Kadaba: ಮತ್ತೆ ಪ್ರತ್ಯಕ್ಷವಾದ ಕಾಡಾನೆ, ಜನರಲ್ಲಿ ಹೆಚ್ಚಿದ ಆತಂಕ!!

Kadaba: ಮೂರು ಕಾಡಾನೆಗಳು ಮತ್ತೆ ಕಡಬದಲ್ಲಿ ಪ್ರತ್ಯಕ್ಷವಾದ ಘಟನೆಯೊಂದು ನಡೆದಿದ್ದು, ಜನರು ಆತಂಕಗೊಂಡಿದ್ದಾರೆ.

ಕಡಬದ ಪುತ್ತಿಗೆ ಶಾಲೆ ಗುಡ್ಡಯ ತಿರುವು ಬಳಿ ಇರುವ ಕಾಡಿನಲ್ಲಿ ಈ ಘಟನೆ ನಡೆದಿದೆ. ಕೃಷಿ ಭೂಮಿ ಹೆಚ್ಚಿರುವ ಕಾರಣ ಆನೆಗಳು ಈ ಭಾಗಕ್ಕೆ ಬಂದಿರಬಹುದು ಎಂದು ಅಂದಾಜು ಮಾಡಲಾಗಿದೆ.

ರಸ್ತೆಯಲ್ಲಿ ಆನೆಯೊಂದು ನಡೆದಾಡುವ ವೀಡಿಯೋವೊಂದು ವೈರಲ್‌ ಆಗಿದ್ದು, ಸಮೀಪದಲ್ಲೇ ಶಾಲೆ ಇರುವುದರಿಂದ ಪುಟ್ಟ ಮಕ್ಕಳು ಈ ಭಾಗದಲ್ಲಿ ಓಡಾಡುತ್ತಾರೆ. ಹೀಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಗ್ರಾಮಸ್ಥರಿಂದ ಬಂದಿದೆ.

ಇದನ್ನೂ ಓದಿ: Belthangady: ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್‌ ಕಾರ್ಡ್‌ ಖರೀದಿ; ಧರ್ಮಸ್ಥಳ ಪೊಲೀಸರಿಂದ ಐದು ಜನರ ಬಂಧನ!!

Leave A Reply

Your email address will not be published.