PMJJBY: ತಿಂಗಳಿಗೆ ಕೇವಲ 36 ರೂ.ಕಟ್ಟಿ. 2 ಲಕ್ಷ ವಿಮೆ ಪಡೆಯಿರಿ!!ಮೋದಿ ಸರ್ಕಾರದ ಅದ್ಭುತ ಯೋಜನೆ

 

PMJJBY: ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯು ಒಂದು ವರ್ಷದ ಅವಧಿಗೆ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯನ್ನುಪ್ರತಿ ವರ್ಷ ನವೀಕರಿಸಬೇಕು. ಸಾವಿನ ಸಂದರ್ಭದಲ್ಲಿ ಇದು ಜೀವ ವಿಮೆಯನ್ನು ನೀಡುತ್ತದೆ. ಯಾವುದೇ ಕಾರಣದಿಂದ ವಿಮಾದಾರನು ಮರಣ ಹೊಂದಿದಲ್ಲಿ ಅವರ ನಾಮಿನಿಗೆ ರೂ. 2 ಲಕ್ಷ ಸಿಗಲಿದೆ. ಈ ಪಾಲಿಸಿಯನ್ನು ಪಡೆಯಲು ನಿಮಗೆ ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ.

ಇದನ್ನೂ ಓದಿ: Big Family: 100 ಕೊಠಡಿಗಳು, 167 ಜನರ ಮನೆ, ಇದು ವಿಶ್ವದ ಅತಿದೊಡ್ಡ ಕುಟುಂಬ!

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಒಂದು ವರ್ಷದ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.

ಜನರಿಗೆ ಕಡಿಮೆ ವೆಚ್ಚದಲ್ಲಿ ಜೀವ ವಿಮಾ ರಕ್ಷಣೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಕನಿಷ್ಠ ವಯಸ್ಸು 18 ವರ್ಷಗಳು. ಆದರೆ ಗರಿಷ್ಠ ವಯೋಮಿತಿಯನ್ನು 55 ವರ್ಷಕ್ಕೆ ನಿಗದಿಪಡಿಸಲಾಗಿದೆ.

PMJJBY Premium 36 Plan: ದುಬಾರಿ ವಿಮಾ ಕಂತುಗಳಿಂದ ಕೂಡಿರುವ ವಿಮೆಯನ್ನು ಖರೀದಿಸಲು ಅನೇಕ ಮಂದಿಯ ಕೈಯಲ್ಲಿ ಸಾದ್ಯವಾಗುವುದಿಲ್ಲ. ಕರೋನಾ ಬಳಿಕ ವಿಮಾ ಪ್ರೀಮಿಯಂ ಕೂಡ ಹೆಚ್ಚಾಗಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಕೆಲವು ವಿಮಾ ಪಾಲಿಸಿಗಳನ್ನು ಒದಗಿಸುತ್ತಿದೆ. ಆ ಪೈಕಿ ಮುಖ್ಯವಾಗಿ ಕೇಂದ್ರ ಸರ್ಕಾರ ಪರಿಚಯಿಸಿದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಗೆ ವಾರ್ಷಿಕ ಕಟ್ಟಬೇಕಾದ ಹಣ ಕೇವಲ ರೂ. 436. ಮಾಸಿಕ ನೋಡಿದರೆ ಕೇವಲ 36 ರೂ. ಜನರಿಗೆ ಕಡಿಮೆ ವೆಚ್ಚದಲ್ಲಿ ಜೀವ ವಿಮಾ ರಕ್ಷಣೆಯನ್ನು ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಈ ಯೋಜನೆಯ ಪ್ರಾರಂಭದಲ್ಲಿ ರೂ.330 ಪ್ರೀಮಿಯಂನೊಂದಿಗೆ ಪಾಲಿಸಿಯನ್ನು ನೀಡಲಾಯಿತು. ಆದರೆ ಇದೀಗ ಪ್ರೀಮಿಯಂ ಅನ್ನು ರೂ.436ಕ್ಕೆ ಹೆಚ್ಚಿಸಲಾಗಿದೆ.

ಈ ಯೋಜನೆಯು ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 2 ಲಕ್ಷದವರೆಗೆ ಆರ್ಥಿಕ ನೆರವು ನೀಡುತ್ತದೆ. ಈ ಪಾಲಿಸಿಯನ್ನು ಖರೀದಿಮಾದಲು, ನಿಮ್ಮ ವಯಸ್ಸು ಕನಿಷ್ಠ 18 ವರ್ಷಗಳು ತುಂಬಿರಬೇಕು. ಗರಿಷ್ಠ ವಯೋಮಿತಿಯನ್ನು 55 ವರ್ಷಕ್ಕೆ ಗೊಟ್ಟುಪಡಿಸಲಾಗಿದೆ. ಈ ಯೋಜನೆಗಳು ಜೂನ್ 1 ರಿಂದ ಮೇ 31 ರವರೆಗೆ ಜಾರಿಯಾಗಲಿದ್ದು, ಈ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆ ಮುಚ್ಚುವಿಕೆ ಅಥವಾ ಪ್ರೀಮಿಯಂ ಪಾವತಿಯ ಸಮಯದಲ್ಲಿ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣ ವಿಮೆಯನ್ನು ರದ್ದುಗೊಳಿಸಬಹುದು ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾದ ವಿಚಾರ.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಒಂದು ವರ್ಷದವರೆಗೆ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. ಈ ಯೋಜನೆಯನ್ನು ಪ್ರತಿ ವರ್ಷ ನವೀಕರಿಸಬೇಕು. ಯಾವುದೇ ಕಾರಣದಿಂದ ವಿಮಾದಾರನು ಮರಣ ಹೊಂದಿದಲ್ಲಿ ಅವನ ನಾಮಿನಿಗೆ ರೂ. 2 ಲಕ್ಷ ಸಿಗಲಿದೆ. ಈ ಪಾಲಿಸಿಯನ್ನು ಪಡೆಯಲು ನಿಮಗೆ ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ. ವಿಮಾ ಪಾಲಿಸಿ ಒಪ್ಪಿಗೆ ಪತ್ರದಲ್ಲಿ ಕೆಲವು ರೋಗಗಳನ್ನು ಉಲ್ಲೇಖ ಮಾಡಲಾಗಿದೆ.

ಪ್ರೀಮಿಯಂ ಅನ್ನು ಒಮ್ಮೆಗೇ ಪಾವತಿಸಬೇಕು

ಪಾಲಿಸಿ ವರ್ಷವು ಜೂನ್ 1 ರಿಂದ ಮೇ 31 ರವರೆಗೆ ಇರಲಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯ ವಾರ್ಷಿಕ ಪ್ರೀಮಿಯಂ ಮೊತ್ತ ರೂ.436. ಯಾರಾದರೂ ಮಧ್ಯ ವರ್ಷದ ಯೋಜನೆಗೆ ಸೇರಿದರೆ, ಅರ್ಜಿಯ ದಿನಾಂಕದ ಆಧಾರದ ಮೇಲೆ ಪ್ರೀಮಿಯಂ ಮೊತ್ತವನ್ನು ನಿರ್ಧರ ಮಾಡಲಾಗುತ್ತದೆ.

ಈ ವಿಮೆಯನ್ನು ಯಾರು ತೆಗೆದುಕೊಳ್ಳಬಹುದು?

18 ರಿಂದ 50 ವರ್ಷದೊಳಗಿನ ನಾಗರಿಕರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಒಬ್ಬ ವ್ಯಕ್ತಿಯು ವಿವಿಧ ಬ್ಯಾಂಕ್‌ಗಳು/ಪೋಸ್ಟ್ ಆಫೀಸ್‌ಗಳಲ್ಲಿ ಹಲವಾರು ಖಾತೆಗಳನ್ನು ಹೊಂದಿದ್ದರೆ, ವ್ಯಕ್ತಿಯು ಈ ವಿಮೆಯ ಪ್ರೀಮಿಯಂ ಅನ್ನು ಕೇವಲ ಒಂದು ಖಾತೆಯ ಮೂಲಕ ಪಾವತಿಸಬೇಕಾಗುತ್ತದೆ. ಈ ವಿಮೆ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯ.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ ಆಟೋ ನವೀಕರಣ ಸೌಲಭ್ಯವೂ ಸಹ ಲಭ್ಯವಿದೆ. ಇದು ಮುಂದಿನ ವರ್ಷದ ಪ್ರೀಮಿಯಂ ವಿಮಾ ಅವಧಿ ಮುಗಿದ ತಕ್ಷಣ ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳುತ್ತದೆ. ನೀವು ಸ್ವಯಂಚಾಲಿತ ನವೀಕರಣವನ್ನು ಆಯ್ಕೆ ಮಾಡಿಕೊಂಡಿದ್ದರೆ, ಪ್ರತಿ ವರ್ಷ ಮೇ 25 ಮತ್ತು ಮೇ 31 ರ ನಡುವೆ, ಪಾಲಿಸಿಯು ರೂ. 436 ಅನ್ನು ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಈ ವಿಮಾ ಪ್ರಯೋಜನವು ಪಾಲಿಸಿಯನ್ನು ತೆಗೆದುಕೊಂಡ 45 ದಿನಗಳ ನಂತರ ಮಾತ್ರ ಲಭ್ಯವಿರುತ್ತದೆ. ಆದರೆ ಯಾವುದೇ ಕಾರಣದಿಂದ ಆಕಸ್ಮಿಕ ಮರಣ ಸಂಭವಿಸಿದಲ್ಲಿ 45 ದಿನಗಳ ಷರತ್ತು ಮಾನ್ಯವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

Leave A Reply

Your email address will not be published.