SSC GD Constable Exam: ಪೊಲೀಸ್‌ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ, ಹಿಂದಿ-ಇಂಗ್ಲಿಷ್ ಜೊತೆಗೆ ಕನ್ನಡ ಸೇರಿ ಈ 13 ಭಾಷೆಗಳಲ್ಲಿ ಪರೀಕ್ಷೆ

ಗೃಹ ಸಚಿವಾಲಯ ಮಾಹಿತಿ

Share the Article

SSC GD Constable Exam : ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಾನ್‌ಸ್ಟೆಬಲ್ ಜಿಡಿ ನೇಮಕಾತಿ ಪರೀಕ್ಷೆಯನ್ನು ಫೆಬ್ರವರಿ 20 ರಿಂದ ನಡೆಸಲಾಗುವುದು. ಪರೀಕ್ಷೆಯನ್ನು ಫೆ.20-29 (25 ಇಲ್ಲ) ಮಾರ್ಚ್‌ 1, 5, 6, 7, 11 ಮತ್ತು 12 ರಂದು ನಡೆಸಲಾಗುವುದು. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ಕಾನ್‌ಸ್ಟೆಬಲ್‌ಗಳ ನೇಮಕಾತಿಗಾಗಿ ಕಾನ್ಸ್‌ಟೇಬಲ್ (ಜಿಡಿ) ಪರೀಕ್ಷೆಯನ್ನು(SSC GD Constable Exam) ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ 13 ಪ್ರಾದೇಶಿಕ ಭಾಷೆಗಳಲ್ಲಿ ಮೊದಲ ಬಾರಿಗೆ ನಡೆಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

ಎಸ್‌ಎಸ್‌ಸಿ ಕಾನ್ಸ್‌ಟೇಬಲ್ ಜಿಡಿ ನೇಮಕಾತಿ ಪರೀಕ್ಷೆ ಫೆಬ್ರವರಿ 20 ರಿಂದ ದೇಶಾದ್ಯಂತ 128 ನಗರಗಳಲ್ಲಿ ನಡೆಯಲಿದೆ. ಎಸ್‌ಎಸ್‌ಸಿ ಕಾನ್ಸ್‌ಟೇಬಲ್ ಜಿಡಿ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಒರಿಯಾ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಸಿದ್ಧಪಡಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ. ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ. ಮಾಡಲಾಗುತ್ತದೆ.

Leave A Reply

Your email address will not be published.