BJP: ಘಟಾನುಘಟಿಗಳನ್ನು ಬಿಟ್ಟು ಬಿಜೆಪಿ ಹೈಕಮಾಂಡ್ ನಾರಾಯಣ ಭಾಂಡಗೆ ರಾಜ್ಯಸಭೆ ಟಿಕೆಟ್ ನೀಡಿದ್ಯಾಕೆ ?! ಯಾರಿವರು ?

BJP: ರಾಜ್ಯಸಭಾ ಚುನಾವಣೆಗೆ ಬಿಜೆಪಿ(BJP) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಿಂದ ಕುತೂಹಲ ಎಂಬಂತೆ ಬಾಗಲಕೋಟೆಯ ನಾರಾಯಣ ಕೃಷ್ಣಸಾ ಭಾಂಡ(Narayana Krishnasa bhanda) ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದೆ. ಪಕ್ಷದಲ್ಲಿ ಅಷ್ಟು ಘಟಾನುಘಟಿ ನಾಯಕರಿದ್ದರೂ ಇದುವರೆಗೂ ಯಾರೂ ಹೆಸರೇ ಕೇಳದಿರೋ ವ್ಯಕ್ತಿಗೆ ಹೈಕಮಾಂಡ್ ಟಿಕೆಟ್ ನೀಡಿದ್ದು ಭಾರೀ ಅಚ್ಚರಿ ಮೂಡಿಸಿದೆ. ಹಾಗಿದ್ರೆ ಯಾರು ಈ ನಾರಾಯಣ ಕೃಷ್ಣಸಾ ಭಾಂಡ ?

 

ಹೌದು, ರಾಜ್ಯಸಭಾ ಟಿಕೆಟ್ಪ( Rajyasabha ticket) ಡೆಯಲು ಬಿಜೆಪಿ ಪಾಳಯದಲ್ಲಿ ಸೋಮಣ್ಣ ಆದಿಯಾಗಿ ಅನೇಕ ನಾಯಕರು ತುದಿಗಾಲಲ್ಲಿ ನಿಂತಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಯಾವುದೇ ಲಾಬಿಗೆ ಮಣಿಯದೆ ಕರ್ನಾಟಕದಿಂದ ನಾರಾಯಣಸಾ ಕೃಷ್ಣಸಾ ಭಾಂಡಗೆ (Narayansa Krishnasa Bhandage) ಅವರಿಗೆ ಟಿಕೆಟ್‌ ನೀಡಿದೆ. ಹಲವರಲ್ಲಿ ಎದ್ದಿರುವ ಪ್ರಶ್ನೆಯೇ ಯಾರು ಈ ನಾರಾಯಣಸಾ ಕೃಷ್ಣಸಾ ಭಾಂಡಗೆ ಎಂಬುದು.

 

ಯಾರು ಈ ನಾರಾಯಣಸಾ ಕೃಷ್ಣಸಾ ಭಾಂಡಗೆ?

ನಾರಾಯಣಸಾ ಕೃಷ್ಣಸಾ ಭಾಂಡಗೆ ಅವರು ಮೂಲತಃ ಉತ್ತರ ಕರ್ನಾಟಕದ ಬಾಗಲಕೋಟೆಯವರಾಗಿದ್ದಾರೆ. ಈ ಹಿಂದೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ನಾರಾಯಣ ಭಾಂಡಗೆ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದ ಎಸ್‌ಎಸ್‌ಕೆ ಸಮಾಜದ ಮುಖಂಡರೂ ಆಗಿರುವ ಇವರು ಬಿಜೆಪಿಯ ಒಬಿಸಿ ಘಟಕದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಒಂದು ಬಾರಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ರಾಜ್ಯ ಕಾರ್ಯದರ್ಶಿಯಾಗಿಯೂ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದಾರೆ. 40 ವರ್ಷಗಳಿಂದ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿದ್ದಾರೆ. 1973ರಲ್ಲಿ ನಾರಾಯಣಸಾ ಭಾಂಡಗೆ ಜನಸಂಘ ಸೇರಿದ್ದರು. 1990 ದಶಕದಲ್ಲಿ ಅಯೋಧ್ಯೆ ಮತ್ತು ಈದ್ಗಾ ಮೈದಾನ ಹೋರಾಟದಲ್ಲಿ ಇವರು ಭಾಗವಹಿಸಿದ್ದರು. ಒಟ್ಟಿನಲ್ಲಿ ಕಟ್ಟಾ ಹಿಂದುತ್ವವಾದಿಗೆ ಬಿಜೆಪಿ ರಾಜ್ಯಸಭಾ ಟಿಕೆಟ್(Rajyasabha Ticket) ಒಲಿದಿದೆ.

ಇದನ್ನೂ ಓದಿ :Koppala ನವ ದಂಪತಿಗಳ ಮಧ್ಯೆ ಜಗಳ- ಕೋಪಗೊಂಡ ಗಂಡನನ್ನು ಹುಡುಕಿಕೊಂಡು ಬಂದ 21ರ ಯುವತಿ ಮೇಲೆ ಗ್ಯಾಂಗ್ ರೇಪ್!!

 

Leave A Reply

Your email address will not be published.