Puttur: ಅನ್ಯಕೋಮಿನ ತಂಡದಿಂದ ಮಹಿಳೆ ಮೇಲೆ ಹಲ್ಲೆ

Share the Article

Putturu: ಜಾಗದ ವಿಚಾರವಾಗಿ ಅನ್ಯಕೋಮಿನ ಯುವಕರ ತಂಡವು ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆಯೊಂದು ಕೆದಿಲದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮಾಜಿ ಯೋಧ ಶಿವರಾಮ್‌ ಭಟ್‌ ಎಂಬುವವರ ಪತ್ನಿಯೇ ಹಲ್ಲೆಗೊಳಗಾಗಿದ್ದು.

ಕೆದಿಲ ಗ್ರಾಮ ಪಂಚಾಯತ್‌ ಸದಸ್ಯ ಹಬೀಬ್‌ ಹಾಗೂ ತಂಡವೊಂದು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿದ್ದು, ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಮಹಿಳೆ ಹಾಗೂ ಮನೆಯವರಿಗೆ ಧೈರ್ಯ ತುಂಬಿದ್ದಾಗಿ ಹೇಳಲಾಗಿದೆ.

Leave A Reply