Gruhalakshmi : ಇಂತವರ ಗೃಹಲಕ್ಷ್ಮೀ ಹಣ ಕ್ಯಾನ್ಸಲ್ ಮಾಡಿ ಲೀಸ್ಟ್ ರಿಲೀಸ್ ಮಾಡಿದ ಸರ್ಕಾರ – ನಿಮ್ಮ ಹೆಸರು ಇದೆಯಾ?

Gruhalakshmi: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಲ್ಲಿ ಒಂದಾಗಿರುವ ಗೃಹಲಕ್ಷ್ಮಿ(Gruhalakshmi)ಯೋಜನೆಯ 5 ಕಂತು ಹಣಗಳು ಈಗಾಗಲೇ. ಮಹಿಳೆಯರ ಖಾತೆಗೆ ಜಮಾ ಆಗಿದೆ. ಇದೀಗ ಮುಂದಿನ ಕಂತಿನ ಹಣಕ್ಕಾಗಿ ಎಲ್ಲಾ ಯಜಮಾನಿಯರು ಕಾಯುತ್ತಿದ್ದಾರೆ. ಆದರೆ ಈ ನಡುವೆ ರಾಜ್ಯದ ಯಜಮಾನಿಯರಿಗೆ ಸರ್ಕಾರವು ಒಂದು ಅಘಾತಕಾರಿ ಸುದ್ದಿ ನೀಡಿದ್ದು ಗೃಹಲಕ್ಷ್ಮೀ ದುಡ್ಡು ಪಡೆಯಲು ಅರ್ಹರಲ್ಲದವರ ಲಿಸ್ಟ್ ಒಂದನ್ನು ರಿಲೀಸ್ ಮಾಡಿದೆ.

ಹೌದು, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯುತ್ತಿರುವರಲ್ಲಿ ಕೆಲವರು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಅದೇನೆಂದರೆ ಈಗಾಗಲೇ ಸಾವಿರಾರು ನಕಲಿ ಬಿಪಿಎಲ್‌ ಕಾರ್ಡು (BPL Card) ಗಳನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಇಂತಹ ನಕಲಿ ಕಾರ್ಡುಗಳನ್ನು ನೀಡಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ, ಇದುವರೆಗೆ ಹಣವನ್ನು ಪಡೆದುಕೊಳ್ಳುತ್ತಿರುವ ಜನರಿಗೆ ಸರಕಾರ ಬಿಸಿ ಮುಟ್ಟಿಸಿದೆ.

ಅಂದರೆ ಸರ್ಕಾರವು ಸರಕಾರಿ ನೌಕರರಿಗೆ, ನಾಲ್ಕು ಚಕ್ರದ ವಾಹನ ಹೊಂದಿದವರಿಗೆ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದೆ. ಇದೇ ಮಾನದಂಡವನ್ನೇ ಇದೀಗ ಗೃಹಲಕ್ಷ್ಮೀ ಯೋಜನೆಗೆ ಪ್ರಯೋಗಿಸುತ್ತಿದ್ದು, ಈ ರೀತಿ ನಕಲಿ ಕಾರ್ಡ್ ಬಳಸಿ ಗೃಹಲಕ್ಷ್ಮೀ ಲಾಭ ಪಡೆಯುವವರನ್ನು ಸರ್ಕಾರ ಪತ್ತೆ ಹಚ್ಚಿ ಪಟ್ಟಿ ಬಿಡುಗಡೆ ಮಾಡಿದೆ.

ಅನರ್ಹರ ಪಟ್ಟಿ ಚೆಕ್ ಮಾಡುವುದು ಹೇಗೆ? Gruhalakshmi Cancelled List
• ಹಂತ 1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ತೆರಳಬೇಕು ಅದಕ್ಕಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :
https://ahara.kar.nic.in/Home/EServices
• ಹಂತ 2: ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
ನಂತರ e-Ration Card ಎಂಬ ಆಯ್ಕೆಯಲ್ಲಿ Show cancelled/Suspended ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
• ಹಂತ 3: ನಂತರ ನಿಮಗೆ ಲಿಸ್ಟ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಿಂಗಳು ಹಾಗೂ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ
• ಹಂತ 4: ನಂತರ ನೀವು ಅನರ್ಹರ ಪಟ್ಟಿಯನ್ನು ನೋಡಬಹುದು, ಅದರಲ್ಲಿ ರದ್ದು ಆಗಿರುವುದಕ್ಕೆ ಕೆಲವೊಮ್ಮೆ ಕಾರಣವನ್ನು ಕೂಡ ನೀಡಲಾಗಿರುತ್ತದೆ.

Leave A Reply

Your email address will not be published.