Murder Case: ಹೆತ್ತ ತಾಯಿಯ ತಲೆಗೇ ರಾಡ್‌ನಿಂದ ಹೊಡೆದು ಕೊಂದ ಪಾಪಿ ಮಗ!!!

Murder Case: ಬೆಳ್ಳಂಬೆಳಗ್ಗೆ ತನ್ನ ಅಮ್ಮನನ್ನೇ ಮಗನೋರ್ವ ಕಬ್ಬಿಣದ ರಾಡ್‌ನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Viral News: ನೇಲ್‌ ಪಾಲಿಶ್‌ ರಿಮೂವರ್‌ ಬಾಟಲ್‌ ದಿಢೀರ್ ಸ್ಫೋಟ; ಹುಡುಗಿಯ ಪ್ರಾಣಕ್ಕೆ ಕಂಟಕ!!

ನೇತ್ರಾ (40) ಎಂಬಾಕೆಯೇ ಪುತ್ರನಿಂದ ಕೊಲೆಯಾದ ತಾಯಿ. ಈ ಕಘಟನೆ ಕೆ.ಆರ್‌.ಪುರಂ ನ ಜಸ್ಟ್‌ ಭೀಮಯ್ಯ ಲೇಔಟ್‌ನಲ್ಲಿ ನಡೆದಿದೆ. ಮಗ ಮುಳಬಾಗಿಲಿನ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಈ ಘಟನೆ ಬೆಳಗ್ಗೆ ಎಂಟು ಗಂಟೆಗೆ ನಡೆದಿದೆ ಎಂದು ವರದಿಯಾಗಿದೆ.

ತಾಯಿ ಮತ್ತು ಮಗನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ 18 ರ ಹರೆಯದ ಪುತ್ರ ಮನೆಯಲ್ಲೇ ಇದ್ದ ಕಬ್ಬಿಣದ ರಾಡ್‌ನಿಂದ ನೇತ್ರಾ ತಲೆಗೆ ಹೊಡೆದಿದ್ದಾನೆ.

ಬಲವಾದ ಹೊಡೆತದಿಂದ ತೀವ್ರ ರಕ್ತಸ್ರಾವವಾಗಿದೆ. ಮಹಿಳೆ ಸ್ಥಳದಲ್ಲೇ ಮೃತ ಹೊಂದಿದ್ದಾರೆ.

Leave A Reply

Your email address will not be published.