Megan Skye Blankeda: ಅಪ್ರಾಪ್ತ ಬಾಲಕನೊಂದಿಗೆ ಖ್ಯಾತ ನಟಿಯ ಲೈಂಗಿಕ ಕ್ರಿಯೆ – ಖ್ಯಾತ ನಟಿ ಅರೆಸ್ಟ್

Megan Skye Blankeda: ಹಾರರ್ ಚಿತ್ರಗಳಲ್ಲಿ ಸಿನಿ ರಸಿಕರನ್ನು ಬೆಚ್ಚಿ ಬೀಳಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತನ್ನ ಬಿಕಿನಿ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದ ಆಸ್ಟ್ರೇಲಿಯಾ ಖ್ಯಾತ ನಟಿ ಮೆಗನ್ ಸ್ಕೈ ಬ್ಲಾಂಕೆಡಾ(Megan Skye Blankeda) ಇದೀಗ ಹೊಸ ವಿಚಾರದಿಂದ ಸುದ್ದಿಯಾಗಿ, ಕೋರ್ಟ್ ಕಟಕಟೆ ಏರಿದ್ದಾರೆ.

 

ಇದನ್ನೂ ಓದಿ: Arecanut: ಸುಳಿಕೊಳೆ ರೋಗ ಇದೆಯೇ!! ಇಲ್ಲಿದೆ ಸುಲಭ ಪರಿಹಾರ.

ಹೌದು, ಈ ಸುಂದರ ನಟಿ ಅಪ್ರಾಪ್ತ ಬಾಲಕನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪ ಎದುರಿಸುತ್ತಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಅರೆಸ್ಟ್ ಆಗಿದ್ದ ನಟಿ ಇದೀಗ ಕೋರ್ಟ್‌ಗೆ ಹಾಜರಾಗಿದ್ದಾರೆ.

ಅಂದಹಾಗೆ 34 ವರ್ಷದ ನಟಿ ಸೆಕ್ಸ್‌ಗಾಗಿ 16 ವರ್ಷದ ಬಾಲಕನ ಬಳಸಿಕೊಂಡಿದ್ದಾರೆ ಅನ್ನೋ ಗಂಭೀರ ಆರೋಪ ಈಕೆಯ ಮೇಲಿದೆ. ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಈಕೆಯನ್ನು ಅರೆಸ್ಟ್ ಮಾಡಲಾಗಿತ್ತು. ಈ ಹಾಲಿವುಡ್ ನಟಿ ಮೆಗನ್ ಸ್ಕೈ ಬಂಧನ ಭಾರಿ ಸಂಚಲನ ಸೃಷ್ಟಿಸಿತ್ತು

ಇನ್ನು ಇವಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ವೇಳೆ ಅಪ್ರಾಪ್ತ ಬಾಲಕರ ಜೊತೆಗಿನ ಸೆಕ್ಸ್ ಚಾಟ್ ಸೇರಿದಂತೆ ಹಲವು ಫೋಟೋ ಹಾಗೂ ವಿಡಿಯೋಗಳು ಲಭ್ಯವಾಗಿತ್ತು. ಬಳಿಕ ಪೋಲೀಸರು ವಿಚಾರಣೆ ಬಳಿಕ ಪೊಲೀಸರು ನಟಿ ಮೇಲೆ ಮಕ್ಕಳ ಮೇಲೆ ಲೈಂಗಿಕ ಶೋಷಣೆ ಪ್ರಕರಣ ದಾಖಲಿಸಿದ್ದರು. ಜಾಮೀನಿನ ಮೇಲೆ ಹೊರಬಂದ ನಟಿ ಇದೀಗ ಆಡಿಲೇಡ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾಗಿದ್ದಾರೆ. ನಟಿ ಮೇಲಿನ ಮಕ್ಕಳ ಲೈಂಗಿಕ ದೌರ್ಜನ್ಯ ಆರೋಪದ ಕುರಿತ ಈ ಪ್ರಕರಣವನ್ನು ಆಡಿಲೇಡ್ ಕೋರ್ಟ್ ಮೇ 1ಕ್ಕೆ ಮುಂದೂಡಿದೆ.

Leave A Reply

Your email address will not be published.