CM Siddaramaiah: ರೈತರೇ ಇದೊಂದು ಕೆಲಸ ಮಾಡಿ ಸಾಕು, ನಿಮ್ಮ ಸಾಲದ ಬಡ್ಡಿ ಪೂರ್ತಿ ಮನ್ನಾ – ಸಿದ್ದರಾಮಯ್ಯ ಹೊಸ ಘೋಷಣೆ!!

CM Siddaramaiah: ದೇಶದ ಬೆನ್ನೆಲುಬಾದ ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಒಂದು ಬಂದಿದ್ದು, ನೀವು ಮಾಡಿರುವ ಸಾಲದ ಅಸಲನ್ನು ಪೂರ್ತಿ ಕಟ್ಟಿದರೆ ನಿಮ್ಮ ಸಾಲದ ಮೇಲಿನ ಬಡ್ಡಿ ಪೂರ್ತಿ ಮನ್ನಾ ಆಗುತ್ತದೆ.

ಇದನ್ನೂ ಓದಿ: Jagadish shetter: ಬಿಜೆಪಿಗೆ ಎಂಟ್ರಿ ಕೊಡುತ್ತಿದ್ದಂತೆ ಹೊಸ ಬಾಂಬ್ ಸಿಡಿದ ಜಗದೀಶ್ ಶೆಟ್ಟರ್!!

ಹೌದು, ಕೆಲ ಸಮಯದ ಹಿಂದೆ ರಾಜ್ಯದ ರೈತರು ಸಹಕಾರ ಸಂಘಗಳಲ್ಲಿ ಮಾಡಿರುವಂತ ಸಾಲದ ಅಸಲು ಪಾವತಿ ಮಾಡಿದರೆ ಅದರ ಬಡ್ಡಿ ಮನ್ನಾ ಮಾಡೋದಾಗಿ ಸಿಎಂ ಸಿದ್ದರಾಮಯ್ಯ(CM Siddaramaiah)ಘೋಷಣೆ ಮಾಡಿದ್ದರು. ಅಂತೆಯೇ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಬಡ್ಡಿ ಮನ್ನಾಕ್ಕೆ ಸಭೆಯು ಕೂಡ ಅನುಮೋದನೆ ನೀಡಿದೆ.

ಅಂದಹಾಗೆ ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ ಪಾಟೀಲ್(HK patil) ಸಭೆಯಲ್ಲಿ ಹಲವು ನಿರ್ಣಯಗಳೊಂದಿಗೆ

ಸಾಲ ಪಡೆದ ರೈತರ ಸುಸ್ತಿಬಡ್ಡಿ ಮನ್ನಾ. ಮಧ್ಯಮಾವಧಿ, ಧೀರ್ಘಾವದಿ ಸುಸ್ತಿ ಬಡ್ಡಿ ಮನ್ನಾ ಮಾಡಲು ಕೂಡ ಒಪ್ಪಿಗೆ ದೊರೆತಿದೆ. ಈ ಹಿನ್ನೆಲೆಯಲ್ಲಿ 440 ಕೋಟಿ 20 ಲಕ್ಷ ಸುಸ್ತಿ ಬಡ್ಡಿ ಮನ್ನಾ. ಸಹಕಾರಿ ಸಂಘಗಳಿಂದ ಪಡೆದಿದ್ದ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತಿದೆ ಎಂದು ಹೇಳಿದರು.

Leave A Reply

Your email address will not be published.