Viral News: ಚಕ್ಕುಲಿ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು!!!

ತೆಲಂಗಾಣದ ಮಂಚಿರ್ಯಾಲ್‌ನಲ್ಲಿ ಸಂಜೆಯ ಸಮಯದಲ್ಲಿ ಚಕ್ಕುಲಿ ತಿಂದಿದ್ದು, ಅದು ಗಂಟಲಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಮಂಚಿರ್ಯಾಲ್‌ನ ಹಮಾಲಿವಾಡದ ಎನ್‌ ರಂಗರಾವ್‌ (65) ಎಂಬುವವರೇ ಮೃತ ವ್ಯಕ್ತಿ. ಇವರು ದಿನಗೂಲಿ ಕಾರ್ಮಿಕನಾಗಿದ್ದ ಇವರು ಮಂಗಳವಾರ ಸಂಜೆ ಚಹಾ ಕುಡಿಯುವ ಸಂದರ್ಭ ಚಕ್ಕುಲಿ ತಿಂದಿದ್ದಾರೆ. ಎಲ್ಲರ ಜೊತೆಯಲ್ಲಿ ಮಾತನಾಡುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದ ರಂಗರಾವ್‌ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಚಹಾದ ಜೊತೆಗೆ ಸೇವಿಸಿದ್ದ ಚಕ್ಕುಲಿ ಗಂಟಲಲ್ಲಿ ಸಿಕ್ಕಿ ಉಸಿರುಗಟ್ಟಿ ರಂಗರಾವ್‌ ಮೃತಪಟ್ಟಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಈ ಕುರಿತು ಸಬ್‌ ಇನ್ಸ್‌ಪೆಕ್ಟರ್‌ ರಾಜೇಂದರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Leave A Reply

Your email address will not be published.