Viral video: ಕ್ರಿಕೆಟ್ ಪಂದ್ಯದ ವೇಳೆ ಗ್ರೌಂಡಿಗೆ ನುಗ್ಗಿ ಪ್ಲೆಯರ್ಸ್ ಅನ್ನು ಅಟ್ಟಾಡಿಸಿದ ಗೂಳಿ – ಭಯಾನಕ ವಿಡಿಯೋ ವೈರಲ್!!

Share the Article

Viral video: ಕ್ರಿಕೆಟ್ ಪಂದ್ಯಾವಳಿ ನಡೆಯುವಾಗ ಇದ್ದಕಿದ್ದಂತೆ ಗೂಳಿಯೊಂದು ಗ್ರೌಂಡಿಗೆ ಎಂಟ್ರಿಕೊಟ್ಟು ಅಲ್ಲಿದ್ದ ಪ್ರತಿಯೊಬ್ಬರನ್ನು ಅಟ್ಟಾಡಿಸಿದ್ದು, ಇದರ ಭಯಾನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್(Viral video)ಆಗುತ್ತಿದೆ.

https://x.com/HitmanCricket/status/1759459548589695267?t=kTCrbbVDpIRDueJlM9SDfQ&s=08

ರಾಜಸ್ಥಾನ ರಾಯಲ್ಸ್(Rajasthan rayals) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ನಿಜಕ್ಕೂ ಅಚ್ಚರಿ ಹಾಗೂ ಅಘಾತ ಉಂಟುಮಾಡುತ್ತದೆ. ಇದರಲ್ಲಿ ಸಣ್ಣ ಗ್ರಾಮದಲ್ಲಿ ನಡೆಯುತ್ತಿರುವ ಕ್ರಿಕೆಟ್ ಟೂರ್ನಮೆಂಟ್(Cricket tournament)ವೀಕ್ಷಕ ವಿವರಣೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಜನರೂ ಕ್ರಿಕೆಟ್ ನೋಡಲು ಆಗಮಿಸುತ್ತಿದ್ದರು. ಆಗ ಪಿಚ್‌ನತ್ತ ಧಾವಿಸಿದ ಒಂದು ಹೈನಾತಿ ಎಲ್ಲರನ್ನೂ ಅಟ್ಟಾಡಿಸಿಕೊಂಡು ಓಡಿಸಿದೆ. ಬ್ಯಾಟ್ಸ್‌ಮನ್ ಬಳಿಕ ಬೌಲರ‌ನ ಅಟ್ಟಾಡಿಸಿಕೊಂಡು ಹೋಗಿದೆ. ಕೂದಲೆಳೆ ಅಂತರದಲ್ಲಿ ಬೌಲರ್ ಅಪಾಯದಿಂದ ಪಾರಾದ ಘಟನೆಯನ್ನು ಕಾಣಬಹುದು.

ವಿಡಿಯೋದಲ್ಲಿ ಎರಡು ಗೂಳಿಗಳು ಕಾದಾಡಿಕೊಂಡಿದೆ ಬಳಿಕ ಎರಡೂ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದ ಬಳಿಗೆ ಬಂದಿದೆ ಈ ವೇಳೆ ಒಂದು ಗೂಳಿ ಮೈದಾನಕ್ಕಿಳಿದು ಅಲ್ಲಿದ್ದ ಆಟಗಾರರನ್ನು ಬೆನ್ನಟ್ಟಿದೆ ಈ ವೇಳೆ ಆಟಗಾರರು ಬದುಕಿದೆಯಾ ಬಡ ಜೀವ ಎಂದು ಎದ್ನೋ ಬಿದ್ನೋ ಎಂದು ಓಡತೊಡಗಿದ್ದಾರೆ.

ಘಟನೆಯಲ್ಲಿ ಯಾವುದೇ ಅಪಾಯ ಉಂಟಾಗಿಲ್ಲ.

Leave A Reply