Puttur: ಪುತ್ತೂರಿನಲ್ಲಿ ಅಟೋಮ್ಯಾಟಿಕ್‌ ಕಾರು ಪಲ್ಟಿ

Puttur: ಪುತ್ತೂರು ದರ್ಬೆ ಸಚಿನ್‌ ಟ್ರೇಡರ್ಸ್‌ ಎದುರು ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಗೊಂಡ ಘಟನೆಯೊಂದು ಇಂದು (ಫೆ.11) ರಂದು ಮಧ್ಯಾಹ್ನ ನಡೆದಿದೆ. ಬ್ರೇಕ್‌ ಎಂದು ಎಕ್ಸಲೇಟರ್‌ ತುಳಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

 

ಟಯರ್‌ ಅಂಗಡಿಯ ಮಾಲಕ ಸುರೇಶ್‌ ಚಂದ್ರ ರೈ ಅವರ KA21 Z8814 ನೋಂದಣಿಯ ಟೊಯೊಟಾ ಹೈರೈಡರ್‌ ಕಾರು ದನ್ವಂತರಿ ಆಸ್ಪತ್ರೆಗೆ ಸಮೀಪ ಪಲ್ಟಿಯಾಗಿದೆ.

ಈ ಅಪಘಾತ ನಿದ್ದೆ ಮತ್ತಿನಲ್ಲಿ ನಡೆದಿದೆ ಎಂದು ವರದಿಯಗಿದ್ದು. ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಘಟನಾ ಸ್ಥಳದಿಂದ ಮನೆಗೆ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋದರೆಂದು ವರದಿಯಾಗಿದೆ.

Leave A Reply

Your email address will not be published.