Parliment election : ಲೋಕಸಭಾ ಚುನಾವಣೆ- ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಗೆಲ್ಲೋ ಸೀಟುಗಳೆಷ್ಟು?!

Parliment election : ಚುನಾವಣಾ ಆಯೋಗವು ಲೋಕಸಭಾ ಚುನಾವಣೆಗೆ(Parliament election)ತಾತ್ಕಾಲಿಕ ದಿನಾಂಕವನ್ನು ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ತಾಲೀಮು ನಡೆಸಿವೆ. ಜೊತೆಗೆ ಚುನಾವಣಾ ಸಮೀಕ್ಷೆಗಳೂ ನಡೆಯುತ್ತಿವಿ. ಇದೀಗ ಕರ್ನಾಟಕದಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಎಷ್ಟು ಸ್ಥಾನಗಳು ದೊರೆಯಲಿವೆ ಎಂಬ ವರದಿಯೊಂದು ಹೊರಬಿದ್ದಿದೆ.

ಇದನ್ನೂ ಓದಿ: WhatsApp Love: ಭಾರತದಿಂದ ಪಾಕ್‌ಗೆ ತೆರಳಿದ ಎರಡು ಮಕ್ಕಳ ತಾಯಿ; Whatsapp ನಲ್ಲಿ ಉಂಟಾದ ಪ್ರೀತಿ ಗಡಿ ದಾಟುವವರೆಗೆ

ಹೌದು, ದೇಶದಲ್ಲಿ ಈಗ ಚುನಾವಣೆ ನಡೆದರೆ ಕರ್ನಾಟಕದಲ್ಲಿ ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ(BJP) 21, ಕಾಂಗ್ರೆಸ್(Congress)5, ಜೆಡಿಎಸ್(JDS) 2 ಸ್ಥಾನದಲ್ಲಿ ಜಯಗಳಿಸಲಿವೆ ಎಂದು ಟೈಮ್ಸ್ ನೌ, ಮ್ಯಾಟ್ರಿಜ್ ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ.

ಅಂದಹಾಗೆ ಮತಗಳ ಶೇಕಡಾವಾರು ಪ್ರಮಾಣದಲ್ಲಿ ಬಿಜೆಪಿ 46.2% ಕಾಂಗ್ರೆಸ್‌ 42.3% ಜೆಡಿಎಸ್‌ 8.4% ಹಾಗೂ ಇತರ ಪಕ್ಷಗಳು 3.1%ರಷ್ಟು ಮತ ಗಳಿಸಿಕೊಳ್ಳಲಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರರು ಒಂದು ಸ್ಥಾನ ಗಳಿಸಿದ್ದರು.

ದೇಶದ ಸಮೀಕ್ಷೆ ಏನು?

ಲೋಕಸಭಾ ಚುನಾವಣೆ (Lok Sabha Election) ನಡೆದರೆ ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) 366 ಸ್ಥಾನ ಗಳಿಸಿದರೆ ಕರ್ನಾಟಕದಲ್ಲಿ (Karnataka) ಬಿಜೆಪಿ-ಜೆಡಿಎಸ್‌ (BJP-JDS) ಮೈತ್ರಿಕೂಟ 23 ಸ್ಥಾನ ಗೆಲ್ಲಲಿದೆ ಎಂದು ಟೈಮ್ಸ್‌ ನೌ ಸಮೀಕ್ಷೆ ತಿಳಿಸಿದೆ.

1 Comment
  1. […] ಇದನ್ನೂ ಓದಿ: Parliment election : ಲೋಕಸಭಾ ಚುನಾವಣೆ- ಕರ್ನಾಟಕದಲ್ಲಿ … […]

Leave A Reply

Your email address will not be published.