Home Crime Malappuram Pocso Court: 11,13 ವರ್ಷದ ಅಪ್ರಾಪ್ತ ಮಕ್ಕಳ ಮೇಲೆ ತಂದೆಯಿಂದಲೇ ಅತ್ಯಾಚಾರ; 133 ವರ್ಷ...

Malappuram Pocso Court: 11,13 ವರ್ಷದ ಅಪ್ರಾಪ್ತ ಮಕ್ಕಳ ಮೇಲೆ ತಂದೆಯಿಂದಲೇ ಅತ್ಯಾಚಾರ; 133 ವರ್ಷ ಕಠಿಣ ಸಜೆ ವಿಧಿಸಿದ ಕೇರಳ ಕೋರ್ಟ್‌

Malappuram Pocso Court

Hindu neighbor gifts plot of land

Hindu neighbour gifts land to Muslim journalist

ಕೋಳಿಕೋಡ್‌: ತನ್ನದೇ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ತಂದೆಯೋರ್ವ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ನ್ಯಾಯಾಲಯವು 133 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: Miracle: 5 ವರ್ಷದಿಂದ ಕೋಮಾದಲ್ಲಿದ್ದ ಮಗಳು – ತಾಯಿ ಹೇಳಿದ ಆ ಜೋಕ್ ಗೆ ಎಚ್ಚರವಾಗಿ ನಕ್ಕುಬಿಟ್ಟಳು !!

42 ವರ್ಷದ ತಂದೆಯೋರ್ವ 13,11 ವರ್ಷದ ತನ್ನ ಅಪ್ರಾಪ್ತ ಪುತ್ರಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಪಾಪಿಗೆ ಇದೀಗ ಮಲಪ್ಪುರಂನ ಮಾಂಜೇರಿ ವಿಶೇಷ ತ್ವರಿತ ವಿಚಾರಣಾ ಪೋಕ್ಸೋ ನ್ಯಾಯಾಲಯವು 133 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ಪ್ರಕಟ ಮಾಡಿದೆ.

ಇದರ ಜೊತೆಗೆ ತಂದೆಗೆ 8.8 ಲಕ್ಷ ರೂ.ದಂಡ ವಿಧಿಸಿರುವ ಕೋರ್ಟ್‌ ಅದನ್ನು ಸಂತ್ರಸ್ತ ಬಾಲಕಿಯರಿಗೆ ಒಪ್ಪಿಸಬೇಕು ಎಂಬ ಆದೇಶವನ್ನು ನೀಡಿದ್ದಾರೆ.

13ವರ್ಷದ ಮಗಳ ಮೇಲೆ 2021ರ ನವೆಂಬರ್‌ನಿಂದ 2022 ರ ಮಾರ್ಚ್‌ವರೆಗೆ ಮನೆಯಲ್ಲಿ ನಿರಂತರ ಅತ್ಯಾಚಾರ ಮಾಡಿದ್ದ ತಂದೆಗೆ ಈ ಪ್ರಕರಣದಲ್ಲಿ 123 ವರ್ಷಗಳ ಜೈಲು ಮತ್ತು 7 ಲಕ್ಷ ರೂ. ದಂಡ ವಿಧಿಸಲಾಗಿದೆ.

11 ವರ್ಷದ ಮಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕೋರ್ಟ್‌ ಈತನಿಗೆ 10 ವರ್ಷಗಳ ಕಠಿಣ ಜೈಲು ಮತ್ತು 1.8 ಲಕ್ಷ ರೂ. ದಂಡ ವಿಧಿಸಿದೆ. 2022ರ ಮಾರ್ಚ್‌ 26 ರಂದು ಮನೆಯಲ್ಲಿ ಈ ಕೃತ್ಯ ನಡೆಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕಿರಿ ಮಗಳ ಬಳಿ ಕಾಮುಕ ತಂದೆ ತನ್ನ ಲೈಂಗಿಕ ವಾಂಛೆ ಈಡೇರಿಸಲು ಹೇಳಿದಾಗ ಅದನ್ನು ಆಕೆ ತನ್ನ ತಾಯಿ ಬಳಿ ಹೇಳಿದ್ದಳು. ಆ ಸಂದರ್ಭದಲ್ಲಿ ಆತ ತನ್ನ ಹಿರಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವಿಷಯ ಬೆಳಕಿಗೆ ಬಂದಿತ್ತು. ಕೂಡಲೇ ತಾಯಿ ಸ್ಥಳೀಯ ಪಂಚಾಯಿತಿ ಸದಸ್ಯೆಯನ್ನು ಸಂಪರ್ಕಿಸಿದ್ದು, ಅವರಿಗೆ ಮಾಹಿತಿ ನೀಡಿ, ಮಕ್ಕಳ ಸಹಾಯವಾಣಿಯ ಮಧ್ಯಪ್ರವೇಶದೊಂದಿಗೆ ಹೆಣ್ಣುಮಕ್ಕಳ ಹೇಳಿಕೆ ದಾಖಲು ಮಾಡಲಾಗಿತ್ತು. ಇದನ್ನಾಧರಿಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ನಂತರ ತಂದೆಯ ಬಂಧನ ಮಾಡಲಾಗಿತ್ತು.