PM Kisan: ಪಿಎಂ ಕಿಸಾನ್ ಹಣ ಶೇಕಡಾ 50ರಷ್ಟು ಹೆಚ್ಚಳ! ಗುಡ್‌ನ್ಯೂಸ್‌ ನೀಡಿದ ಸರಕಾರ!!!

PM Kissan: ಈ ವರ್ಷದ ಮಧ್ಯಂತರ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಪಾವತಿಯನ್ನು ಶೇಕಡಾ 50 ರಷ್ಟು ಹೆಚ್ಚಿಸಬಹುದು.ವರ್ಷಕ್ಕೆ 6000 ದಿಂದ 9000 ರದ ವರೆಗೆ ನೀಡಬಹುದಾದ ಸಾಧ್ಯತೆ ಇದೆ ಎಂದು ತಿಳಿದು ಬಂದಿದ್ದೆ.

ಇದನ್ನೂ ಓದಿ: Chennai: ಬಾಡಿಗೆದಾರರ ಮನೆಯಲ್ಲಿ ಸ್ಪೈ ಕ್ಯಾಮೆರಾ ಇಟ್ಟು ಮಹಿಳೆಯ ಖಾಸಗಿ ದೃಶ್ಯ ಸೆರೆ ಹಿಡಿದ ಮಾಲೀಕನ ಮಗ; ಅರೆಸ್ಟ್‌ ಮಾಡಿದ ಪೊಲೀಸರು!

ಕೇಂದ್ರ ವರದಿಗಳ ಪ್ರಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಒಳಗೊಂಡಿರುವ ಕಲ್ಯಾಣ ಯೋಜನೆಗಳಲ್ಲಿ ಕೆಲವು ಬದಲಾವಣೆಗಳನ್ನು ತರಲು ನರೇಂದ್ರ ಮೋದಿಯವರು ಚಿಂತನೆ ನಡೆಸುತ್ತಿದ್ದಾರೆ. ಫೆಬ್ರವರಿ 1, 2024 ಕ್ಕೆ ಬಜೆಟ್ ಅನ್ನು ಮಂಡಿಸುವ ಸಾಧ್ಯತೆ ಇದೆ. ಸುದ್ದಿ ಮೂಲದ ಪ್ರಕಾರ ಈ ವರ್ಷದ ಮಧ್ಯಂತರ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಪಾವತಿಯನ್ನು ಶೇಕಡಾ 50 ರಷ್ಟು ಹೆಚ್ಚಿಸಬಹುದು.ವರ್ಷಕ್ಕೆ 6000 ದಿಂದ 9000 ರದ ವರೆಗೆ ನೀಡಬಹುದಾದ ಸಾಧ್ಯತೆ ಇದೆ ಎಂದು ತಿಳಿದು ಬಂದಿದ್ದೆ.

ET ಹಲವು ಮಂದಿ ವಿಶ್ಲೇಷಕರು ಇದರ ಮೊತ್ತವು 8000 ದಿಂದ 10000 ವರೆಗೆ ಇರಬಹದು ಎಂದು ಅಂದಾಜು ಮಾಡಿದ್ದಾರೆ. ಇದರ ಜೊತೆಗೆ ಕೆಲವರು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ವರ್ಷಕ್ಕೆ 9000 ಸಾವಿರ ಆಗಬಹುದೆಂದು ಅಂದಾಜು ಮಾಡಲಾಗಿದೆ. 2024 ರ ಬಜೆಟ್ ನ ಪ್ರಮುಖ ಮೂರು ಸಾಮಾಜಿಕ ಹೊಲಯ ಘೋಷಣೆಗಳಲ್ಲಿ ಪಿಎಂ ಕಿಸಾನ್ ಯೋಜನೆ. ಅಡಿಯಲ್ಲಿ ಪಾವತಿಯ ಹೆಚ್ಚಳವು ಒಂದಾಗಿದೆ ಎಂದು ಆರ್ಥಿಕ ತಜ್ಞರು ನಂಬಿದ್ದಾರೆ ಎಂದು ET ವರದಿಯು ತಿಳಿಸಿದೆ. ಇದರ ಜೊತೆಗೆ ಕೇಂದ್ರದ ವಸತಿ ಯೋಜನೆ, PM ಆವಾಸ್ ಯೋಜನೆಗಳು ಬಜೆಟ್ ನಲ್ಲಿ ಮುಖ್ಯವಾಗುತ್ತವೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ಕಳೆದ ವರ್ಷದಲ್ಲಿ ಬಜೆಟ್ ನಲ್ಲಿ ಪಿಎಂ ಕಿಸಾನ್ ಯೋಜನೆಯ ಗಾತ್ರ 60,000 ಕೋಟಿ ವೆಚ್ಚವಾಗಿತ್ತು. ಆದರೆ ಈ ಬಜೆಟ್ ನಲ್ಲಿ ಅದು 50 ರಷ್ಟು ಹೆಚ್ಚಾಗುವ ಸಾದ್ಯತೆ ಇದೆ ಎನ್ನಬಹುದು. ಕಲ್ಯಾಣ ಯೋಜನೆಗಳ ಹೊರತಾಗಿ, ಖಾಸಗಿ ವಲಯದ ಹೂಡಿಕೆಯು ವಲಯಗಳಾದ್ಯಂತ ಇನ್ನೂ ಹೆಚ್ಚಾಗದ ಕಾರಣ, ಕೇಂದ್ರವು ಬಂಡವಾಳ ವೆಚ್ಚದ ಒತ್ತಡವನ್ನು ಮುಂದುವರಿಸುವ ನಿರೀಕ್ಷೆಯಿದೆ ಎಂದು ವರದಿ ಸೂಚಿಸುತ್ತದೆ.

ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಬಂದರುಗಳು, ರಸ್ತೆಗಳು, ವಿದ್ಯುತ್ ಸ್ಥಾವರಗಳ ಮೇಲಿನ ವೆಚ್ಚಕ್ಕೆ ಆದ್ಯತೆ ನೀಡುವ ಮೂಲಕ ಬಂಡವಾಳ ವೆಚ್ಚವನ್ನು ಮೂರನೇ ಒಂದು ಭಾಗದಷ್ಟು ಹೆಚ್ಚಿಸಿದೆ. 2024 ರ ಬಜೆಟ್ ನಲ್ಲಿ ಈ ವಲಯಗಳು ಉತ್ತೇಜನ ಕಾಣುವ ಸಾಧ್ಯತೆಗಳಿವೆ.

2024ರ ಬಜೆಟ್‌ಗೂ ಮುನ್ನ ಸರ್ವಪಕ್ಷ ಸಭೆ:

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು 2024 ರ ಬಜೆಟ್ ಗೆ ಮುನ್ನ ಸರ್ವ ಪಕ್ಷಗಳ ಸಭೆಯನ್ನು ಮಂಗಳವಾರ ಕರೆಯಲಾಗಿದೆ. ಇಲ್ಲಿ ವಿವಿಧ ಪಕ್ಷಗಳ ನಾಯಕರು ತಮ್ಮ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಸರ್ಕಾರವು ತನ್ನ ಕಾರ್ಯ ಸೂಚಿಯ ಬಗ್ಗೆ ಒಂದು ಪಕ್ಷಿನೋಟ ನೀಡುತ್ತದೆ. ಗಮನಿಸಬೇಕಾದ ಅಂಶವೆಂದರೆ ಎಫ್‌ಎಂ ಸೀತಾರಾಮನ್ ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಅನ್ನು ಮಾತ್ರ ಮಂಡಿಸಲಿದ್ದಾರೆ. ಮುಂಬರುವ ಹಣಕಾಸು ವರ್ಷದ ಸಂಪೂರ್ಣ ಕೇಂದ್ರ ಬಜೆಟ್ ಅನ್ನು ಲೋಕಸಭೆ ಚುನಾವಣೆ ಮತ್ತು ಹೊಸ ಕ್ಯಾಬಿನೆಟ್ ನೇಮಕದ ನಂತರ ಮಂಡಿಸಲಾಗುವುದು.

ಪ್ರಧಾನ ಮಂತ್ರಿ ಸಮ್ಮಾನ್ ಕಿಸಾನ್ ನಿಧಿಯನ್ನು 2019 ರಲ್ಲಿ ನರೇಂದ್ರ ಮೋದಿ ಆರಂಭಿಸಿದರು. ದೇಶದ ಎಲ್ಲ ರೈತರಿಗೆ , ಭೂಮಾಲೀಕರಿಗೆ ಆದಾಯ ಬೆಂಬಲ ನೀಡುವ ಯೊಜನೆ ಇದಾಗಿದೆ . ಈ ಯೋಜನೆಯಡಿಯಲ್ಲಿ ವರ್ಷಕ್ಕೆ 6000 ರೂಗಳನ್ನು 2000 ಗಳಂತೆ ಮೂರು ಕಂತುಗಳಲ್ಲಿ ನೇರವಾಗಿ ಪಲನುಭವಿ ಬ್ಯಾಂಕ್ ಖಾತೆಗೆ ಬಿಡುಗಡೆಗೆ ಮಾಡಲಾಗುತ್ತದೆ.

Leave A Reply

Your email address will not be published.