Belthangady: 42 ಸಿಮ್‌ ಕಾರ್ಡ್‌ ಪತ್ತೆ ಪ್ರಕರಣ; ISD ಅಧಿಕಾರಿಗಳ ಎಂಟ್ರಿ

Share the Article

Belthangady: ಅಕ್ರಮವಾಗಿ ಸಂಗ್ರಹ ಮಾಡಿದ್ದ 42 ಸಿಮ್‌ ಪತ್ತೆಯಾದ ಪ್ರಕರಣದ ಕುರಿತು ಇದೀಗ ಮಹತ್ವದ ಮಾಹಿತಿಯೊಂದು ಬೆಳಕಿಗೆ ಬಂದಿದ್ದು, ಧರ್ಮಸ್ಥಳ ಪೊಲೀಸ್‌ ಠಾಣೆಗೆ ಆತಂರಿಕ ಭದ್ರತಾ ಇಲಾಖೆ (ISD) ಅಧಿಕಾರಿಗಳು ತನಿಖೆಗೆ ಬಂದಿದ್ದಾರೆ.

ಇದನ್ನೂ ಓದಿ: Murder Case: ಮದುವೆ ಮಾಡಿಲ್ಲ ಎಂದು ಕುಡಿತದ ನಶೆಯಲ್ಲಿ ಕಟ್ಟಿಗೆಯಿಂದ ಹೊಡೆದು ತಾಯಿಯ ಕೊಂದ ಪುತ್ರ!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಭಾಗದ ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿ ಧರ್ಣಪ್ಪ ಮತ್ತು ದಿವ್ಯಾ ಧರ್ಮಸ್ಥಳ ಪೊಲೀಸ್‌ ಠಾಣೆಗೆ ಫೆ.5 ರಂದು ಆಗಮಿಸಿದ್ದು ಪ್ರಕರಣದ ಮಾಹಿತಿ ಕಲೆ ಹಾಕಿದ್ದಾರೆ.

ಈ ಪ್ರಕರಣದಲ್ಲಿ ಬಂಧನಗೊಂಡ ರಮೀಝ್‌, ಅಕ್ಬರ್‌ ಅಲಿ, ಮೊಹಮ್ಮದ್‌ ಮುಸ್ತಫಾ, ಮೊಹಮ್ಮದ್‌ ಸಾಧಿಕ್‌, ಮತ್ತೋರ್ವ 17 ವರ್ಷ ಅಪ್ರಾಪ್ತ ಬಾಲಕ ಕೂಡಾ ಇದ್ದಿದ್ದು, ಇದೀಗ ಈ ನಾಲ್ಕು ಜನರಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ ಎಂದು ವರದಿಯಾಗಿದೆ.

Leave A Reply