನ್ನು ನೋಡಿದಾಗ ತನ್ನ ನಾಲಿಗೆಯನ್ನು ತೋರಿಸುತ್ತಿದ್ದಳು ಮತ್ತು ನಾಲಿಗೆಯಿಂದ ತಿನ್ನುತ್ತಿದ್ದಳು ಎಂದು ವರದಿಯಾಗಿದೆ.

ಮಲಯಾಳನ್ನು 9 ನೇ ವಯಸ್ಸಿನಲ್ಲಿ ರಕ್ಷಣೆ ಮಾಡಲಾಯಿತು. ಉಕ್ರೇನಿಯನ್ ಅಧಿಕಾರಿಗಳು ಅವಳ ಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ್ದರು. ಆರಂಭದಲ್ಲಿ ನಾಯಿಗಳ ಗ್ಯಾಂಗ್ ನಿಂದ ಆಕೆಯನ್ನು ರಕ್ಷಿಸುವ ಕೆಲಸ ವಿಫಲಗೊಂಡಿತು. ಅವಳನ್ನು ರಕ್ಷಿಸಲು ಪೊಲೀಸರು ತೀವ್ರ ಹೋರಾಟ ಮಾಡಿದರು. ಅಧಿಕಾರಿಗಳು ನಾಯಿಗಳಿಗೆ ಆಹಾರ ಕೊಟ್ಟು ಅವರಿಂದ ಹುಡುಗಿಯನ್ನು ನಾಯಿ ಗೂಡಿನಿಂದ ರಕ್ಷಣೆ ಮಾಡಲಾಯಿತು.

Ms ಮಲಯಾ ಇತಿಹಾಸದಾದ್ಯಂತ ತಿಳಿದಿರುವ ಸುಮಾರು 100 ಕಾಡು ಪ್ರಕರಣಗಳಲ್ಲಿ ಒಂದಾಗಿದೆ. 2000 ರ ದಶಕದ ಆರಂಭದಲ್ಲಿ ಅವಳು ತನ್ನ ತಾಯಿ ಮತ್ತು ತಂದೆಯೊಂದಿಗೆ ಇರಲು ಆರಂಭಿಸಿದಳು.

Leave A Reply

Your email address will not be published.