Arecanut price: ಅಡಿಕೆ ಬೆಲೆಯಲ್ಲಿ ಕುಸಿತ !!

Arecanut price: ಕಳೆದ ಕೆಲವು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆ ಬೆಲೆ(Nut price) ಇದೀಗ ದಿಢೀರ್ ಎಂದು ಕುಸಿತ ಕಂಡಿದೆ. ₹50,000 ಸನಿಹ ಬಂದಿದ್ದ ರಾಶಿ ಕೆಂಪಡಕೆ ಧಾರಣೆ ಈಗ ₹48,000 ಸನಿಹಕ್ಕೆ ಬಂದಿದ್ದು, ಅಡಿಕೆ ಬೆಳೆಗಾರರಿಗೆ ಮತ್ತೆ ಭಾರೀ ನಿರಾಸೆ ಉಂಟುಮಾಡಿದೆ.

 

ಫೆಬ್ರವರಿ 9ರಂದು ಶುಕ್ರವಾರ ರಾಶಿ ಕೆಂಪಡಕೆ ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ ₹35,000 ಗಳಿಂದ ₹48,000 ದವರೆಗೆ ಮಾರಾಟವಾಗಿದೆ. ಒಂದಷ್ಟು ದಿನ ಏರಿಕೆ ಕಾಣುವ ಅಡಿಕೆ ಧಾರಣೆ, ಮತ್ತೆ ಕುಸಿತ ಕಾಣುತ್ತಿದೆ. ಇದು ರೈತರಲ್ಲಿ ಆತಂಕ ಉಂಟುಮಾಡಿದೆ. ಆದರೆ ಇದು ಹೆಚ್ಚಿನ ಅಂತರದಲ್ಲಿ ಇಲ್ಲದೇ ಇರುವುದು ಸಮಾಧಾನ ಸಂಗತಿ.

 

ಯಾವ ಮಾರುಕಟ್ಟೆಗಳಲ್ಲಿ ಎಷ್ಟಕ್ಕೆ ಮಾರಾಟ?

• ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ ₹32,010 ಆಗಿದ್ದರೆ ಗರಿಷ್ಠ ₹48,098 ಆಗಿತ್ತು.

• ಭದ್ರಾವತಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ ₹33,199 ಇದ್ದರೆ, ಗರಿಷ್ಠ ₹48,319 ಆಗಿತ್ತು.

• ಕೊಪ್ಪ ಮಾರುಕಟ್ಟೆಯಲ್ಲಿ ಅಪಿ ಅಡಿಕೆ ಧಾರಣೆ ಕನಿಷ್ಠ ₹41,366 ಆಗಿದ್ದರೆ ಗರಿಷ್ಠ ಮಾರಾಟ ದರ ₹55,110 ಆಗಿತ್ತು.

• ಸಿದ್ದಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹43,809 ಇದ್ದರೆ ಗರಿಷ್ಠ ಬೆಲೆ ₹47,309 ಆಗಿತ್ತು.

Leave A Reply

Your email address will not be published.