Central government : ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ 4ರಷ್ಟು ಏರಿಕೆ- ಈ ತಿಂಗಳಿಂದಲೇ ಜಾರಿ !!
Central government :ಚುನಾವಣೆ ಹೊತ್ತಲ್ಲೇ ಕೇಂದ್ರ ಸರ್ಕಾರವು(Central government)ಕೇಂದ್ರ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಅದೇನೆಂದರೆ ಮಾರ್ಚ್ನಲ್ಲಿ ಶೇಕಡಾ 4 ರಷ್ಟು ಡಿಎ ಹೆಚ್ಚಳವನ್ನ ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹೀಗೆ 4ರಷ್ಟು ಹೆಚ್ಚಳದ ನಂತರ, ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವು ಶೇಕಡಾ 50ಕ್ಕೆ ಹೆಚ್ಚಾಗುತ್ತದೆ.
ಇದನ್ನೂ ಓದಿ: CM Siddaramaiah: ಬಜೆಟ್ ಮಂಡನೆ ಸಮಯದಲ್ಲಿ ಕಾಂಗ್ರೆಸ್ ಶಾಲು ಹಾಕಲು ʼಕೈʼ ಶಾಸಕರಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ ಸೂಚನೆ
ಹೌದು, 7ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಮಾರ್ಚ್‌ನಲ್ಲಿ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇದು ಮುಂದಿನ ಮಾರ್ಚ್‌ನಲ್ಲಿಯೇ ಜಾರಿಯಾಗುತ್ತೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. ಶೇ. 4ರಷ್ಟು ತುಟ್ಟಿಭತ್ಯೆ ಏರಿಕೆಯ ಬಳಿಕ, ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವು ಶೇ. 50ರಷ್ಟು ಏರಿಕೆಯಾಗಲಿದೆ.
ಅಂದಹಾಗೆ ಅಂದ್ಹಾಗೆ, ಅಕ್ಟೋಬರ್ 2023 ರಲ್ಲಿ ಕೊನೆಯ ಬಾರಿಗೆ ಡಿಎಯನ್ನ ಶೇಕಡಾ 4 ರಿಂದ 46ಕ್ಕೆ ಹೆಚ್ಚಿಸಲಾಯಿತು. ಪ್ರಸ್ತುತ ಹಣದುಬ್ಬರ ದರವನ್ನ ಗಮನಿಸಿದರೆ, ಮುಂದಿನ ಡಿಎ ಹೆಚ್ಚಳವು ಶೇಕಡಾ 4 ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ.