Arecanut: ಅಡಿಕೆ ಮರಕ್ಕೆ ಗೊಬ್ಬರ ಹೀಗೆ ಹಾಕಿದರೆ ವ್ಯರ್ಥ! ಸರಿಯಾದ ಕ್ರಮ ಇಲ್ಲಿದೆ.

ಅಡಿಕೆಯು ಒಂದು ವಾಣಿಜ್ಯ ಬೆಳೆಯಾಗಿದೆ. ಅಡಿಕೆಯನ್ನು ಮಗುವಿಂತೆ ಆರೈಕೆ ಮಾಡಿದರೆ 5 ರಿಂದ 6 ವರ್ಷಕ್ಕೆ ಉತ್ತಮ ಫಲಸನ್ನು ನೀಡುತ್ತದೆ. ಅಡಿಕೆಗೆ ನೀರು ಮತ್ತು ಗೊಬ್ಬರ ಇವೆರಡೂ ಬಹಳ ಮುಖ್ಯವಾದವು. ಇವುಗಳನ್ನು ಒದಗಿಸಿದರೆ ಅಡಿಕೆ ಬೇರೇನನ್ನೂ ಕೇಳದು. ಅಡಿಕೆಗೆ ಗೊಬ್ಬರ ವಿತರಣೆಯನ್ನು ಮಾಡುವ ಬಗೆಯನ್ನು ತಿಳಿಯೋಣ.

ಇದನ್ನೂ ಓದಿ: Arecanut Farming: ಮೊಳಕೆಯೊಡೆದ ಅಡಿಕೆ ಸಸಿಗಳ ನಾಟಿ ಹೇಗೆ!! ಹೀಗೆ ಮಾಡಿ ಒಂದು ಸಸಿಯು ಒಣಗುವುದಿಲ್ಲ..

ಅಡಿಕೆಗೆ ವರ್ಷಕ್ಕೆ 4 ಬಾರಿ ಗೊಬ್ಬರವನ್ನು ನೀಡುವುದು ಒಳ್ಳೆಯದು. ಇದರಿಂದ ತೋಟದ ಫಲವತ್ತತೆಯನ್ನು ಹೆಚ್ಚಿಸಬಹುದು. ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಗೊಬ್ಬರವನ್ನು ನೀಡುವುದು ಸೂಕ್ತ. ಬಹುತೇಕ ರೈತರು ಗೊಬ್ಬರವನ್ನು ನೀಡುತ್ತಲೇ ಇರುತ್ತಾರೆ. ಆದರೆ ಅವರ ತೋಟದಲ್ಲಿ ಗಿಡಗಳ ಅಭಿವೃದ್ಧಿ ಕಾಣುವುದಿಲ್ಲ. ಇದಕ್ಕೆ ಕಾರಣ ಏನೆಂದು ನೋಡೋಣ

ನಮ್ಮಲಿ ಬಹುತೇಕ ರೈತರಲ್ಲಿ ಒಂದು ಕೆಟ್ಟ ನಂಬಿಕೆ ಇದೆ. ಗಿಡದ ಬುಡದಲ್ಲಿ ಬೇರುಗಳು ಇರುತ್ತವೆ ಎಂದು ನಂಬಿದ್ದಾರೆ. ಅದು ಕೆಲ ಸಸ್ಯಗಳಲ್ಲಿ ನಿಜ ಕೂಡಾ. ತಾವು ನೀಡುವ ಗೊಬ್ಬರವನ್ನು ಗಿಡದ ಬುಡಕ್ಕೆ ಹಾಕುತ್ತಾರೆ . ಈಗೆ ಮಾಡುವುದರಿಂದ ನೀವು ನೀಡುವ ಗೊಬ್ಬರ ಪ್ರಯೋಜನಕ್ಕೆ ಬಾರದು. ಅಡಿಕೆಯ ವಿಚಾರಕ್ಕೆ ಬಂದಾಗ ರೈತರಲ್ಲಿ ತಪ್ಪು ಮಾಹಿತಿಯಿದೆ.

ಅಡಿಕೆಯನ್ನು ನೈಸರ್ಗಿಕವಾಗಿ ಎರಡು ಬೇರುಗಳನ್ನು ಹೊಂದಿರುತ್ತದೆ. ಮರದ ಬುಡದಲ್ಲಿ ಆಧಾರ ಬೇರು ಎಂಬ ಬೇರುಗಳನ್ನು ಹೊಂದಿರುತ್ತವೆ. ಈ ಬೇರುಗಳು ಮರವನ್ನು ಗಟ್ಟಿಯಾಗಿ ಹಿದಿದು ನಿಲ್ಲಿಸುವಲ್ಲಿ, ಗಾಳಿಗೆ ಬೀಳದಂತೆ ಬಲಗೊಳಿಸುತ್ತದೆ. ಇವುಗಳ ಕೆಲಸ ಕೇವಲ ಮರಕ್ಕೆ ಆಧಾರ ವಾಗಿರುವುದು ಅಷ್ಟೇ. ಇವುಗಳು ಭೂಮಿಯಿಂದ ಯಾವುದೇ ಆಹಾರ ತೆಗೆದು ಕೊಡುವುದಿಲ್ಲ.

ಆಹಾರ ಬೇರುಗಳು ಎಂಬ ಬೇರುಗಳಿರುತ್ತವೆ. ಇವುಗಳು ಗಿಡದ ಅವಿಭಾಜ್ಯ ಅಂಗ. ಇವುಗಳಲ್ಲದೆ ಅಡಿಕೆ ಗಿಡ ಬದುಕಲು ಸಾಧ್ಯವಿಲ್ಲ. ಇವು ಅಡಿಕೆ ಮರದಿಂದ ಎರಡು ಅಡಿ ದೂರದಲ್ಲಿ ಹರಡಿಕೊಂಡಿರುತ್ತವೆ. ಗಿಡದ ವಯಸ್ಸಿನ ಮೇಲೆ ಗಿಡ ಮತ್ತು ಬೇರುಗಳ ನಡುವಿನ ಅಂತರ ನಿಗದಿಯಾಗುತ್ತದೆ.

ನಾವು ಅಡಿಕೆ ಮರಕ್ಕೆ ಏನೇ ಆಹಾರ ನೀಡಿದರು ಅದನ್ನು ಕನಿಷ್ಠ ಎರಡು ಅಡಿಗಳ ದೂರದಲ್ಲಿ ನೀಡಬೇಕು. ಆಗ ಮಾತ್ರ ಅಡಿಕೆ ಗಿಡ ನೇರವಾಗಿ ಗೊಬ್ಬರವನ್ನು ಪಡೆಯುತ್ತದೆ. ನಾವು ಮತ್ತೊಂದು ಅಂಶವನ್ನು ಗಮನಿಸಬೇಕು. ನಾವು ಮೊದಲು ಮಣ್ಣಿಗೆ ಆಹಾರವನ್ನು ನೀಡಬೇಕು. ಮಣ್ಣು ಗಿಡಗಳಿಗೆ ಆಹಾರ ನೀಡುತ್ತದೆ. ಅಂದರೆ ನಾವು ನೀಡಿದ ಆಹಾರ ಮೊದಲು ಮಣ್ಣು ತಿಂದು ನಂತರ ಗಿಡಗಳಿಗೆ ಲವಣ ರೂಪದಲ್ಲಿಕೊಡುತ್ತದೆ .

ಈ ಕಾರ್ಯ ನಡೆಯಲು ಒಂದಷ್ಟು ಸಮಯ ತೆಗೆದುಕೊಳ್ಳುತ್ತದೆ. ಆಗಾಗಿ ರೈತರು ಅಡಿಕೆ ಮರದ ಬುಡಕ್ಕೆ ಗೊಬ್ಬರ ಹಾಕಬೇಡಿ. ದೂರಕ್ಕೆ ಹಾಕಿ. ಬುಡಕ್ಕೆ ಹಾಕಿದರೆ ಬುಡದಲ್ಲಿರುವ ಆಧಾರ ಬೇರು ಮೇಲಕ್ಕೆ ತೇಲಿ ಗಿಡ ಸೊರಗುತ್ತದೆ. ಈ ಕಾರಣಕ್ಕಾಗಿ ಗೊಬ್ಬರವನ್ನು ದೂರಕ್ಕೆ ಹಾಕಿ.

Leave A Reply

Your email address will not be published.