Adhra-Pan link: ಆಧಾರ್-ಪಾನ್ ಕಾರ್ಡ್ ಲಿಂಕ್ ಬಗ್ಗೆ ಇಲ್ಲಿದೆ ಮತ್ತೊಂದು ಬಿಗ್ ಅಪ್ಡೇಟ್!!
Adhar-Pan link: ಭಾರತದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಎಲ್ಲರಿಗೂ ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್ ಲಿಂಕ್ ಮಾಡುವುದನ್ನು ಭಾರತ ಸರ್ಕಾರವು ಈಗ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಸಮಯವನ್ನೂ ನಿಗದಿ ಮಾಡಿದ್ದು ಆ ಗಡುವು ಕೂಡ ಮುಗಿದಿದೆ. ಇಷ್ಟಾಗಿಯೂ ಕೆಲವರು ಇನ್ನೂ ಲಿಂಕ್ ಮಾಡಿಲ್ಲ. ಹೀಗಾಗಿ ಅವರೆಲ್ಲರ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆ. ಇದೀಗ ಈ ಕುರಿತಂತೆ ಮತ್ತೊಂದು ಹೊಸ ಅಪ್ಡೇಟ್ ಬಂದಿದೆ.
ಇದನ್ನೂ ಓದಿ: Parliment election : ಲೋಕಸಭಾ ಚುನಾವಣೆ- ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಗೆಲ್ಲೋ ಸೀಟುಗಳೆಷ್ಟು?!
ಹೌದು, ನೀವಿನ್ನು ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್(Adhar-Pan link) ಮಾಡಿಕೊಳ್ಳದೆ ಇದ್ರೆ, ಹೇಗೆ ಮಾಡಿಕೊಳ್ಳಬಹುದು, ನಿಷ್ಕ್ರಿಯವಾದ ಪಾನ್ ಕಾರ್ಡ್ ಅನ್ನು ಮತ್ತೆ ಹೇಗೆ ಸಕ್ರಿಯ ಮಾಡುವುದು, ಎಷ್ಟು ದಂಡ ಪಾವತಿಸಬೇಕು ಎಂಬ ಎಲ್ಲಾ ಮಾಹಿತಿಗಳು ಇಲ್ಲಿವೆ ನೋಡಿ.
ಆದಾಯ ತೆರಿಗೆಯ(Income tax)ವೆಬ್ ಸೈಟ್ ಗೆ ಹೋಗಿ ಸಾವಿರ ರೂಪಾಯಿಗಳ ದಂಡ ಪಾವತಿಸಿ ಲಿಂಕ್ ಮಾಡಿಕೊಳ್ಳಬಹುದು. ಹಾಗೂ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಅನ್ನು ಮತ್ತೆ ಆಕ್ಟಿವ್ ಗೊಳಿಸಬಹುದು. ಸರಿಯಾದ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ದಂಡ ಪಾವತಿಸಿ ನಿಮ್ಮ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಆಕ್ಟಿವ್ ಮಾಡಿಕೊಳ್ಳಿ.