CM Siddaramaiah: ನಾನೇಕೆ ನನ್ನ ಹೆಂಡತಿಯನ್ನು ಇನ್ನೂ ಪರಿಚಯಿಸಲ್ಲ ಗೊತ್ತಾ? ವೈರಲ್ ಆಯ್ತು ಸಿಎಂ ಸಿದ್ದರಾಮಯ್ಯ ಕೊಟ್ಟ ಹೇಳಿಕೆ

CM Siddaramaiah: ಸಿಎಂ ಸಿದ್ದರಾಮಯ್ಯನವರ ರಾಜಕೀಯ ಜೀವನದ ಕುರಿತು ಎಲ್ಲರಿಗೂ ಗೊತ್ತಿದೆ. ಹೆಚ್ಚಿನವರು ಅವರ ಪ್ರತಿಯೊಂದು ಹೆಜ್ಜೆಯನ್ನೂ ಹೇಳುತ್ತಾರೆ. ಆದರೆ ಅವರ ವೈಯಕ್ತಿಕ ಜೀವನದ ಕುರಿತು ಯಾರಿಗೂ ಗೊತ್ತಿಲ್ಲ. ಇತ್ತೀಚೆಗೆ ಮಾಧ್ಯಮಗಳು ಅವರ ತಮ್ಮಂದಿರ ಪರಿಚಯ ಮಾಡಿದ್ದನ್ನು ನಾವು ನೋಡಿದ್ದೇವೆಯೇ ಹೊರತು, ರಾಜಕೀಯಕ್ಕೆ ಎಂಟ್ರಿಯಾದುದರಿಂದ ಅವರ ಮಗ ಯತೀಂದ್ರರ ಪರಿಚಯ ಉಂಟೇ ಹೊರತು ಅವರ ಶ್ರೀಮತಿಯವರನ್ನು ನೋಡೋದು ಬಿಡಿ ಅವರ ಬಗ್ಗೆ ಯಾರೂ ಕೇಳಿಯೂ ಇರಲಿಕ್ಕಿಲ್ಲ. ಆದರೀಗ ನಾನೇಕೆ ನನ್ನ ಹೆಂಡತಿಯನ್ನು ಇನ್ನೂ ಪರಿಚಯಿಸಿಲ್ಲ ಎಂಬುದರ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಮಾತನಾಡಿದ್ದಾರೆ.

https://x.com/INCKarnataka/status/1759929089635561580?t=UFlea8qdo2bC8rg8hNZAng&s=08

ಇದನ್ನೂ ಓದಿ: Viral video: ಕ್ರಿಕೆಟ್ ಪಂದ್ಯದ ವೇಳೆ ಗ್ರೌಂಡಿಗೆ ನುಗ್ಗಿ ಪ್ಲೆಯರ್ಸ್ ಅನ್ನು ಅಟ್ಟಾಡಿಸಿದ ಗೂಳಿ – ಭಯಾನಕ ವಿಡಿಯೋ ವೈರಲ್!!

ಹೌದು, ಕುಟುಂಬ ವಿಚಾರದಲ್ಲಿ ಸಿದ್ದರಾಮಯ್ಯ(CM Siddaramaiah)ನಿಜಕ್ಕೂ ಮಾದರಿಯಾಗುವಂತವರು. ಗಂಡ ಯಾವುದಾದರೂ ಅಧಿಕಾರದಲ್ಲಿದ್ದರೆ ಹೆಂಡತಿಯೇ ಎಲ್ಲಾ ಆಡಳಿತ ನಡೆಸುವಾಗ ಸಿಎಂ ಸಿದ್ದರಾಮಯ್ಯನವರು ಮದುವೆಯಾದಾಗಿನಿಂದ ಇದುವರೆಗೂ ತಮ್ಮ ಹೆಂಡತಿಯನ್ನು ಕುಟುಂಬ ಬಿಟ್ಟರೆ ಬೇರಾರಿಗೂ ಪರಿಚಯಿಸಿಲ್ಲ. ಸ್ವತಃ ತಮ್ಮ ಮಂತ್ರಿಗಳಿಗೆ, ಶಾಸಕರಿಗೂ ಅನ್ನುವುದು ಅಚ್ಚರಿಯೇ ಅಲ್ಲವೇ? ಇರಲಿ, ಇದೀಗ ಸಿದ್ದರಾಮಯ್ಯನವರು ನೀಡಿದ ಹೇಳಿಕೆ ಏನು ಅನ್ನೋದನ್ನು ನೋಡೋಣ.

ಅಂದಹಾಗೆ ಕರ್ನಾಟಕ ಕಾಂಗ್ರೆಸ್ ಸಮಿತಿ(Karnataka Congress)ಟ್ವಿಟ್ಟರ್ ಖಾತೆಯಲ್ಲಿ ಕೆಲವು ಮಂತ್ರೆಗಳು ಸಿಎಂ ಸಿದ್ದರಾಮಯ್ಯನವರ ಜೊತೆ ಸಂದರ್ಶನದ ರೀತಿ ಮಾತುಕತೆ ನಡೆಸಿದ್ದನ್ನು ಹಂಚಿಕೊಂಡಿದೆ. ಇದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಳರ್, ಈಶ್ವರ್ ಖಂಡ್ರೆ, ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ, ಡಾ. ಜಿ. ಪರಮೇಶ್ವ‌ರ್, ಡಾ. ಎಂ. ಸಿ ಸುಧಾಕರ್, ಶಿವರಾಜ್ ತಂಗಡಗಿ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿ ಅತೀಕ್ ಅವರನ್ನು ನೋಡಬಹುದಾಗಿದೆ.

ವಿಡಿಯೋದಲ್ಲಿ ಮೊದಲಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಕೇಳುವುದನ್ನು ನೋಡಬಹುದಾಗಿದೆ. ಇದಕ್ಕೆ ಉತ್ತರಿಸುವ ಸಿಎಂ, ನಾನು ಕುಟುಂಬದವರಿಗೆ ಸಮಯ ಕೊಟ್ಟಿರುವುದು ತೀರಾ ಕಡಿಮೆ. ಯಾಕೆಂದರೆ ಸಾರ್ವಜನಿಕ ಜೀವನದಲ್ಲಿ ಸಮಾಜವೇ ನಮ್ಮ ಕುಟುಂಬವಾಗಿರುತ್ತದೆ. ಅವರ ಜೊತೆ ಇರಲು ನನಗೆ ಸಮಯ ಸಿಗುವುದು ತುಂಬಾ ಕಡಿಮೆ. ಲೋಹಿಯಾ ಅವರು ಏನು ಹೇಳಿದ್ದರು ಎಂದರೆ ಒಳ್ಳೆಯ ವ್ಯಕ್ತಿ ಆಗಬೇಕೆಂದರೆ ನೀವು ರಾಜಕಾರಣಕ್ಕೆ ಬನ್ನಿ ಆದರೆ, ಮದುವೆಯಾಗಬೇಡಿ ಎಂದಿದ್ದರು. ರಾಜಕೀಯಕ್ಕೆ ಬರುವ ವ್ಯಕ್ತಿಗಳು ಸಮಾಜಕ್ಕೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ನಂತರ ಸಚಿವ ಸುಧಾಕರ್ ಅವರು ನಿಮ್ಮ ಮನೆಯ ಹೋಂ ಮಿನಿಸ್ಟರ್ ಅನ್ನು ಯಾಕೆ ಗೃಹ ಬಂಧನದಲ್ಲಿ ಇರಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ಆಕೆಗೆ ಸ್ವಾತಂತ್ರ್ಯ ಕೊಟ್ಟಿದ್ದು, ಎಲ್ಲಿ ಬೇಕಾದರೂ ಒಡಾಡಬಹುದಾಗಿದೆ. ಪ್ರಮಾಣ ವಸನ ಕಾರ್ಯಕ್ರಮಕ್ಕೂ ಆಕೆಯನ್ನು ಆಹ್ವಾನಿಸಿದ್ದೆ ಆದರೆ, ಆಕೆ ಬರಲಿಲ್ಲ. ನಾನು 1977ರಲ್ಲಿ ವಿವಾಹವಾದೆ ಆ ನಂತರ ತಾಲ್ಲೂಕು ಪಂಚಾಯಿತಿ ಸದಸ್ಯನಾದೆ ಸಾರ್ವಜನಿಕ ಜೀವನದಲ್ಲಿ ಇದುದ್ದರಿಂದ ಕುಟುಂಬದವರಿಗೆ ಸಮಯ ಕೊಟ್ಟಿರುವುದು ತೀರಾ ಕಡಿಮೆ. ಇದು ರೂಢಿಯಾಗಿಬಿಟ್ಟಿದೆ ಎಂದು ಹೇಳಿದ್ದಾರೆ. ಅಲ್ಲದೆ ಈ ವೇಳೆ ಸಚಿವರು ಸಿಎಂಗೆ ತಮ್ಮ ಪತ್ನಿಯನ್ನು ಪರಿಚಯ ಮಾಡಿಸಿಕೊಡುವಂತೆ ಕೇಳುವುದನ್ನು ನೋಡಬಹುದಾಗಿದೆ. ಇದಕ್ಕೆ ಒಪ್ಪಿದ ಸಿಎಂ ಒಮ್ಮೆ ಅವರನ್ನು ಕೇಳಿ ನೋಡುತ್ತೇನೆ ಎಂದು ಹೇಳುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

1 Comment
  1. Lucca Mccann says

    Lucca Mccann

Leave A Reply

Your email address will not be published.