Traffic police: ಬೆಳ್ಳಂಬೆಳಗ್ಗೆಯೇ ವಾಹನ ಮಾಲಿಕರಿಗೆ ಬಿಗ್ ಶಾಕ್ ನೀಡಿದ ಪೋಲೀಸ್ ಇಲಾಖೆ !!

Traffic police : ವಾಹನ ಚಲಾವಣೆ, ಸಂಚಾರ ನಿಯಮಗಳ ಕುರಿತು ಸಾಕಷ್ಟು ಹೊಸ ರೂಲ್ಸ್ ತರುವ ಪೋಲೀಸ್ ಇಲಾಖೆ(Traffic police)ಇದೀಗ ವಾಹನ ಮಾಲಿಕರಿಗೆ, ಸವಾರರಿಗೆ ಬಿಗ್ ಶಾಕ್ ನೀಡಿದೆ.

ಇದನ್ನೂ ಓದಿ: Sumalatha Ambrish: ಸಂಸದೆ ಸುಮಲತಾ ಅಂಬರೀಶ್ ಕಾಂಗ್ರೆಸ್ ಸೇರ್ಪಡೆ ?!

ಹೌದು, ಬೇಕಾಬಿಟ್ಟಿ ಟ್ರಾಫಿಕ್ ಉಲ್ಲಂಘನೆ ಮಾಡೋ ವಾಹನ ಸವಾರರೇ ಎಚ್ಚರ! ಇನ್ಮೇಲೆ ದಂಡ ಕಟ್ಟದೇ ಪಾರಾಗುತ್ತೇನೆ ಎಂದು ಹೇಳುವ ಹಾಗಿಲ್ಲ! ಸಂಚಾರ ನಿಯಮಗಳಿಗೂ ನಮಗೂ ಸಂಬಂಧವಿಲ್ಲ ಅನ್ನುವ ಹಾಗಿಲ್ಲ. ಯಾಕೆಂದರೆ ಇದೀಗ ಪೋಲೀಸ್ ಇಲಾಖೆಯಿಂದ ಅಘಾತಕಾರಿ ಸುದ್ದಿಯೊಂದು ಬಂದಿದ್ದು, ನಿರಂತರವಾಗಿ ನಿಯಮ ಉಲ್ಲಂಘಿಸಿ 50,000 ರೂ. ವರೆಗೆ ಫೈನ್‌ ಇದ್ದರೆ, ಅಂಥವರ ಮನೆಗೆ ತೆರಳಿ ಪೊಲೀಸರು ದಂಡ ವಸೂಲಿ ಮಾಡಲಿದ್ದಾರೆ.

ಹೀಗಾಗಿ ಪೊಲೀಸರ ಕೈಯಲ್ಲಿ ಸಿಕ್ಕೊಂಡ್ರೆ ಮಾತ್ರ ದಂಡ ಕಟ್ಟೋದು ಅಂತ ಅನ್ಕೊಂಡ್ರೆ ಅದು ನಿಮ್ಮ ದಡ್ಡತನ ಎಂದು ಬೆಂಗಳೂರು ಸಂಚಾರಿ ಪೊಲೀಸರು ಹೇಳುತ್ತಿದ್ದಾರೆ. ಕೆಲವರಿಗೆ ಹೆಲ್ಮೆಟ್ ಎಂದರೆ ಅಲರ್ಜಿ. ಸಿಗ್ನಲ್ ಜಂಪ್, ತ್ರಿಪಲ್ ರೈಡಿಂಗ್ ಇನ್ನೂ ನಿಂತಿಲ್ಲ. ಇಷ್ಟೆಲ್ಲಾ ನಿಯಮಗಳ ಉಲ್ಲಂಘನೆ ಮಾಡಿದವರ ಫೈನ್‌ ಲಿಸ್ಟ್‌ ಕೂಡ ದೊಡ್ಡದಿರುತ್ತದೆ. ಈ ಕಾರಣ ಬೆಂಗಳೂರು ಸಂಚಾರಿ ಪೊಲೀಸರು ಮಹತ್ವದ ಕ್ರಮ ಕೈಗೊಳ್ಳುತ್ತಿದ್ದಾರೆ.

ಅಂದಹಾಗೆ ಕಳೆದ ಹತ್ತು ದಿನಗಳಿಂದ ನಗರದಲ್ಲಿ 2,681 ವಾಹನಗಳ ಮೇಲೆ 50,000 ರೂ.ಗೂ ಅಧಿಕ ದಂಡ ಇದೆ. 2859 ಮಂದಿ ವಾಹನ ಸವಾರರಿಂದ ಒಟ್ಟು 36 ಸಾವಿರಕ್ಕೂ ಅಧಿಕ ಬಾರಿ ಸಂಚಾರಿ ನಿಯಮ ಉಲ್ಲಂಘನೆ ನಡೆದಿದೆ. ಈ ವಾಹನ ಸವಾರರಿಂದ 18 ಕೋಟಿ 96 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಬೇಕಾಗಿದೆ. ಈಗಾಗಲೇ ಅನೇಕ ವಾಹನ ಸವಾರರ ಮನೆಗೆ ತೆರಳಿ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಕೆಲ ವಾಹನಗಳ ಮಾಲೀಕರು ದಂಡ ಪಾವತಿಸದೆ ಬೇರೆಯವರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಇಂತವರ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.