EPFO: PF ಹೊಂದಿದವರಿಗೆ ಸಿಹಿ ಸುದ್ದಿ! EPFO ಬಡ್ಡಿದರ ಹೆಚ್ಚಳ!!

PF Rate Of Interest Hike: ಇಪಿಎಫ್‌ಒ 2024 ರ ಹಣಕಾಸು ವರ್ಷದಲ್ಲಿ ಕೋಟ್ಯಂತರ ಉದ್ಯೋಗಿಗಳಿಗೆ ಬಡ್ಡಿ ದರವನ್ನು ಹೆಚ್ಚಿಸಿದೆ. ಪಿಟಿಐ ವರದಿಯ ಪ್ರಕಾರ, ಈಗ ಉದ್ಯೋಗಿಗಳಿಗೆ ಮೊದಲಿಗಿಂತಲೂ ಶೇ.0.10 ರಷ್ಟು ಹೆಚ್ಚಿನ ಬಡ್ಡಿ ಸಿಗಲಿದೆ. ಹೀಗಾಗಿ ನಂತರದ ದಿನಗಳಲ್ಲಿ ನಿಮ್ಮ ಪಿಎಫ್ ಖಾತೆಗೆ 8.25% ಬಡ್ಡಿ ದರವನ್ನು ನೀಡಲಾಗುತ್ತದೆ ಎಂದು ವರದಿಯು ತಿಳಿಸಿದೆ.

2023 ರ ಮಾರ್ಚ್ 28ರಂದು, ಇಪಿಎಫ್‌ಒ 2022-23 ರ ಉದ್ಯೋಗಿಗಳ ಭವಿಷ್ಯ ನಿಧಿಯ ಸಲುವಾಗಿ ಖಾತೆಗಳಿಗೆ ಶೇ. 8.15 ರ ಬಡ್ಡಿ ದರವನ್ನು ಘೋಷಣೆ ಮಾಡಿತ್ತು. ಆದರೆ EPFO ಆರ್ಥಿಕ ವರ್ಷ 2022ರಲ್ಲಿ 8.10% ಬಡ್ಡಿಯನ್ನು ಸರ್ಕಾರ ನೀಡಿತ್ತು.

CBT ಬಡ್ಡಿಯನ್ನು ಹೆಚ್ಚಿಸಲು ನಿರ್ಧಾರ

ಇಪಿಎಫ್‌ಒದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) ಶನಿವಾರ ನಡೆದ ಸಭೆಯಲ್ಲಿ 2023-24 ಕ್ಕೆ ಇಪಿಎಫ್‌ಗೆ ಶೇಕಡಾ 8.25 ಬಡ್ಡಿದರವನ್ನು ನೀಡುವುದಾಗಿ ತಿಳಿಸಿದೆ. CBT ಹೇಳಿಕೆಯ ನಂತರ, 2023-24ರ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು ಅನುಮೋದಿಸಲು ಹಣಕಾಸು ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ.

EPFO ಬಡ್ಡಿಯನ್ನು ಕಡಿಮೆ ಮಾಡಿತ್ತು

ಮಾರ್ಚ್ 2022 ರಲ್ಲಿ, EPFO ಸುಮಾರು 7 ಕೋಟಿ ಉದ್ಯೋಗಿಗಳಿಗೆ 2021-22 ರ EPF ಮೇಲಿರುವ ಬಡ್ಡಿಯನ್ನು 4 ದಶಕಗಳ ಕನಿಷ್ಠ 8.1 ಶೇ ರಷ್ಟು ಇಳಿಕೆ ಮಾಡಿತು. ಇದು 2020-21 ರಲ್ಲಿ 8.5 ಶೇ. ರಷ್ಟು ಆಗಿತ್ತು. ಬಡ್ಡಿ ಕಡಿತದ ನಂತರ, ಇಪಿಎಫ್ ಬಡ್ಡಿ 1977-78 ರಿಂದ ಕಡಿಮೆಯಾಗುತ್ತ ಸಾಗಿದೆ. 1977-78ರ ಆರ್ಥಿಕ ವರ್ಷದಲ್ಲಿ ಇಪಿಎಫ್ ಬಡ್ಡಿ ದರ ಶೇ.8ರಷ್ಟಿತ್ತು. 2020-21ರ EPF ಠೇವಣಿಗಳ ಮೇಲಿನ 8.5 ಪ್ರತಿಶತ ಬಡ್ಡಿ ದರವನ್ನು CBT ಮಾರ್ಚ್ 2021ರಲ್ಲಿ ನಿಗದಿಪಡಿಸಿದೆ.

ಈ ವರ್ಷವೂ ಬಡ್ಡಿಯನ್ನು ಕಡಿಮೆ ಮಾಡಲಾಗಿದೆ

2020 ಮಾರ್ಚ್ ನಲ್ಲಿ, ಇಪಿಎಫ್‌ಒ 2019-20 ರ ಭವಿಷ್ಯ ನಿಧಿ ಠೇವಣಿಯ ಮೇಲಿನ ಬಡ್ಡಿ ದರವನ್ನು 7 ವರ್ಷಗಳ ಕನಿಷ್ಠ 8.5 ಪ್ರತಿಶತಕ್ಕೆ ಇಳಿಕೆ ಮಾಡಲಾಗಿದೆ. ಇದು 2018-19ಕ್ಕೆ 8.65 ಪ್ರತಿಶತವಾಗಿತ್ತು. ಇಪಿಎಫ್‌ಒ ತನ್ನ ಗ್ರಾಹಕರಿಗೆ 2016-17ರಲ್ಲಿ ಶೇ 8.65 ಮತ್ತು 2017-18ರಲ್ಲಿ ಶೇ 8.55 ಬಡ್ಡಿ ದರವನ್ನು ನೀಡಲಾಯಿತು. ಆದರೆ 2015-16ರಲ್ಲಿ ಬಡ್ಡಿ ದರವು ಸ್ವಲ್ಪ ಹೆಚ್ಚಾಗಿದ್ದು ಶೇ. 8.8 ಆಗಿತ್ತು. ಇದಲ್ಲದೆ, ಇಪಿಎಫ್‌ಒ 2013-14 ಮತ್ತು 2014-15ರಲ್ಲಿ 8.75 ರಷ್ಟು ಬಡ್ಡಿ ದರವನ್ನು ನೀಡಿತು.

ಸುಮಾರು 7 ಕೋಟಿ ಉದ್ಯೋಗಿಗಳ ನೋಂದಾವಣೆ

ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಪಿಎಫ್ ಖಾತೆಗಳ ಮೇಲಿನ ಬಡ್ಡಿದರವನ್ನು ಇಪಿಎಫ್‌ಒ ವರ್ಷಕ್ಕೆ ಒಮ್ಮೆ ಪ್ರಕಟಿಸುತ್ತದೆ ಎಂಬುದನ್ನು ಗಮನಿಸಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಅಡಿಯಲ್ಲಿ ಇಲ್ಲಿಯವರೆಗೆ ಸುಮಾರು 7 ಕೋಟಿ ನೌಕರರು ನೋಂದಣಿಯಾಗಿದ್ದಾರೆ.

ಇಪಿಎಫ್‌ಒ ತನ್ನ ಬಡ್ಡಿ ದರವನ್ನು ನಿಗದಿ ಮಾಡಿದ ಬಳಿಕ ಹಣಕಾಸು ಸಚಿವಾಲಯವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯ ಮೇಲಿನ ಬಡ್ಡಿಯನ್ನು ವರ್ಷಕ್ಕೆ ಒಂದು ಬಾರಿ ಮಾರ್ಚ್ 31 ರಂದು ಪಾವತಿಸಲಾಗುತ್ತದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (EPFO) ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಬಡ್ಡಿ ದರವನ್ನು ಪ್ರಕಟಿಸಿದೆ.

Leave A Reply

Your email address will not be published.