HSRP ನಂಬರ್ ಪ್ಲೇಟ್‌ನಲ್ಲಿ ಏನಿರುತ್ತೆ ಗೊತ್ತೇ? ಸಂಪೂರ್ಣ ವಿವರ ಇಲ್ಲಿದೆ
HSRP: ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಈ ತಿಂಗಳು 17 ರ ಗಡುವು ಇರುವುದು ನಿಮಗೆ ಗೊತ್ತೇ ಇದೆ. ಈ ನೋಂದಣಿ ಮುಂದೂಡುವ ಸಾಧ್ಯತೆ ಕೂಡಾ ಇದೆ. ಇದರ ಬಗ್ಗೆ ಚರ್ಚೆಗಳು ನಡೆಯುತ್ತ ಇದೆ. ಕೇಂದ್ರ ಮೋಟಾರು ವಾಹನ ಕಾಯಿದೆ 1989 ರ ನಿಯಮ 50 ರ ಅಡಿಯಲ್ಲಿ, ವಾಹನಕ್ಕೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ.
ಈ ಕಾಯಿದೆಯಡಿ, ಸಾರಿಗೆಯೇತರ ವಾಹನಗಳು, ಸಾರಿಗೆ ವಾಹನಗಳು, ಬಾಡಿಗೆ-ಕ್ಯಾಬ್ ಸಾರಿಗೆ ವಾಹನಗಳು, ಬ್ಯಾಟರಿ ಚಾಲಿತ ಸಾರಿಗೆ ವಾಹನಗಳು ಸೇರಿದಂತೆ ಒಟ್ಟು ಆರು ವಿಧದ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ಕ್ಯಾಬ್, ಬ್ಯಾಟರಿ ಚಾಲಿತ ಸಾರಿಗೆಯೇತರ ವಾಹನಗಳು ಮತ್ತು ಬ್ಯಾಟರಿ ಚಾಲಿತ ಸಾರಿಗೆ ವಾಹನಗಳನ್ನು ಒಳಗೊಂಡಿದೆ. ಹೊಸ ವಾಹನಗಳ ಹೊರತಾಗಿ ಹಳೆಯ ವಾಹನಗಳಿಗೂ ಅಳವಡಿಸುವುದು ಅಗತ್ಯ.
ನಿಮಗೆ ಗೊತ್ತೇ? ಈ HSRP ನಂಬರ್ ಅಂದರೆ ಏನೆಂದು? ಈ ನಂಬರ್ ಪ್ಲೇಟ್ ಅಳವಡಿಸಿಕೊಳ್ಳು ಹೇಳಿರುವುದು ಯಾಕೆಂದು? ಬನ್ನಿ ತಿಳಿಯೋಣ.
2018 ಕ್ಕಿಂತ ಮೊದಲಿನ ವಾಹನಗಳ ನಂಬರ್ ಪ್ಲೇಟ್ ಬದಲಾವಣೆಗೆ ಮಾಡದಿದ್ದರೆ 500 -1000ರೂ. ದಂಡ ಹಾಕುವ ಸಾಧ್ಯತೆ ಕೂಡಾ ಇದೆ. HSRP ಅಲ್ಯೂಮಿನಿಯಂ ಲೋಹದಿಂದ ತಯಾರಿಸಲಾಗುವುದು. ಈ ಪ್ಲೇಟ್‌ಗಳಲ್ಲಿ ನಂಬರ್‌ಗಳು ಉಬ್ಬಿಕೊಂಡಿರುವ ರೀತಿಯಲ್ಲಿ ಇರುತ್ತದೆ. ಈ ಪ್ಲೇಟ್‌ನ ಮೇಲ್ಭಾಗದ ಎಡ ಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆ ಇರುತ್ತದೆ. 20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗುತ್ತದೆ. ವಾಹನ ಸವಾರರು ಅಧಿಕೃತ ಜಾಲತಾಣದ ಮೂಲಕ HSRP ನಂಬರ್ ಅಳವಡಿಕೆ ಮಾಡಬಹುದು.
ಈ ಫಲಕಗಳನ್ನು ಅಲ್ಯೂಮಿನಿಯಂನಿಂದ ತಯಾರಿಸಲಾಗುತ್ತದೆ. ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಅನ್ನು ಸಹ ಇರಿಸಲಾಗುತ್ತದೆ. ಒಂದು ರೀತಿಯ ಸ್ಟಿಕ್ಕರ್‌ನಂತೆ ಕಾಣುವ ಹೊಲೊಗ್ರಾಮ್ ವಾಹನದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. ಭದ್ರತೆಗಾಗಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ನಲ್ಲಿ ವಿಶಿಷ್ಟವಾದ ಲೇಸರ್ ಕೋಡ್ ಅನ್ನು ಸಹ ಮುದ್ರಿಸಲಾಗುತ್ತದೆ. ಪ್ರತಿ ವಾಹನಕ್ಕೂ ಪ್ರತ್ಯೇಕ ಕೋಡ್ ನೀಡಲಾಗಿದೆ. ಅದನ್ನು ಸುಲಭವಾಗಿ ತೆಗೆಯಲಾಗುವುದಿಲ್ಲ. ಈ ಪ್ಲೇಟ್‌ನ ದೊಡ್ಡ ವೈಶಿಷ್ಟ್ಯವೆಂದರೆ ಅದು ಒಮ್ಮೆ ಒಡೆದರೆ ಮತ್ತೆ ಸರಿಯಾಗುವುದಿಲ್ಲ. ಯಾರೂ ಕಾಪಿ ಮಾಡಿ ನಕಲಿ ತಟ್ಟೆಯನ್ನು ತಯಾರಿಸಬಾರದೆಂದು ಅತ್ಯಂತ ವಿಭಿನ್ನ ರೀತಿಯಲ್ಲಿ ತಯಾರಿಸಲಾಗಿದೆ. ಈ ಕಾರಣದಿಂದಾಗಿ, ವಾಹನದ ಭದ್ರತೆಯು ಹೆಚ್ಚಾಗುತ್ತದೆ ಮತ್ತು ಅದನ್ನು ಕದಿಯಲು ಅಥವಾ ದುರ್ಬಳಕೆ ಮಾಡಲು ಸಾಧ್ಯವಿಲ್ಲ.