Union Budget 2024: ಕೇಂದ್ರ ಬಜೆಟ್‌ನಲ್ಲಿ ಸರಕಾರಿ ನೌಕರರಿಗೆ ಗುಡ್‌ನ್ಯೂಸ್ ಸಾಧ್ಯತೆ!!!
Nirmala SItaraman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಇಂದು (ಫೆ.1) ರಂದು ಮೋದಿ ಸರಕಾರದ ಕೊನೆಯ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡನೆಯಾಗಲಿದ್ದು, ಇದಕ್ಕೆ ಎಲ್ಲಾ ತಯಾರಿ ನಡೆದಿದೆ.
ಜನರು ಹಣಕಾಸು ಸಚಿವರಿಂದ ಈ ಬಾರಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರಲ್ಲಿ ಸರಕಾರಿ ನೌಕರರ ಬಹುಕಾಲದ ಬೇಡಿಕೆ ಈ ಭಾರಿ ಈಡೇರುವ ವಿಶ್ವಾಸವನ್ನು ಹೊಂದಿದ್ದಾರೆ ಎನ್ನಲಾಗಿದೆ.
18 ತಿಂಗಳ ಫ್ರೀಜ್ ಬಾಕಿ ಪಾವತಿಗಾಗಿ ಸರಕಾರಿ ನೌಕರರು ಕಾಯುತ್ತಿದ್ದಾರೆ. ಕೊರೊನಾ ಅವಧಿಯಲ್ಲಿ 2020 ರಿಂದ 2021ರ ವರೆಗೆ 18 ತಿಂಗಳವರೆಗೆ ಡಿಎ ಅಂದರೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಿಲ್ಲ ಸರಕಾರ. ಈ ಬಾರಿಯ ಬಜೆಟ್‌ನಲ್ಲಿ ಈ ಕುರಿತು ಸರಕಾರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಹಾಗೆನೇ ಎಂಟನೇ ವೇತನ ಆಯೋಗವನ್ನು (8th Pay Commission) ಕೂಡಾ ಸರಕಾರ ಇನ್ನೂ ರಚಿಸಿಲ್ಲ. ಈ ಕುರಿತು ನೌಕರರ ಸಂಘಟನೆಗಳು ಹೋರಾಟ ನಡೆಸುತ್ತಲೇ ಇದೆ. ಈ ಬಾರಿ ವೇತನ ಹೆಚ್ಚಿಸುವ ಸಮಯ ಬಂದಿದೆ ಎಂದು ತಜ್ಞರ ಅಭಿಪ್ರಾಯ.
ಕಳೆದ ಮೂರು ವರ್ಷಗಳಿಂದ ಸರಕಾರಕ್ಕೆ ಕೊರೊನಾ ಲಾಕ್‌ಡೌನ್ ಒಂದು ಸವಾಲಾಗಿತ್ತು. ಈ ಕಾರಣಕ್ಕೆ ಸರಕಾರಿ ನೌಕರರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಿಲ್ಲ. ಹಾಗಾಗಿ ಈ ಬಾರಿ ಸರಕಾರ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.