New Delhi: ಐಎಎಸ್ ಅಧಿಕಾರಿ ಸುರಭಿ ಗೌತಮ್ ಯಶೋಗಾಥೆ; ಯುಪಿಎಸ್ಸಿ, GATE, BAARC, ISRO, SAIL, SSC-CGL, IES ಪರೀಕ್ಷೆಗಳನ್ನು ಪಾಸ್‌ ಮಾಡಿದ ದಿಟ್ಟ ಯುವತಿ

ನವದೆಹಲಿ: ನಾವು ಅನೇಕ  ಐಎಎಸ್ ಐಪಿಎಸ್ ಅಧಿಕಾರಿಗಳ ಜೀವನ ಗಾಥೆಯನ್ನು ಕೇಳಿರುತ್ತೇವೆ. ಅವರಲ್ಲಿ ಬಹುತೇಕರು ಮುಳ್ಳಿನ ಹಾದಿಯಲ್ಲಿ ನಡೆದು ಬಂದವರೆ ಆಗಿದ್ದಾರೆ. ಅವರ  ಪಟ್ಟುಹಿಡಿದ ಹೋರಾಟ, ಅಚಲವಾದ ಸಂಕಲ್ಪ ಮತ್ತು ನಂಬಿಕೆ ಇಂದು ಅವರನ್ನು ಆ ಸ್ಥಾನದಲ್ಲಿರಿಸಿದೆ ಎಂಬುದು ಅಷ್ಟೇ ಸತ್ಯ.

ಇದನ್ನೂ ಓದಿ: Actress Nithya Menon: ಹುಡುಗಿಯರು ಇದನ್ನು ಸುಲಭದಲ್ಲಿ ಮಾಡುತ್ತಾರೆ, ಆದರೆ ಹುಡುಗರನ್ನು ಯೋಚನೆ ಮಾಡಿದರೆ ಅಯ್ಯೋ ಪಾಪ ಅನ್ಸುತ್ತೆ- ನಿತ್ಯಾ ಮೆನನ್‌

ಇಂದು ಅವರು ತಮ್ಮ ಶ್ರಮದ ಫಲವನ್ನು ಆನಂದಿಸಬಹುದು ಮತ್ತು ಆಕರ್ಷಕ ಜೀವನವನ್ನು ನಡೆಸುವಂತೆ ಕಾಣಬಹುದಾದರೂ, ಅವರ ಯಶಸ್ಸಿನ ಹಾದಿ ಸುಲಭವಾಗಿರಲಿಲ್ಲ. ಅನೇಕರು ತಮ್ಮ ಕನಸುಗಳನ್ನು ನನಸಾಗಿಸಲು ಕಠಿಣ ಸವಾಲುಗಳನ್ನು ಎದುರಿಸಿದ್ದಾರೆ ಅಂತಹ ಅನೇಕ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಸುರಭಿ ಗೌತಮ್ .

ನಮ್ಮಲ್ಲಿನ ಇಚ್ಛಾ ಶಕ್ತಿಯಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಐಎಎಸ್ ಅಧಿಕಾರಿ ಸುರಭಿ ಗೌತಮ್ ಅವರ ಜೀವನವೇ ಸಾಕ್ಷಿ.  ತನಗೆ ಎದುರಾದ ಅನೇಕ ಅಡೆತಡೆಗಳನ್ನು ಮೀರಿ ನಿರಂತರ ಪರಿಶ್ರಮದಿಂದ ತನ್ನ ಕನಸುಗಳನ್ನು ನನಸಾಗಿಸಿಕೊಂಡ ಸುರಭಿ ಗೌತಮ್ ಬೆಳೆದು ಬಂದ ಹಾದಿ ಸುಲಬದ್ದಾಗಿರಲಿಲ್ಲಾ.

ಸುರಭಿಯವರ  ಬೆಳೆದು ಬಂದ ಹಾದಿ ಆಕೆಯ  ಸಾಧನೆಗಳಿಗೆ ಸಾಕ್ಷಿಯಾಗಿದೆ ಮತ್ತು ಅನೇಕರಿಗೆ ಸ್ಫೂರ್ತಿಯ ದಾರಿದೀಪವಾಗಿದೆ. ಅವರು ಇಂದು ಐಎಎಸ್ ಅಧಿಕಾರಿಯ ಗೌರವಾನ್ವಿತ ಸ್ಥಾನವನ್ನು ಗಳಿಸಿರುವುದು ಮಾತ್ರವಲ್ಲದೆ, 50 ನೇ ಅಖಿಲ ಭಾರತ ಶ್ರೇಣಿಯನ್ನು ಗಳಿಸಿದ್ದಾರೆ, ಇದರ ಜೊತೆಗೆ  ಗೇಟ್, ಬಾರ್ಕ್, ಇಸ್ರೊ, ಎಸ್ಎಐಎಲ್, ಎಸ್ಎಸ್ಸಿ-ಸಿಜಿಎಲ್ ಮತ್ತು ಐಇಎಸ್  ನಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಮೂಲಕ ಅದ್ಭುತ ಮತ್ತು ಪ್ರಭಾವಶಾಲಿ ವ್ಯಕ್ತಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಬಡ ಕುಟುಂಬದಲ್ಲಿ ಜನಿಸಿದ ಸುರಭಿಯವರು ತಮ್ಮ ಯಶಸ್ಸಿನ ಹಾದಿಯಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದರು. ಸುರಭಿ ಅವರು ಪಿಯುಸಿ ವರೆಗೂ  ಹಿಂದಿ-ಮಾಧ್ಯಮದಲ್ಲಿಯೇ ಓದಿದರು. ಆಕೆ ತನ್ನ ಶೈಕ್ಷಣಿಕ ಆರಂಭದ ವರ್ಷಗಳಲ್ಲಿ ಆಗಾಗ್ಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಇದರಿಂದಾಗಿ ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಬೇಕಾಗಿತ್ತು.

ಈ ಆರೋಗ್ಯ ಸಮಸ್ಯೆಗಳು ಆಕೆಯ ಕಾಲೇಜು ದಿನಗಳ ವರೆಗೆ ಮುಂದುವರೆದವು. ಇಷ್ಟು ಮಾತ್ರವಲ್ಲದೆ  ಮೊದಲಿಂದಲೂ ಹಿಂದಿಯಲ್ಲಿ ಶಿಕ್ಷಣ ಪಡೆದಿದ್ದ ಸುರಭಿ ಅವರಿಗೆ ಕಾಲೇಜಿನಲ್ಲಿ ಇಂಗ್ಲಿಷ್ ಕಲಿಯುವುದು ತುಂಬಾ ಕಷ್ಟವಾಗಿತ್ತು ಆದರೆ ಆಕೆಯು ಅದನ್ನು ಸವಾಲಾಗಿ ಸ್ವೀಕರಿಸಿ  ತಮ್ಮ ಮೊದಲ ಸೆಮಿಸ್ಟರ್ನಲ್ಲಿ ತಮ್ಮ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಅಗ್ರ ರ್ಯಾಂಕ್  ಪಡೆಯುವ ಮೂಲಕ ಎಲ್ಲರನ್ನು ಅಚ್ಚರಿಗೀಡು ಮಾಡಿದ್ದರು.

ನಂತರ ತಮ್ಮ 20 ನೇ ವಯಸ್ಸಿನಲ್ಲಿ ಪ್ರತಿಷ್ಠಿತ BARC ಸಂಸ್ಥೆಯಲ್ಲಿ ಉತ್ತಮ ಸ್ಥಾನಗಳಿಸುತ್ತಾರೆ. BARC ಪರೀಕ್ಷೆಯು ಅತ್ಯಂತ ಕಠಿಣವಾದ ಪರೀಕ್ಷೆಯಾಗಿದ್ದು ಅದರಲ್ಲಿ ಉತ್ತೀರ್ಣವಾಗುವುದು ಅಷ್ಟು ಸುಲಭವಲ್ಲ. ಆದರೂ ಸುರಭಿಯ ದೃಢನಿಶ್ಚಯದಿಂದ ಅವರು ಪರೀಕ್ಷೆಯಲ್ಲಿ ಯಶಸ್ಸು ಕಾಣಲು ಸಾಧ್ಯವಾಯಿತು.

ಅವರು ತಮ್ಮ 21 ನೇ ವಯಸ್ಸಿನಲ್ಲಿ,  ಭಾರತೀಯ ಎಂಜಿನಿಯರಿಂಗ್ ಸೇವೆಗಳ (ಐಇಎಸ್) ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದರು.

ಸುರಭಿ ಅವರು ತಮ್ಮ 25ನೇ ವಯಸ್ಸಿನಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ (ಸಿ. ಎಸ್. ಇ.) 50ನೇ ಅಖಿಲ ಭಾರತ ಶ್ರೇಯಾಂಕದೊಂದಿಗೆ ಯಶಸ್ವಿಯಾಗಿ ಉತ್ತೀರ್ಣರಾಗಿದ್ದು ಅವರ ಮತ್ತೊಂದು ಗಮನಾರ್ಹ ಸಾಧನೆಯಾಗಿದೆ.

ತನ್ನ ಯಶಸ್ಸಿಗೆ ಯಾವುದೇ ಶಾರ್ಟ್ಕಟ್ಗಳಿಲ್ಲ ಮತ್ತು ಕಠಿಣ ಪರಿಶ್ರಮವು ಸಾಧನೆಗೆ ಅಂತಿಮ ಕೀಲಿ ಕೈ ಎಂದು ಹೇಳುತ್ತಾರೆ ಸುರಭಿಯವರು.

ನಮ್ಮಲ್ಲಿನ ಇಚ್ಛಾಶಕ್ತಿ ಮತ್ತು ನಿರಂತರ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸುರಭಿ ಗೌತಮ್ ಅವರ ಜೀವನ ‌ಗಾಥೆ ನಿಜಕ್ಕೂ ಮಾದರಿ.

Leave A Reply

Your email address will not be published.