Rishabh Pant: ಅಪಘಾತದ ಕುರಿತು ಪಂತ್ ಶಾಕಿಂಗ್ ಹೇಳಿಕೆ!

 

ಹೊಸದಿಲ್ಲಿ: ಸ್ಟಾರ್ ಕ್ರಿಕೇಟ್ ಆಟಗಾರರ ರಿಷಬ್ ಪಂತ್ 13 ತಿಂಗಳ ಹಿಂದೆ ನಡೆದ ಅಪಘಾತದಲ್ಲಿ ತನ್ನ ಬಲಗಾಲನ್ನು ಕಳೆದುಕೊಳ್ಳುವ ಭೀತಿ ಇತ್ತು ಎಂದು ಹೇಳಿದ್ದಾರೆ.

ಪಂತ್ ಅವರು ಸ್ಟಾರ್ ಸ್ಪೋರ್ಟ್ಸ್ ಸರಣಿ ‘ಬಿಲೀವ್: ಟು ಡೆತ್ & ಬ್ಯಾಕ್’ ನಲ್ಲಿ ತಮ್ಮ 13 ತಿಂಗಳ ಕಠಿಣ ದಿನಗಳು ಮತ್ತು ಅವರು ಚೇತರಿಸಿಕೊಂಡ ಬಗೆಯನ್ನು ವಿವರಿಸಿದ್ದಾರೆ. ಅಪಘಾತದ ಸಮಯದಲ್ಲಿ ನರಗಳಿಗೆ ನೋವಾಗಿದ್ದರೆ ನನ್ನ ಕಾಲನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: CM Siddaramaiah: ರೈತರೇ ಇದೊಂದು ಕೆಲಸ ಮಾಡಿ ಸಾಕು, ನಿಮ್ಮ ಸಾಲದ ಬಡ್ಡಿ ಪೂರ್ತಿ ಮನ್ನಾ – ಸಿದ್ದರಾಮಯ್ಯ ಹೊಸ ಘೋಷಣೆ!!

ನನ್ನ ಬಲಗಾಲು ಪಲ್ಲಟ ವಾಗಿದ್ದರಿಂದ ತೀವ್ರವಾದ ನೋವನ್ನು ನಾನು ಅನುಭವಿಸಿದ್ದೇನೆ. ಪಂತ್ ಅವರನ್ನು ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಿ ನಂತರ ಅವರನ್ನು ಮುಂಬೈಗೆ ವಿಮಾನದಲ್ಲಿ ಕರೆದೊಯ್ದು ಬಿಸಿಸಿಐ ಕರೆತಂದ ತಜ್ಞ ಸಲಹೆಗಾರರ ಆರೈಕೆಯಲ್ಲಿದ್ದರು.

2022 ರಲ್ಲಿ ತಮ್ಮ ಕುಟುಂಬವನ್ನು ನೋಡಲು ದೆಹಲಿಯಿಂದ ರೂರ್ಕಿಗೆ ಹೋಗುವಾಗ ಕಾರು ಡಿವೈಡರ್ ಗೆ ಅಪ್ಪಳಿಸಿ ಅಪಘಾತ ಸಂಭವಿಸಿತ್ತು. ರಜತ್ ಕುಮಾರ್ ಮತ್ತು ನಿಶುಕುಮಾರ್ ಇವರು ಕಾರು ದಹನ ವಾಗುವ ಮೊದಲು ಪಂತ್ ರನ್ನು ಹೊರಗೆ ಎಳೆದು ಪ್ರಾಣವನ್ನು ಉಳಿಸಿದರು.

Leave A Reply

Your email address will not be published.