Mangaluru: ಮಂಗಳೂರು ಶಾಲಾ ಶಿಕ್ಷಕಿಯಿಂದ ಅಯೋಧ್ಯಾ, ಶ್ರೀರಾಮನ ತೀವ್ರ ಅವಹೇಳನ, ಆಡಿಯೋ ವೈರಲ್‌; ಗರಂ ಆದ ಪೋಷಕರು, ಹಿಂದೂ ಕಾರ್ಯಕರ್ತರು

Mangaluru: ಅಯೋಧ್ಯಾ ಹಾಗೂ ಶ್ರೀರಾಮನ ಅವಹೇಳನ ಮಾಡಿದ್ದಾರೆಂದು ಶಿಕ್ಷಕಿಯೋರ್ವರ ಮೇಲೆ ಆರೋಪಿಸಿ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ: Arecanut price: ಅಡಿಕೆ ಬೆಲೆಯಲ್ಲಿ ಕುಸಿತ !!

ಶಿಕ್ಷಕಿ ಪ್ರಭಾ ಎಂಬುವವರೇ ಶ್ರೀ ರಾಮ ದೇವರ ಅವಹೇಳನ ಮಾಡಿದವರು. ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಭಾ ಅವರು ಶಿಕ್ಷಕಿಯಾಗಿದ್ದು, ಶ್ರೀರಾಮ ಹಾಗೂ ಅಯೋಧ್ಯೆಗೆ ಅವಮಾನ ಮಾಡಿದ್ದಾರೆಂದು ಪೋಷಕರಿಯೊಬ್ಬರು ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಡಿಯೋ ಜೊತೆಗೆ ಶಾಲೆಗೆ ಮುತ್ತಿಗೆ ಹಾಕಲು ಸಂದೇಶ ನೀಡಲಾಗಿದೆ, ಇಂದು ಮಧ್ಯಾಹ್ನ ಎರಡು ಗಂಟೆಗೆ ಶಾಲಾ ಆವರಣದಲ್ಲಿ ಎಲ್ಲಾ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಪೋಷಕರು ಸೇರಬೇಕೆಂದು ಸಂದೇಶದಲ್ಲಿ ವಿನಂತಿಸಲಾಗಿದೆಯೆಂದು ವರದಿಯಾಗಿದೆ.

ಪ್ರತಿಭಟನೆಗೆ ಪೋಷಕರು, ಕಾರ್ಯಕರ್ತರು ಶಾಲೆಯ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಧ್ಯಾಹ್ನ ಬಳಿಕ ಶಾಲೆ ಬಂದ್‌ ಆಗಿದ್ದರೂ ಕೆಲ ಪೋಷಕರು, ಕಾರ್ಯಕರ್ತರು ಜಮಾವಣೆಯಾಗಿದ್ದು, ಶಿಕ್ಷಕಿ ಪ್ರಭಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Leave A Reply

Your email address will not be published.