Valentines Day Gift: ಪ್ರೇಮಿಗಳ ದಿನಕ್ಕೆ ಪಿವಿಆರ್-ಐನಾಕ್ಸ್ ಯಿಂದ ಸಿಕ್ತು ಭರ್ಜರಿ ಗಿಫ್ಟ್!!

Share the Article

ಸ್ಯಾಂಡಲ್ ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್ ಸಿನಿಮಾಗಳು ಮತ್ತೆ ರೀ ರಿಲೀಸ್ ಆಗುತ್ತಿವೆ. ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಈ ಚಿತ್ರಗಳನ್ನು ನೋಡಬಹುದಾಗಿದೆ .ಒಂದು ವಾರಗಳ ಕಾಲ ಈ ಆಫರ್ ಇರಲಿದ್ದು ಟಿಕೆಟ್ ದರ ಕೂಡ 112 ರೂಪಾಯಿ ಇಳಿಕೆ ಮಾಡಲಾಗಿದೆ.

ಇದನ್ನೂ ಓದಿ: Dakshina Kannada: ಫೆ.10 ಕ್ಕೆ ಸಚ್ಚೇರಿಪೇಟೆಯಲ್ಲಿ ಸಾರ್ವಜನಿಕ ಶನೈಶ್ಚರ ಪೂಜೆ – ಸಂತ ಸಮಾಗಮ, ಧಾರ್ಮಿಕ ಸಭೆ!!

ಪ್ರೇಮಿಗಳ ದಿನವನ್ನು ಫೆಬ್ರವರಿ 14 ರಂದು ಆಚರಣೆ ಮಾಡಲಾಗುತ್ತದೆ. ಈ ವರ್ಷ ಅದಕ್ಕು ಮೊದಲೇ ಆಚರಣೆ ಶುರುವಾಗಿದೆ. ಈ ಸಂದರ್ಭದಲ್ಲಿ ಅನೇಕ ಪ್ರೇಮ ಕಥೆಗಳ ಸಿನಿಮಾಗಳು ತೆರೆ ಕಾಣುತ್ತಿವೆ. ಪಿವಿಆರ್ ಐನಾಕ್ಸ್ (PVR Inox) ರವರು ಪ್ರೇಮಿಗಳಿಗೆ ಭರ್ಜರಿ ಆಫರ್ ನೀಡುತ್ತಿದ್ದಾರೆ. ಲವ್ ಸ್ಟೋರಿ ಗೆ ಹೆಸರಾದ ಚಿತ್ರಗಳನ್ನು ಮತ್ತೆ ರಿಲೀಸ್ ಮಾಡಲು ಮುಂದಾಗಿದೆ. ಈ ಆಫರ್ ಫೆ.9 ರಿಂದ ಶುರುವಾಗಿ ಫೆ 15 ರ ವರೆಗೆ ಇರಲಿದೆ.

ಐಕಾನಿಕ್ ಸಿನಿಮಾಗಳು ಎನಿಸಿಕೊಡಿರುವ ಹಿಂದಿಯ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ‘, ‘ಯೇ ಜವಾನಿ ಹೇ ದಿವಾನಿ’, ‘ಜಬ್ ವಿ ಮೆಟ್’, ‘ತು ಜೂಟಿ ಮೇ ಮಕ್ಕರ್’ ಹಾಲಿವುಡ್ನ ‘ಟೈಟಾನಿಕ್’ ಸಿನಿಮಾಗಳು ಮತ್ತೆ ರಿಲೀಸ್ ಆಗುತ್ತಿವೆ. ಬುಕ್ ಮೈ ಶೋನಲ್ಲಿ ಬುಕಿಂಗ್ ಓಪನ್ ಆಗಿದೆ.

ಬಾಲಿವುಡ್, ಹಾಲಿವುಡ್ ಹಾಗೂ ಸ್ಥಳೀಯ ಭಾಷೆಯ ಸಿನಿಮಾಗಳು ಈ ಸಾಲಿನಲ್ಲಿ ಇವೆ. ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿ ಭಾರತದ ಪ್ರಮುಖ 70ಕ್ಕೂ ಅಧಿಕ ನಗರಗಳಲ್ಲಿ ನೀವು ಈ ಚಿತ್ರಗಳನ್ನು ನೋಡಬಹುದು. ಮೇಲೆ ಹೆಸರಿಸಿದ ಸಿನಿಮಾಗಳ ಜೊತೆ ‘ವೀರ್ ಜರಾ’, ‘ಮೊಹಾಬತೆ’, ‘ಸೋನು ಕೆ ಟಿಟು ಕಿ ಸ್ವೀಟಿ’, ‘ತು ಜೂಟಿ ಮೇ ಮಕ್ಕರ್’, ‘ಪ್ಯಾರ್ ಕಾ ಪಂಚನಾಮ’, ‘ದೇ ದೇ ಪ್ಯಾರ್’ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ.

ಕನ್ನಡದಲ್ಲಿಯೂ ಸಿನಿಮಾಗಳು ರಿಲೀಸ್ ಆಗುತ್ತಿವೆ. ಸಪ್ತ ಸಾಗರದಾಚೆ ಎಲ್ಲೋ, ಎ ಮತ್ತು ಬಿ ಸಿನಿಮಾಗಳು ರಿಲೀಸ್ ಆಗುತ್ತಿವೆ. ಜೊತೆಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ಬಿಡುಗಡೆ ಆಗ್ತಿದೆ.

ಇನ್ನೂ ತೆಲುಗಿನ ಸೀತಾ ರಾಮಂ ಮರು ಬಿಡುಗಡೆ ಆಗುತ್ತಿದೆ. ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್ ಠಾಕೂರ್ ಕಾಂಬಿನೇಷನ್ನ ಈ ಸಿನಿಮಾ ಹೆಚ್ಚು ಆಸಕ್ತಿ ಹುಟ್ಟಿಸಿದೆ .

ಈ ಎಲ್ಲ ಸಿನಿಮಾಗಳನ್ನು ಕೇವಲ 112 ರೂ ಗಳಿಗೆ ನೋಡಬಹುದು. ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಬೇಕು ಎನ್ನುವವರಿಗೆ ಈ ಆಫರ್.

Leave A Reply