Indian Tourist: ಫ್ರಾನ್ಸ್ ಗೆ ಹೋಗುವ ಭಾರತೀಯರಿಗೆ ಸಿಹಿ ಸುದ್ದಿ!!!

ನವದೆಹಲಿ: ಭಾರತ ಮತ್ತು ಪ್ರಾನ್ಸ್ ದೇಶಗಳ ನಡುವೆ ಉತ್ತಮ ಬಾಂಧವ್ಯ ಇದ್ದು. ದಿನೇ ದಿನೇ ಸ್ನೇಹ ಸಂಬಂಧ ಹೆಚ್ಚಾಗುತ್ತಿದೆ. ಮೊನ್ನೆ ನಡೆದ ಗಣರಾಜ್ಯೋತ್ಸವಕ್ಕೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭೇಟಿ ನೀಡುವ ಮೂಲಕ ಎರಡು ದೇಶಗಳ ಸಂಬಂಧ ಇನ್ನು ಗಟ್ಟಿಯಾಗಿದೆ. ಎರಡು ದೇಶಗಳ ನಡುವೆ ರಕ್ಷಣೆ ಹಾಗೂ ಕೈಗಾರಿಕಾ ಪಾಲುದಾರಿಕೆಯ ವಿಷಯಗಳ ಒಪ್ಪಂದಗಳಾಗಿವೆ. ಫ್ರಾನ್ಸ್ ತನ್ನ ದೇಶದಲ್ಲಿ ಯುಪಿಐ ಅಂದರೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅನ್ನು ಅಳವಡಿಸುತ್ತಿದೆ. ಇದರ ಮೊದಲ ವಾಹಿವಾತು ಐಫೆಲ್ ಟವರ್ ನಲ್ಲಿ ನಡೆಯಲಿದೆ. ಭಾರತೀಯರು ಇನ್ನು ಮುಂದೆ ನಗದು ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ.

ಇದನ್ನೂ ಓದಿ: KPSC: ಗೆಜೆಟೆಡ್‌ ಪ್ರೊಬೆಷನರಿ ಹುದ್ದೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ!!!

ಮೊದಲ ಜಾರಿ ಐಫೆಲ್ ಟವರ್ ನಲ್ಲಿ:

ಭಾರತದಲ್ಲಿನ ಯುಪಿಐ ಪ್ರಾನ್ಸ್ ಗೂ ವ್ಯಾಪಿಸಿದೆ. ಇದೀಗ ಪ್ರಾನ್ಸ್ ನ ರಾಜಧಾನಿ ಎನಿಸಿಕೊಂಡಿರುವ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್‌ಗೆ ಭೇಟಿ ನೀಡುವ ಪ್ರವಾಸಿಗರು ಇದೀಗ ಭಾರತದ ಯುಪಿಐ ಬಳಸಿಕೊಂಡು ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ತಿಳಿಸಿದೆ.

ಸುಲಭವಾದ ವಹಿವಾಟು:

ಪ್ರಾನ್ಸ್ ಗೆ ಭೇಟಿ ನೀಡುವ ಪ್ರವಾಸಿಗರು ಯುಪಿಐ ಬಳಸಿ ಐಫೆಲ್ ಟವರ್ ಟಿಕೇಟ್ ಪಡೆಯಬಹುದು ಎಂದು ಎನ್‌ಪಿಸಿಐ ಹೇಳಿದೆ. ಈ ವಹಿವಾಟು ಯಾವುದೇ ಅಡಚನೆಗಳಿಲ್ಲದೆ ಸುಗಮವಾಗಿ ನಡೆಯುತ್ತದೆ ಎಂದು ಅಧಿಕೃತ ಮಾಹಿತಿ ಹೊರ ಬಿದ್ದಿದೆ.

ಪ್ರಾನ್ಸ್. ಬೇಟಿಗೆ ಭಾರತೀಯರಿಗೆ 2 ನೆಯ ಸ್ಥಾನ ;

ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಾನ್ಸ್ ನಲ್ಲಿರುವ ರಾಯಭಾರ ಕಛೇರಿ ಈ ಮಾಹಿತಿಯನ್ನು ಹೊರ ಹಾಕಿದೆ. ಐಫೆಲ್ ಟವರ್ ಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಭಾರತವು 2 ನೆಯ ಸ್ಥಾನದಲ್ಲಿದೆ. ಈ ಕಾರಣದಿಂದ ಭಾರತೀಯರಿಗೆ ಅನುಕೂಲವಾಗಲಿ ಎಂದು ಇದನ್ನು ಜಾರಿ ಮಾಡಲಾಗಿದೆ. ಜೊತೆಗೆ ವೈಬ್ ಸೈಟ್ ನಲ್ಲಿ ರಚಿಸಲಾದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಗಳನ್ನು ಮಾಡಬಹುದು.

ಫ್ರಾನ್ಸ್ ನಲ್ಲಿ Upi ಪಾವತಿಗಳನ್ನು ನೀಡುವ ಮೊದಲ ಸ್ಥಳವಾಗಿ ಐಫೆಲ್ ಟವರ್ ಮೊದಲ ಸ್ಥಳವಾಗಿದೆ. ಫ್ರಾನ್ಸ್ ಮತ್ತು ಯುರೋಪ್ ಗಳಲ್ಲಿ ಪ್ರವಾಸೋದ್ಯಮ ಮತ್ತು ಸ್ಥಳೀಯ ಉದ್ಯಮಗಳನ್ನು ಶೀಘ್ರದಲ್ಲೇ ಅಭಿವೃದ್ಧಿ ಪಡಿಸಲಾಗುವುದು ಎಂದು ಎನ್‌ಐಪಿಎಲ್ ಸಿಇಒ ರಿತೇಶ್ ಶುಕ್ಲಾ ಹೇಳಿದ್ದಾರೆ.

Leave A Reply

Your email address will not be published.