Assembly: ವಿಧಾನಸಭೆಯಲ್ಲಿ ಬಿಜೆಪಿಯಿಂದ ʼಜೈ ಶ್ರೀರಾಮ್‌ʼ, ಕಾಂಗ್ರೆಸ್‌ನಿಂದ ʼಜೈ ಭೀಮ್‌ʼ ಘೋಷಣೆ

Bengaluru: ವಿಧಾನಸಭೆ ಅಧಿವೇಶದಲ್ಲಿ ಇಂದು ಬಿಜೆಪಿ ಜೈಶ್ರೀರಾಮ್‌ ಘೋಷಣೆ ಕೂಗಿದರೆ ಕಾಂಗ್ರೆಸ್‌ನಿಂದ ಜೈ ಭೀಮ್‌ ಎಂದು ಘೋಷಣೆ ಕೂಗಿರುವ ಘಟನೆ ನಡೆದಿದೆ.

ಕೇಸರಿ ಶಾಲು ಧರಿಸಿ ಬಂದ ಬಿಜೆಪಿ ನಾಯಕರು ಸದನದಲ್ಲಿ ಜೈ ಶ್ರೀ ರಾಮ್‌ ಘೋಷಣೆ ಕೂಗಿದ್ದು, ಪ್ರತಿಯಾಗಿ ಕಾಂಗ್ರೆಸ್‌ ನಾಯಕರು ಜೈ ಭೀಮ್‌ ಘೋಷಣೆ ಮಾಡಿದ್ದಾರೆ. ಜೆಡಿಎಸ್‌ನವರು ಯಾವುದೇ ಘೋಷಣೆ ಕೂಗದೇ ತಟಸ್ಥರಾಗಿ ಕುಳಿತಿದ್ದರು. ಬೈರತಿ ಸುರೇಶ್‌ ಅವರು ಜೈ ಸಂವಿಧಾನ ಎಂದು ಘೋಷಣೆ ಕೂಗಿದರೆ, ಸಂತೋಷ್‌ ಲಾಡ್‌ ಜೈ ಭೀಮ್‌, ಜೈ ಬಸವಣ್ಣ ಎಂದು ಘೋಷಣೆ ಕೂಗಿದರು.

ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರು ಗಮನ ಸೆಳೆದಿದೆ. ರಾಜ್ಯ ವಿಧಾನಮಂಡಲ ಬಜೆಟ್‌ ಅಧಿವೇಶನ ಆರಂಭವಾಗಿದ್ದು ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಭಾಷಣ ಮಾಡಿದ್ದಾರೆ.

ಇದನ್ನೂ ಓದಿ :Kerala “ದೇಶವನ್ನು ರಕ್ಷಿಸಿದ ಗೋಡ್ಸ್‌ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಕಮೆಂಟ್‌ ಹಾಕಿದ ಪ್ರಾಧ್ಯಾಪಕಿ, ಮುಂದೇನಾಯ್ತು?

Leave A Reply

Your email address will not be published.