Mathura: ಶ್ರೀ ಕೃಷ್ಣ ದೇವಾಲಯವನ್ನು ನೆಲಸಮಗೊಳಿಸಿ ಮಸೀದಿ ನಿರ್ಮಾಣ ಮಾಡಿದ ಔರಂಗಜೇಬ್‌; ಸ್ಫೋಟಕ ಮಾಹಿತಿ ಬಹಿರಂಗ!

Mathura: ಮೊಘಲ್ ದೊರೆ ಔರಂಗಜೇಬನು ಮಥುರಾದ ಕೃಷ್ಣ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದ ಎಂಬುವುದರ ಕುರಿತು ಮಾಹಿತಿಯೊಂದು ಹೊರ ಬಿದ್ದಿದೆ. ಶ್ರೀ ಕೃಷ್ಣ ಜನ್ಮಭೂಮಿ-ಈದ್ಗಾ ಪ್ರಕರಣದಲ್ಲಿ ಆಗ್ರಾದಲ್ಲಿರುವ ಪುರಾತತ್ವ ಇಲಾಖೆ ಕಚೇರಿ ಒದಗಿಸಿದ ದಾಖಲೆಗಳಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ: BIG NEWS: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.

ದಾಖಲೆಗಳ ಪ್ರಕಾರ, 1920 ರಲ್ಲಿ ಅಲಹಾಬಾದ್‌ನಿಂದ ಬ್ರಿಟಿಷರ ಆಳ್ವಿಕೆಯಲ್ಲಿ ಪ್ರಕಟವಾದ ಗೆಜೆಟ್ ಯುಪಿಯ ವಿವಿಧ ಜಿಲ್ಲೆಗಳಲ್ಲಿ 39 ಸ್ಮಾರಕಗಳನ್ನು ಪಟ್ಟಿ ಮಾಡಿದೆ, ಅದರಲ್ಲಿ ಕತ್ರಾ ಕೇಶವದೇವ ಭೂಮಿಯಲ್ಲಿರುವ ಶ್ರೀ ಕೃಷ್ಣ ಜನ್ಮಭೂಮಿಯನ್ನು 37 ನೇ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಮೈನ್ ಪುರಿಯ ಅಜಯ್ ಪ್ರತಾಪ್ ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ದೇವಸ್ಥಾನದ ಬಗ್ಗೆ ಮಾಹಿತಿ ಕೇಳಿದ್ದರು. ಪುರಾತತ್ವ ಇಲಾಖೆಯ ಅಧಿಕಾರಿಗಳೇ ಈ ಮಾಹಿತಿ ನೀಡಿರುವುದರಿಂದ ಮುಂದೆ ಎಎಸ್‌ಐನಿಂದ ಸಮೀಕ್ಷೆ ನಡೆದರೆ ನಮಗೆ ಇದೊಂದು ದೊಡ್ಡ ಸಾಕ್ಷಿಯಾಗಲಿದೆ ಎನ್ನುತ್ತಾರೆ ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್.

ಈ ದಾಖಲೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗುವುದು ಎಂದು ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ಮಹೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ. ಮೈನ್‌ಪುರಿಯ ಅಜಯ್ ಪ್ರತಾಪ್ ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ದೇವಸ್ಥಾನದ ಬಗ್ಗೆ ಈ ಮಾಹಿತಿಯನ್ನು ಕೋರಿದ್ದರು.

Leave A Reply

Your email address will not be published.