Ration Card: ರೇಷನ್ ಕಾರ್ಡ್ ಹೊಂದಿರುವವರೇ ಎಚ್ಚರ!! ಈ ಕೆಲಸ ಮಾಡದಿದ್ದರೆ ನಿಮ್ಮ ಕಾರ್ಡ್ ಬಂದ್!!

ಪಡಿತರ ಚೀಟಿಯಲ್ಲಿ ಪಾರದರ್ಶಕತೆಯನ್ನು ತರ ಉದ್ದೇಶದಿಂದ ಸರ್ಕಾರವು ಹೊಸ ಸೂಚನೆಯಿಂದ ಪಡಿತರರಿಗೆ ನೀಡಿದೆ. ಮುಂಬರುವ ಫೆಬ್ರವರಿ 29ರ ಒಳಗೆ ಎಲ್ಲಾ ಪಡಿತರ ಚೀಟಿಯನ್ನು ಹೊಂದಿರುವವರು ಈ ಕೆಲಸವನ್ನು ಮಾಡಲೇಬೇಕು. ಇಲ್ಲವಾದರೆ ನಿಮ್ಮ ಪಡಿತರ ಚೀಟಿಯು ಕೆಲ ದಿನಗಳವರೆಗೆ ರದ್ದಾಗುವ ಮೂಲಕ ಗೃಹಜೋತಿ ಗೃಹಲಕ್ಷ್ಮಿ ಗಳಿಗೆ ಕತ್ತರಿ ಬೀಳಲಿದೆ. ಈ ಕುರಿತಂತೆ ಮಾಹಿತಿಯನ್ನು ನೀಡುತ್ತ ಹೋಗೋಣ.

ಇದನ್ನೂ ಓದಿ: Bengaluru: ದರ್ಶನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಂದ ದವಸ ಧಾನ್ಯಗಳ ಕೊಡುಗೆ!!! ದರ್ಶನ ಮನೆಗೆ ಧಾನ್ಯಗಳ ವಿತರಣೆ!!

ರೇಷನ್ ಕಾರ್ಡ್ ಇ-ಕೆವೈಸಿ

ರಾಜ್ಯದಾದ್ಯಂತ ಪಡಿತರ ಚೀಟಿಯನ್ನು ಹೊಂದಿರುವವರು ಎಲ್ಲರೂ ತಮ್ಮ ರೇಷನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಮಾಡಿಸಬೇಕು. ಇದನ್ನು ಮಾಡಲು ಫೆಬ್ರವರಿ 29 ರವರೆಗೆ ಗಡುವು ನೀಡಲಾಗಿದೆ ಎಂದು ನಾಗರಿಕ ಸರಬರಾಜು ಮತ್ತು ಗ್ರಾಹಕ ವಿವರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇ-ಕೆವೈಸಿ ಮಾಡದೇ ಇದ್ರೆ ಏನಾಗುತ್ತೆ

ಫೆಬ್ರವರಿ 29ರ ಒಳಗೆ ಆಧಾರ್ ಜೋಡಣೆ ಮಾಡದಿದ್ದಲ್ಲಿ ಅಂಥವರ ಪಡಿತರ ಚೀಟಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತದೆ. ಹಾಗೂ ಪಡಿತರ ಚೀಟಿಯಿಂದ ಬರುವ ಎಲ್ಲಾ ಯೋಜನೆಗಳಿಗೂ ಬ್ರೇಕ್ ಬೀಳಲಿದೆ. ಈ ಸಂದರ್ಭದಲ್ಲಿ ಸಂಪೂರ್ಣವಾಗಿ ಆರು ತಿಂಗಳ ಯೋಜನೆಗಳು ಸಿಗದೇ ಇರುವ ಸಾಧ್ಯತೆ ಇರುತ್ತದೆ.

ಪಡಿತರ ಚೀಟಿಯ ರದ್ದು ಈಗಾಗಲೇ ಶುರುವಾಗಿದೆ.

ಈಗಾಗಲೇ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡನ್ನು ಮಾಡಿಸಿಕೊಂಡಿದ್ದ ಕೆಲವರ ಕಾಲನ್ನು ಬಂದ್ ಮಾಡಲಾಗಿದೆ. ವಾಹನಗಳು ಐಷಾರಾಮಿ ಮನೆ ಇವುಗಳಿದ್ದರೆ ಅಂತಹವರ ಪಡಿತರ ಚೀಟಿಯನ್ನು ರದ್ದು ಮಾಡಲಾಗುತ್ತಿದೆ. ನಕಲಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡವರಿಗೆ ದಂಡವನ್ನು ವಿಧಿಸಲಾಗುತ್ತಿದೆ

1 Comment
  1. […] ಇದನ್ನೂ ಓದಿ: Ration Card: ರೇಷನ್ ಕಾರ್ಡ್ ಹೊಂದಿರುವವರೇ ಎಚ್ಚರ!! … […]

Leave A Reply

Your email address will not be published.