Belthangady: ವಾಹನ ಡಿಕ್ಕಿಯಾಗಿ ತಲೆಗೆ ಪೆಟ್ಟಾಗಿದ್ದ ಮಂಗನನ್ನು ರಕ್ಷಿಸಿದ ಯುವಕರು!

Belthangady: ಇಂದು (ಫೆ.2) ರಂದು ಬೆಳಗ್ಗಿನ ಜಾವ ಕಾಶಿಬೆಟ್ಟು ಸಮೀಪ ಅಪರಿಚಿತ ವಾಹನವೊಂದು ಮಂಗನಿಗೆ ಡಿಕ್ಕಿ ಹೊಡೆದು ಹೋಗಿತ್ತು. ತಲೆಯ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಮಂಗನನ್ನು ಕಂಡು ಸ್ಥಳೀಯ ಕೆಲ ಯುವಕರು ಬೆಳ್ತಂಗಡಿಯ ಸರಕಾರಿ ಗೋ ಆಸ್ಪತ್ರೆಗೆ ಸೇರಿಸಿದ್ದಾರೆ.

ಇದನ್ನೂ ಓದಿ: Arecanut: ಅಡಿಕೆಯ ಬೇಸಾಯಕ್ಕೆ ಯಾವ ಸಸಿ ಆಯ್ಕೆ ಮಾಡಿದರೆ ಉತ್ತಮ? ಸದೃಢವಾಗಿ ಬೆಳೆಯುವ ಸಸಿ ಯಾವುದು? ಇಲ್ಲಿದೆ ಸಂಪೂರ್ಣ ವಿವರ!!

ಈ ಮೂಲಕ ಪ್ರಥಮ ಚಿಕಿತ್ಸೆ ನೀಡಿದ್ದು, ಅರಣ್ಯ ಇಲಾಖೆಯ ಅಧಿಕಾರಿ ಉಲ್ಲಾಸ್‌ ಅವರ ಗಮನಕ್ಕೆ ಈ ವಿಷಯವನ್ನು ತರಲಾಗಿದ್ದು, ನಂತರ ಮಂಗನಿಗೆ ಚಿಕಿತ್ಸೆ ನೀಡಿದ ಬಳಿಕ ಇದೀಗ ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಬಿಡಲಾಗಿದೆ ಎಂದು ವರದಿಯಾಗಿದೆ.

1 Comment
Leave A Reply

Your email address will not be published.