Protection of banana: ಮನೆಗೆ ತಂದು ಬಾಳೆಹಣ್ಣು ಬೇಗ ಹಾಳಾಗುತ್ತಾ?! ಹಾಗಿದ್ರೆ ಈ ಟ್ರಿಕ್ಸ್ ಯೂಸ್ ಮಾಡಿ, ಎಷ್ಟು ದಿನ ಬೇಕಾದರೂ ಇಡಿ
Protection of banana: ಬಾಳೆಹಣ್ಣು ಹೆಚ್ಚಿನ ಪ್ರೋಟೀನ್ ಹೊಂದಿರುವ ಹಣ್ಣುಗಳಲ್ಲಿ ಒಂದು. ವರ್ಷವಿಡೀ ಲಭ್ಯವಾಗೋ ಈ ಹಣ್ಣನ್ನು ಡಯಟ್ ಫುಡ್ ಆಗಿಯೂ ಬಳಸುತ್ತಾರೆ. ಅಲ್ಲದೆ ಊಟವಾದ ಮೇಲೆ ಒಂದು ಬಾಳೆ ಹಣ್ಣು(protection of Banana) ತಿಂದರೇನೇ ಅದು ಪೂರ್ತಿ ಅನಿಸುತ್ತದೆ ಎಂಬ ಮಾತೂ ಇದೆ. ಆದರೆ ಸಮಸ್ಯೆ ಏನಪ್ಪಾ ಅಂದರೆ ಮನೆಗೆ ತಂದ ಬಾಳೆ ಹಣ್ಣು ಬೇಗ ಕೊಳೆತುಹೋಗುತ್ತೆ. ಎಷ್ಟು ಜೋಪಾನ ಮಾಡಿದರೂ ಹಾಳಾಗಿಬಿಡುತ್ತೆ ಅನ್ನೋದು. ಹಾಗಿದ್ರೆ ಚಿಂತೆ ಬಿಡಿ ಈ ವಿಧಾನ ಬಳಸಿ ಸಾಕು.
ಇದನ್ನೂ ಓದಿ: Pension Rules: ಗಂಡ ಸಾವನ್ನಪ್ಪಿದ್ದರೆ, ಹೆಂಡತಿಗೆ ಪಿಂಚಣಿ ಸಿಗುತ್ತದೆ??? ಯಾವಾಗ ಸಿಗಬಹುದು.! ಇಲ್ಲಿದೆ ಸಂಪೂರ್ಣ ಮಾಹಿತಿ.
https://x.com/Rainmaker1973/status/1757728896366387611?t=iK7OqVz4rfsEB-Jom9xW2A&s=08
ಅಂದಹಾಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾಳೆಹಣ್ಣನ್ನು ಕೊಳೆಯದಂತೆ ಇಡುವ ವಿಧಾನದ ವಿಡಿಯೋವೊಂದು ವೈರಲ್ ಆಗಿದೆ. ಅದೇನೆಂದರೆ ಮಸ್ಸಿಮೋ ಎನ್ನುವ ಹೆಸರಿನ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಬಾಳೆಹಣ್ಣಿನ ಕಾಂಡವನ್ನು ಕಾಗದ ಅಥವಾ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಇಡುವುದರಿಂದ ಹಣ್ಣು ಬೇಗ ಕೆಡುವುದಿಲ್ಲ. ವಿಡಿಯೋದ ಪ್ರಾರಂಭದಲ್ಲಿ ಕಪ್ಪಾದ ಬಾಳೆಹಣ್ಣನ್ನು ಕಾಣಬಹುದು. ಆ ಬಳಿಕ ಫ್ರೆಶ್ ಇರುವ ಬಾಳೆಹಣ್ಣನ್ನು ತೋರಿಸಲಾಗಿದ್ದು, ಅದರ ಕಾಂಡವನ್ನು ಪ್ಲಾಸ್ಟಿಕ್ ನಿಂದ ಸುತ್ತಿ ಇಡಲಾಗಿದೆ.ಈ ವಿಡಿಯೋದಲ್ಲಿ ಈ ವಿಧಾನವನ್ನು ತೋರಿಸಲಾಗಿದೆ.
ಇದು ಹೇಗೆ ಸಾಧ್ಯ?
ಬಾಳೆಹಣ್ಣುಗಳು ಹಣ್ಣಾದಾಗ, ಅವುಗಳ ಕಾಂಡಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಅದು ಉಳಿದ ಹಣ್ಣುಗಳಿಗೆ ಹರಡಿ, ಬೇಗನೆ ಹಣ್ಣುಗಳನ್ನು ಕೊಳೆಯುವಂತೆ ಮಾಡುತ್ತದೆ. ಅದಕ್ಕಾಗಿಯೇ ಕಾಂಡದ ಸುತ್ತಲೂ ಪ್ಲಾಸ್ಟಿಕ್ ಹೊದಿಕೆಯನ್ನು ಸುತ್ತುವುದರಿಂದ ಎಥಿಲೀನ್ ಅನಿಲವು ಅಲ್ಲೇ ಇರುತ್ತದೆ. ಹೀಗಾಗಿ ಬಾಳೆಹಣ್ಣುಗಳು ಸುರಕ್ಷಿತವಾಗಿರುತ್ತವೆ ಎಂದು ಬರೆದುಕೊಳ್ಳಲಾಗಿದೆ.