Vijayapura: ಹೆಂಡತಿಯ ಶೀಲ ಶಂಕಿಸಿ ಸನಿಕೆ ಹಿಡಿದ ಗಂಡ ಏನು ಮಾಡಿದ ಗೊತ್ತಾ?! ಯಪ್ಪಾ.. ಬೆಚ್ಚಿಬೀಳಿಸುತ್ತೆ ಘಟನೆ

Share the Article

Vijayapura: ವ್ಯಕ್ತಿಯೊಬ್ಬ ಪತ್ನಿಯ (Wife) ಶೀಲ ಶಂಕಿಸಿ ಬರ್ಬರ ಹತ್ಯೆಗೈದ ಘಟನೆ ತಿಕೋಟ ತಾಲೂಕಿನ ಹುಬನೂರು ತಾಂಡಾ -2 ರಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: National politics: ಮಾಜಿ ಸಿಎಂ, ಕಾಂಗ್ರೆಸ್ ನೇತಾರ ಬಿಜೆಪಿ ಸೇರ್ಪಡೆ ?!

ಹೌದು, ವಿಜಯಪುರ(Vijayapura) ಜಿಲ್ಲೆಯ ತಿಕೋಟ ತಾ. ಹುಬನೂರು ತಾಂಡಾ -2ರಲ್ಲಿ ಘಟನೆ ನಡೆದಿದೆ. ರೇಶ್ಮಾ ರಾಠೋಡ (25) ಎಂಬಾಕೆಯ ಶೀಲವನ್ನು ಶಂಕಿಸಿ ಆಕೆಯ ಗಂಡ ಅಶೋಕ ರಾಠೋಡ (33) ಎಂಬುವವನು ಸನಿಕೆ(ಗುದ್ದಲಿ)ಯಲ್ಲಿ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ.

ಅಂದಹಾಗೆ ರೇಶ್ಮಾ ಹಾಗೂ ಅಶೋಕ್‌ ಮದುವೆಯಾಗಿ 11 ವರ್ಷಗಳೇ ಕಳೆದಿತ್ತು. ದಂಪತಿಗೆ ಮೂವರು ಮಕ್ಕಳು ಸಹ ಇದ್ದರು. ಆದರೆ ಕೆಲ ತಿಂಗಳಿನಿಂದ ಅಶೋಕ್‌, ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸಂಶಯವನ್ನು ಹೊಂದಿದ್ದ. ಆಗಾಗ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಇದರಿಂದ ಬೇಸತ್ತು ಮಹಿಳೆ ತನ್ನ ತವರು ಮನೆಗೆ ಹೋಗಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಮಹಿಳೆಯ ಮೇಲೆ ಸಲಾಕೆಯಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

Leave A Reply