Cotton Candy: ಬಾಂಬೆ ಮಿಠಾಯಿ ಮಾರಾಟ ನಿಷೇಧ-ಸರಕಾರ ಆದೇಶ

Cotton Candy: ಬಾಂಬೆ ಮಿಠಾಯಿ ಯಲ್ಲಿ ವಿಷಕಾರಿ ಅಂಶ ಪತ್ತೆಯಾದ್ದರಿಂದ ಪದುಚೇರಿಯಲ್ಲಿ ಬಾಂಬೆ ಮಿಠಾಯಿ (Cotton Candy)ಯನ್ನು ನಿಷೇಧ ಮಾಡಲಾಗಿದೆ. ಇದಕ್ಕೆ ಸೂಕ್ತ ಪ್ರಮಾಣ ಪತ್ರವನ್ನು ಪಡೆದು ಮಾರಾಟ ಮಾಡಬಹುದು ಎಂದು ಸರಕಾರ ತಿಳಿಸಿದೆ.

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಬಾಂಬೆ ಮಿಠಾಯಿ ಎಲ್ಲರಿಗೂ ಇಷ್ಟವಾಗುವಂತದ್ದು. ಆದರೆ ಅದರಲ್ಲಿ ಆರೋಗ್ಯಕ್ಕೆ ಹಾನಿಕರ­ವಾದ ರೊಡಮೈನ್‌-ಬಿ ಎಂಬ ವಿಷಕಾರಿ ಅಂಶ ಪತ್ತೆಯಾಗಿ­ರುವುದಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ವರದಿ ನೀಡಿದ್ದಾರೆ. ಈ ಕಾರಣದಿಂದ ಇನ್ನು ಮುಂದೆ ಪದುಚೇರಿಯಲ್ಲಿ ಬಾಂಬೆ ಮಿಠಾಯಿಯನ್ನು ನಿಷೇದಿಸಲಾಗುವುದು ಎಂದು ಲೆಫ್ಟಿನೆಂಟ್‌ ಗವರ್ನರ್‌ ತಮಿಳ್‌ಸಾಯಿ ಸುಂದರರಾಜನ್‌ ಹೇಳಿದ್ದಾರೆ.

ಆಹಾರ ಸುರಕ್ಷತಾ ಇಲಾಖೆಯಿಂದ ಪ್ರಮಾಣ ಪತ್ರವನ್ನು ಪಡೆದು ಮಾರಾಟ ಮಾಡಬಹುದು. ಆಹಾರ ಸುರಕ್ಷತಾ ಪ್ರಮಾಣ ಪತ್ರ ಎಷ್ಟು ಬೇಗ ಸಿಗುತ್ತದೋ ಅಷ್ಟು ಬೇಗ ವ್ಯಾಪಾರ ಆರಂಭಿಸಬಹುದಾಗಿದೆ. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶವನ್ನು ಹೊರಡಿಸಲಾಗಿದೆ. ಮಕ್ಕಳಿಗೆ ಬಣ್ಣಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ನೀಡಬಾರದು ಎಂದು ಜನರು ತಿಳಿದಿರಬೇಕು. ರೋಡಮೈನ್ ಬಿ, ಸಾಮಾನ್ಯವಾಗಿ RhB ಎಂದು ಸಂಕ್ಷೇಪಿಸಲಾಗಿದೆ, ಇದು ರಾಸಾಯನಿಕ ಸಂಯುಕ್ತವಾಗಿದ್ದು ಅದು ಬಣ್ಣವಾಗಿ ಕಾರ್ಯನಿರ್ವಹಿಸುತ್ತದೆ.

ಈ ಅಂಶ ಮಾನವರಿಗೆ ವಿಷಕಾರಿಯಾಗಿದೆ ಮತ್ತು ಸೇವಿಸಿದರೆ ಜೀವಕೋಶಗಳು ಮತ್ತು ಅಂಗಾಂಶಗಳ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡಬಹುದು. ಆಹಾರದೊಂದಿಗೆ ಬೆರೆಸಿದಾಗ ಇದು ಅಪಾಯಕಾರಿಯಾಗಿದೆ, ಕಾಲಾನಂತರದಲ್ಲಿ ಯಕೃತ್ತು ಹಾನಿ, ಗೆಡ್ಡೆಗಳು ಮತ್ತು ಕ್ಯಾನ್ಸರ್ಗೆ ಕಾರಣವಾಗುತ್ತದೆ.

 

ಸುಮಾರು ಒಂದೆರಡು ದಶಕಗಳ ಹಿಂದೆ ಎಲ್ಲಾ ಊರುಗಳಲ್ಲಿ ಕಾಟನ್ ಕ್ಯಾಂಡಿ ತುಂಬಾ ಪ್ರಸಿದ್ಧಿ ಪಡೆದಿತ್ತು, ಜತೆಗೆ ಅದರ ಬೆಲೆಯೂ ಕಡಿಮೆ ಇತ್ತು ಜತೆಗೆ ರುಚಿಯೂ ಇದ್ದ ಕಾರಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತಿನ್ನುತ್ತಿದ್ದರು. ಸೈಕಲ್ ಏರಿ ಊರೂರು ಸುತ್ತಿ ಕಾಟನ್ ಕ್ಯಾಂಡಿ ಮಾರಾಟ ಮಾಡಿ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದವು.

 

ಹಲ್ಲಿನ ಬಣ್ಣವು ಗುಲಾಬಿ ಬಣ್ಣಕ್ಕೆ ತಿರುಗಿದ್ರೂ ಬಾಂಬೆ ಮಿಠಾಯಿ ತಿನ್ನುವುದು ಮಾತ್ರ ಮಕ್ಕಳು ಬಿಡುತ್ತಿರಲಿಲ್ಲ. ಇದೀಗ ಈ ಮಿಠಾಯಿಯನ್ನು ಮಕ್ಕಳಿಗೆ ಕೊಡಬೇಕೋ ಬೇಡವೋ ಎನ್ನುವ ಆತಂಕ ಶುರುವಾಗಿದೆ.

Leave A Reply

Your email address will not be published.