Harish poonja: ತೆರಿಗೆ ಹಂಚಿಕೆ ವಿಚಾರ- ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿವಾದಾತ್ಮಕ ಪೋಸ್ಟ್ ವೈರಲ್ !!

Harish poonja: ರಾಜ್ಯದಲ್ಲಿ ತೆರಿಗೆ ಹಂಚಿಕೆ ವಿಚಾರ ಭಾರೀ ಸದ್ದುಮಾಡುತ್ತಿರುವ ಬೆನ್ನಲ್ಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ(Harish poonja) ಅವರು ಫೇಸ್ ಬುಕ್ ನಲ್ಲಿ ತೆರಿಗೆಯ ಬಗ್ಗೆ ವಿವಾದಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದು ಭಾರೀ ಆಕ್ರೋಶ ಕೇಳಿಬರುತ್ತಿದೆ.

ಇದನ್ನೂ ಓದಿ: Kissan Ashirwad scheme: ರೈತರೇ ಬೇಗ ಈ ದಾಖಲೆಗಳನ್ನು ರೆಡಿ ಮಾಡಿ, ಈ ಯೋಜನೆಯಡಿ ನಿಮಗೆ ಸಿಗಲಿದೆ 25,000 ಹಣ !!

Harish poonja

ಹೌದು, ಕೇಂದ್ರ ತೆರಿಗೆ ಹಂಚಿಕೆ ವಿಚಾರವಾಗಿ ತಾರತಮ್ಯ ಮಾಡುತ್ತಿದೆ ಎಂದು ರಾಜ್ಯ ಸರ್ಕಾರ(State government)ಗಂಭೀರವಾಗಿ ಆರೋಪ ಮಾಡುತ್ತಿದೆ. ಬಿಜೆಪಿ(BJP) ನಾಯಕರು ಕೇಂದ್ರವನ್ನು ಸಮರ್ಥಿಸಿಕೊಳ್ಳುತ್ತಿದೆ. ಆದರೆ ಈ ಬೆನ್ನಲ್ಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ವಿವಾದಾತ್ಮಕ ಪೋಸ್ಟ್ ಹಾಕಿದ್ದು, ಇದು ಕೋಮುಗಲಭೆಗೆ ನಾಂದಿಹಾಡುವಂತಿದೆ ಎನ್ನುತ್ತಿದ್ದಾರೆ ಕೆಲವರು.

ಪೋಸ್ಟ್ ನಲ್ಲಿ ಏನಿದೆ?

‘ನನ್ನ ತೆರಿಗೆ ನನ್ನ ಹಕ್ಕು ಆಂದೋಲನದ ಹಿನ್ನೆಲೆಯಲ್ಲಿ ಅವರು “ಈ ಆರ್ಥಿಕ ವರ್ಷದಿಂದ ಹಿಂದುಗಳು ಕಟ್ಟಿರುವ ತೆರಿಗೆ ಹಣ ಹಿಂದುಗಳ ಅಭಿವೃದ್ಧಿಗೆ ಮಾತ್ರ ಉಪಯೋಗಿಸಬೇಕು. ಹಿಂದೂಗಳು ಕಟ್ಟಿದ ತೆರಿಗೆ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದೂಗಳಿಗೆ ಆಗುವ ಅನ್ಯಾಯ, ಹಿಂದುಗಳ ತೆರಿಗೆ ಹಿಂದುಗಳ ಹಕ್ಕು” ಎಂದು ಬರೆದಿದ್ದಾರೆ. ಫೇಸ್ ಬುಕ್ ನಲ್ಲಿ ಹಲವರು ಇದಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರು ಇಷ್ಟಕ್ಕೆ ಸುಮ್ಮನಾಗದೆ ಮುಂದುವರಿದು ಮತ್ತೊಂದು ಪೋಸ್ಟ್ ಹಾಕಿದ್ದು, ದೇಶದಲ್ಲಿರುವ ತೆರಿಗೆ ಸಂಗ್ರಹದಲ್ಲಿ ಹಿಂದುಗಳ ಪಾಲೆಷ್ಟು ? ಇದರಲ್ಲಿ ಹಿಂದುಗಳ ಅಭಿವೃದ್ಧಿಗೆ ಉಪಯೋಗವಾಗುತ್ತಿರುವುದು ಎಷ್ಟು? ಹಿಂದುಗಳ ತೆರಿಗೆ ಹಿಂದುಗಳಿಗೆ ಸಲ್ಲಬೇಕು’ ಎಂದು ಬರೆದಿದ್ದಾರೆ.

Leave A Reply

Your email address will not be published.