Pension : ಪಿಂಚಣಿ ಪಡೆಯೋ ವಯಸ್ಸು ಇಳಿಕೆ- ಇನ್ಮುಂದೆ 50 ವರ್ಷಕ್ಕೆ ಸಿಗುತ್ತೆ ಪೆನ್ಶನ್ !!

Pension ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಸರ್ಕಾರ ಮುಂದಾಗಿದ್ದು, ವಯಸ್ಸಿನ ಮಿತಿಯನ್ನು 60 ವರ್ಷದಿಂದ 50 ವರ್ಷಗಳಿಗೆ ಇಳಿಸಲು ಚಿಂತನೆ ನಡೆಸಿದೆ.

ಇದನ್ನೂ ಓದಿ: Vijayanagar : ರಟ್ಟಿನ ಬಾಕ್ಸ್ ಒಳಗಿದ್ದ ಕೋಳಿ ಕೊಕ್ಕೊಕ್ಕೋ… ಅಂದೇ ಬಿಡ್ತು !! ಟಿಕೆಟ್ ತಗೋ ಎಂದ ಕಂಡಕ್ಟರ್, ಸೀಟ್ ಕೊಡು ಎಂದ ಮಹಿಳೆ !! ನಂತರ ಆಗಿದ್ದೇ ಬೇರೆ

ಹೌದು, ಕೆಲ ದಿನಗಳ ಹಿಂದಷ್ಟೇ ತಮ್ಮ ಸ್ಥಾನದಿಂದ ಇಳಿಯುವ ಮೊದಲು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರು ತಮ್ಮ ಭಾಷಣದಲ್ಲಿ, ಶೀಘ್ರದಲ್ಲೇ 50 ವರ್ಷ ವಯಸ್ಸನ್ನು ತಲುಪುವ ಜನರಿಗೆ ವೃದ್ಧಾಪ್ಯ ಪಿಂಚಣಿ(Pension)ನೀಡುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದರು.

ಮುಖ್ಯಮಂತ್ರಿಗಳ ಘೋಷಣೆ ಬೆನ್ನಲ್ಲೇ ಸರ್ಕಾರವು ಮಹಿಳೆಯರಿಗೆ ದೊಡ್ಡ ಘೋಷಣೆ ಮಾಡಿದೆ. ಏನೆಂದರೆ ಸರ್ಕಾರವು ಮಹಿಳೆಯರ ಪಿಂಚಣಿ (Pension) ಅರ್ಹತೆಯ ವಯಸ್ಸನ್ನು 60 ವರ್ಷದಿಂದ 50 ವರ್ಷಕ್ಕೆ ಇಳಿಸಲು ನಿರ್ಧರಿಸಿದೆ. ಈ ಕುರಿತು ಪ್ರಸ್ತಾವನೆ ಅಂತಿಮ ಹಂತದಲ್ಲಿದೆ ಎಂದು ಮಹಿಳಾ, ಮಕ್ಕಳ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತಾ ಇಲಾಖೆಯ ಕಾರ್ಯದರ್ಶಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಶೀಘ್ರದಲ್ಲೇ ಕೆಲವು ವಿಶೇಷ ಮಹಿಳೆಯರು 50 ವರ್ಷದಿಂದ ಪಿಂಚಣಿ ಪಡೆಯಲು ಆರಂಭಿಸಲಿದ್ದಾರೆ

Leave A Reply

Your email address will not be published.