Belthangady: ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್‌ ಕಾರ್ಡ್‌ ಖರೀದಿ; ಧರ್ಮಸ್ಥಳ ಪೊಲೀಸರಿಂದ ಐದು ಜನರ ಬಂಧನ!!

Share the Article

Belthangady: ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸಿಮ್‌ಕಾರ್ಡ್‌ ಬಳಸಿ ಬೆಂಗಳೂರು ಕಡೆ ಪ್ರಯಾಣ ಮಾಡುತ್ತಿರುವ ಕುರಿತು ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್‌ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಅನಿಲ್‌ ಕುಮಾರ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಇದೀಗ ಐದು ಮಂದಿಯನ್ನು ಬಂಧನ ಮಾಡಲಾಗಿದೆ.

ಇದನ್ನೂ ಓದಿ: Mangaluru Politics: ಪ್ರತಿಭಾ ಕುಳಾಯಿ ಬಿಜೆಪಿಗೆ?

ಫೆ.1 ರಂದು ಸಂಜೆ 4 ಗಂಟೆ ಸುಮಾರಿಗೆ ಧರ್ಮಸ್ಥಳ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಯುವಕರಿಗಾಗಿ ಹುಡುಕಾಟ ಮಾಡುವ ಸಂದರ್ಭ ಐದು ಮಂದಿ ಗುಂಪು ಸೇರಿದ್ದು, ಇವರನ್ನು ವಶಕ್ಕೆ ಪಡೆದುಕೊಂಡು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, ಅವರ ಬ್ಯಾಗ್‌ನಲ್ಲಿದ್ದ ಬೇರೆ ಬೇರೆ ವಿಳಾಸದ ಹೆಸರಿನಲ್ಲಿ ಅಕ್ರಮವಾಗಿ ಪಡೆದುಕೊಂಡಿದ್ದ 42 ಸಿಮ್‌ ಕಾರ್ಡ್‌ ಮತ್ತು ಅವರ ಬಳಿಕ ಇದ್ದ ಮೊಬೈಲ್‌ ಫೋನ್‌ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ರಮೀಝ್‌ (20), ಅಕ್ಬರ್‌ ಆಲಿ (24), ಮೊಹಮ್ಮದ್‌ ಮುಸ್ತಾಫಾ (22), ಮಹಮ್ಮದ್‌ ಸಾಧಿಕ್‌ (27), ಇನ್ನೋರ್ವ ಅಪ್ರಾಪ್ತ ಬಾಲಕ (17ವರ್ಷ) ನನ್ನು ಬಂಧನ ಮಾಡಲಾಗಿದೆ.

ಮೋಸ ವಂಚನೆ ಮಾಡುವ ಅಥವಾ ನಿಗೂಢ ಕಾರ್ಯ ಸಾಧನೆ ಬಳಸು ತಮ್ಮ ಗ್ಯಾಂಗ್‌ ಸದಸ್ಯರು ಸೇರಿ ಬಡ ವರ್ಗದ ಜನರನ್ನು ಟಾರ್ಗೆಟ್‌ ಮಾಡಿ ಸುಳ್ಳು ಹೇಳಿ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಒಟ್ಟು 42 ಸಿಮ್‌ ಖರೀದಿ ಮಾಡಿ, ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಯಾವುದೋ ವ್ಯವಹಾರ ನಡೆಸುತ್ತಾರೆ ಎಂದು ಧರ್ಮಸ್ಥಳ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಹಲವು ವ್ಯಕ್ತಿಗಳು ಭಾಗಿಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ಇದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಐದು ಜನ ಆರೋಪಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ವಂಚನೆ, ಒಳಸಂಚು ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಭಾರೀ ಮಾತ್ರದಲ್ಲಿ ವಿವಿಧ ವ್ಯಕ್ತಿಗಳ ಸಿಮ್‌ ಕಾರ್ಡ್‌ ಖರೀದಿಸಿ ಯಾರಿಗೆ ರವಾನೆಯಾಗುತ್ತಿತ್ತು ಎನ್ನುವುದು, ಯಾಕೆ ಬಳಕೆ ಮಾಡುತ್ತಿದ್ದರು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸರು ಈ ಪ್ರಕರಣದ ಕುರಿತು ತಮ್ಮ ತನಿಖೆ ಚುರುಕುಗೊಳಿಸಿದ್ದು, ಕಾರ್ಯಾಚರನೆ ನಡೆಸುತ್ತಿದ್ದಾರೆ.

Leave A Reply