Pre Wedding Shoot: ಪ್ರಿವೆಡ್ಡಿಂಗ್‌ ಶೂಟ್‌ ಎಡವಟ್ಟು; ಸರಕಾರಿ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ನಲ್ಲಿ ನಡೆಯಿತು ವೀಡಿಯೋ ಶೂಟ್‌

Share the Article

Pre Wedding Shoot: ಇತ್ತೀಚೆಗೆ ಪ್ರಿ ವೆಡ್ಡಿಂಗ್‌ ಶೂಟ್‌ ಭಾರೀ ಪ್ರಚಲಿತದಲ್ಲಿದೆ. ಇದಕ್ಕಾಗಿ ಕ್ರಿಯೇಟಿವಿಟಿಯಲ್ಲಿ ಯೋಚನೆ ಮಾಡಿ ಫೋಟೋ ಶೂಟ್‌, ವೀಡಿಯೋ ಶೂಟ್‌ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಿದೆ. ಅಂತಹುದೇ ಒಂದು ವಿಚಿತ್ರ ಪ್ರಿವೆಡ್ಡಿಂಗ್‌ ಶೂಟ್‌ ನಡೆದಿದೆ. ಅದು ಕೂಡಾ ಸರಕಾರಿ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ನಲ್ಲಿ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಭರಮಸಾಗರದಲ್ಲಿ ನಡೆದಿದೆ.

ಇದನ್ನೂ ಓದಿ: Child Birth: ಮುದ್ದಾದ ಮೂರು ಗಂಡು ಮಕ್ಕಳ ಹೆತ್ತ ಕಟ್ಟಡ ಕಾರ್ಮಿಕ ಮಹಿಳೆ

ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯ ಡಾ.ಅಭಿಷೇಕ್‌ ಮತ್ತು ಭಾವಿ ಪತ್ನಿ ಮೇಲೆ ಈ ಆಪಾದನೆ ಬಂದಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬರಿಗೆ ಆಪರೇಷನ್‌ ಥಿಯೇಟರ್‌ನಲ್ಲಿ ಅಪರೇಷನ್‌ ನಡೆಸುತ್ತಿರುವ ಡಾ.ಅಭಿಷೇಕ್‌ ತನ್ನ ಭಾವಿ ಪತ್ನಿಯನ್ನು ಮತ್ತೊಂದು ಬದಿಯಲ್ಲಿ ನಿಲ್ಲಿಸಿ, ಸಹಾಯ ಮಾಡುತ್ತಿರುವಂತೆ ನಟಿಸಿರುವ ವೀಡಿಯೋ ಇದೀಗ ವೈರಲ್‌ ಆಗಿದ್ದು, ಈ ವಿಡಿಯೋ ಕೆಲಸದಲ್ಲಿ ತೊಡಗಿರುವ ಹುಡುಗರು ಖುಷಿಯಲ್ಲಿ ನಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸರಕಾರಿ ಆಸ್ಪತ್ರೆಯ ಅಪರೇಷನ್‌ ಥಿಯೇಟರನ್ನು ಈ ರೀತಿ ತಮ್ಮ ಸ್ವಂತಕ್ಕೆ ಬಳಕೆ ಮಾಡುವುದು, ಅದು ಕೂಡಾ ಜವಾಬ್ದಾರಿ ಹೊಂದಿದ ಡಾಕ್ಟರ್‌ ಆಗಿ ಹೇಗೆ ಮಾಡಲು ಸಾಧ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಜವಾಬ್ದಾರಿ ಮೆರೆದಿರುವ ಡಾ.ಅಭಿಷೇಕ್‌ ಜೋಡಿಯ ವಿರುದ್ಧ ಇದೀಗ ಭಾರೀ ಖಂಡನೆ ಕೇಳಿ ಬರುತ್ತಿದೆ.

Leave A Reply