Areca nut farming: ಅಡಿಕೆಯನ್ನು ವೈಜ್ಞಾನಿಕವಾಗಿ ಬೆಳೆಯಬಹುದ?

Arecanut: ಅಡಿಕೆಯು ಒಂದು ತೋಟಗಾರಿಕಾ ಬೆಳೆಯಾಗಿದೆ. ಇದರ ಮೂಲ ಸ್ಥಳ ಮಲೇಶಿಯಾ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಅಡಿಕೆಯ ವೈಜ್ಞಾನಿಕ ಹೆಸರು ಅರೆಕಾ ಕಾಟೆಚು. ಅಡಿಕೆ ಇಲ್ಲದೆ ಯಾವುದೇ ಶುಭ ಕಾರ್ಯಗಳು ಸಮಾರಂಭಗಳು ನಡೆಯುವುದಿಲ್ಲ. ಅಡಿಕೆ ರೈತರ ಬದುಕು ಎಲ್ಲ ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರನ್ನು ಕಾಣಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧಿಕ ಇಳುವರಿ ಬರುವ ತಳಿಗಳು ಯಾವುವು?. ಕೊಳೆರೋಗದಿಂದ ಸಸ್ಯ ರಕ್ಷಿಸುವುದು ಹೇಗೆ? ವರ್ಷದ ಸಸಿಯನ್ನು ಆಯ್ಕೆ ಮಾಡಬೇಕು? ಯಾವ ಬೇಸಾಯ ಕ್ರಮವನ್ನು ಅನುಸರಿಸಬೇಕು? ಎಂಬುವುದರ ಬಗ್ಗೆ ಗೊಂದಲ ಶುರುವಾಗಿದೆ. ಅಧಿಕ ಇಳುವರಿ ಪಡೆಯುವುದು ಹೇಗೆ? ಸಸ್ಯ ಸಂರಕ್ಷಣೆ ಮಾಡಬಹುದು? ಎಂಬ ಆತಂಕ ಹುಟ್ಟಿಕೊಂಡಿದೆ.

ಇದನ್ನೂ ಓದಿ: Ayodhya Ramalalla: ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆಯಿಂದ ರಾಮಲಲ್ಲನ ಕಣ್ಣುಗಳ ಕೆತ್ತನೆ! ಶಿಲ್ಪಿ ಅರುಣ್‌ ಕಣ್ಣುಗಳ ಕೆತ್ತನೆಗೆ ತೆಗೆದುಕೊಂಡ ಸಮಯವೆಷ್ಟು?

ಅಡಿಕೆಯು ಒಂದು ವಾರ್ಷಿಕ ಬೆಳೆಯಾಗಿದೆ. ಅಡಿಕೆಗೆ ಅಧಿಕ ನೀರು ನಿಲ್ಲುವ ಪ್ರದೇಶಸೂಕ್ತವಲ್ಲ. ಒಣಭೂಮಿ ಯೋಗ್ಯವಾಗಿರುತ್ತದೆ. ಅಧಿಕ ನೀರು ನಿಲ್ಲುವ ಪ್ರದೇಶದಲ್ಲಿ ಟ್ರೈಚ್ ಅಥವಾ ಗುಂಡಿಗಳನ್ನು ಮಾಡಬಾರದು. ಟ್ರ್ಯಾಕ್ಟರ ಬಳಸಿ ಉಳುಮೆ ಮಾಡುವಂತೆ ಮಣ್ಣಿನ ಮೇಲ್ಪಾದರಕ್ಕೆ ಗಿಡಗಳನ್ನು ನಾಟಿ ಮಾಡುವುದು ಸೂಕ್ತ. ಇನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಟ್ರಾಂಚ್ ಹೊಡೆದು ನಾಟಿ ಮಾಡುವುದು ಸೂಕ್ತ. ಇದರಿಂದ ನಾವು ಹಾಕಿದ ಗೊಬ್ಬರ ಹೊರಹೋಗದಂತೆ ಕಾಪಾಡಬಹುದು.

ಅಡಿಕೆ ಮರಕ್ಕೆ ಅಂತರ ಬಹಳ ಮುಖ್ಯವಾಗಿದ್ದು ಒಂದು ಅಡಿಕೆ ಮರದ ಆರ್ಥಿಕ ಆಯಸ್ಸು ಕೇವಲ25 ವರ್ಷ ಮಾತ್ರ. 25 ವರ್ಷಗಳು ಪೂರ್ಣವಾಗಿ ಇಳುವರಿ ಬರಬೇಕಾದರೆ 9*9 ಅಂತರದಲ್ಲಿ ಗಿಡಗಳನ್ನು ನಾಟಿ ಮಾಡುವುದು ಸೂಕ್ತ. ಕೆಲವರು 7-7ಅಂತರದಲ್ಲಿ, ನಾಟಿ ಮಾಡುತ್ತಾರೆ. ಅದು ಕೇವಲ 2-3 ವರ್ಷಗಳ ಕಾಲ ಉತ್ತಮ ಇಳುವರಿ ಬಂದು ನಂತರ ಇಳುವರಿ ಕ್ಷೀಣಿಸುತ್ತದೆ. ಈ ಕಾರಣದಿಂದ ಅಡಿಕೆ ಗಿಡಕ್ಕೆ ಅಂತರ ಮುಖ್ಯವಾದದ್ದು.

ಅಡಿಕೆಯಲ್ಲಿ ಯಾವ ತಳಿ ಸೂಕ್ತ ಎಂಬುದು ಎಲ್ಲಾ ಕೃಷಿಕರ ಪ್ರಶ್ನೆ .?ಕೆಲವರಿಗೆ ಮಂಗಳ ಇನ್ನು ಕೆಲವರಿಗೆ ಲೋಕಲ್ ತಳಿಗಳು ಹಲವರಿಗೆ ಹಿರೇಹಳ್ಳಿ.. .ಈ ರೀತಿಯಾಗಿ ಅನೇಕ ತಳಿಗಳು ಉಂಟು. ಇಲ್ಲಿ ರೈತರು ಗಮನಿಸಬೇಕಾದ ಅಂಶಗಳೆಂದರೆ.ಮುಖ್ಯವಾಗಿ ಈ ಎಲ್ಲಾ ತಳಿಗಳ ಗುಣಗಳು ಒಂದೇ ಆಗಿರುತ್ತದೆ. ಆದರೆ ಇಳುವರಿಯಲ್ಲಿ ಅರ್ಧದಿಂದ ಒಂದು ಕೆಜಿ ಯಷ್ಟು ವ್ಯತ್ಯಾಸ ಕಂಡುಬರುತ್ತದೆ. ನಮ್ಮ ಬೇಸಾಯಕ್ರಮ ಉತ್ತಮವಾಗಿದ್ದರೆ ಸಾಕು. ನಮ್ಮ ಮಣ್ಣಿಗೆ ಎಲ್ಲಾ ತಳಿಗಳು ಒಗ್ಗಿಕೊಳ್ಳುತ್ತವೆ.

ವೈಜ್ಞಾನಿಕವಾಗಿ ಅಡಿಕೆಗೆ 3-1 ಗುಂಡಿಗಳು ಸೂಕ್ತ .ಏಕೆಂದರೆ ಮಣ್ಣಿನ ಮೇಲ್ಪಾದರದಲ್ಲಿ ಗಿಡಗಳಿಗೆ ಬೇಕಾದ ಎಲ್ಲಾ ಜೈವಿಕ ಆಹಾರಗಳನ್ನು ಒದಗಿಸುವ ಕೀಟನಾಶಕ ಗುಣವುಳ್ಳ ಸೂಕ್ಷ್ಮಜೀವಿಗಳು. ಮಣ್ಣಿನ ಪರಿವರ್ತಕಗಳು. ಇರುವುದರಿಂದ ಗಿಡವನ್ನು ಸದೃಢವಾಗಿ ಬೆಳೆಯಲು ಸಹಾಯವಾಗುತ್ತದೆ. ಅಡಿಕೆ ಗಿಡವು ಎರಡು ರೀತಿಯ ಬೇರುಗಳನ್ನು ಹೊಂದಿರುತ್ತದೆ. ಕಾಂಡದಲ್ಲಿ ಆಧಾರ ಬೇರನ್ನು ಹೊಂದಿರುತ್ತದೆ. ಇವು ಗಿಡಗಳಿಗೆ ಆಧಾರವಾಗಿರುತ್ತವೆ.ಗಿಡದ ಬುಡದಿಂದ ಎರಡು ಅಡಿ ದೂರದಲ್ಲಿ ಇರುವುದೇ ಆಹಾರ ಬೇರುಗಳು. ಇವು ಗಿಡಗಳಿಗೆ ಬೇಕಾದ ಎಲ್ಲಾ ಆಹಾರಗಳನ್ನು ಒದಗಿಸುವಂತಹವು. ಕೃಷಿಕರು ಗಮನಿಸಬೇಕಾದದ್ದು ಗಿಡಗಳಿಗೆ ಗೊಬ್ಬರ ಇತ್ಯಾದಿಗಳನ್ನು ಕೊಡುವಾಗ ಗಿಡಗಳಿಂದ ದೂರದಲ್ಲಿ ನೀಡುವುದು ಸೂಕ್ತ.

ಗಿಡ ನಾಟಿ ಮಾಡುವಾಗ ಎಲ್ಲಾ ಪ್ರದೇಶಗಳಲ್ಲಿ ರೈತರು ಅನುಸರಿಸಬೇಕಾದ ಕ್ರಮ. ಮಣ್ಣಿನ ಪಿಎಚ್ ಮೌಲ್ಯವು ಒಂದು ಸಸ್ಯದ ಬೆಳವಣಿಗೆಗೆ ಅತ್ಯಂತ ಮುಖ್ಯವಾಗಿದ್ದು. ಮಣ್ಣಿನ ಪಿಎಚ್ ಮೌಲ್ಯವು 7 ಕಿಂತ ಹೆಚ್ಚಿದ್ದರೆ ಮಾತ್ರ ನಾವು ನೀಡಿದ ಆಹಾರವನ್ನು ಮಣ್ಣು ಹೀರಿಕೊಳ್ಳುತ್ತದೆ. ಇದಕ್ಕಾಗಿ ಮಣ್ಣಿನ ಪಿಎಚ್ ಮೌಲ್ಯವನ್ನು ಹೆಚ್ಚಿಸಬೇಕು. ಅಡಿಕೆ ಗಿಡದ ನಾಟಿಗೆ ಮುನ್ನ ಒಂದು ಗಿಡಕ್ಕೆ 200 ಗ್ರಾಂ ಸುಣ್ಣ, 2 ರಿಂದ 3 ಕೆಜಿ ಕಾಂಪೋಸ್ಟ್ ಗೊಬ್ಬರ, 250ರಿಂದ 300 ಗ್ರಾಂ ಕಹಿಬೇವಿನ ಹಿಂಡಿ ಜೊತೆಯಲ್ಲಿ ರಾಕ್ ಪಾಸ್ಪೆಟ್.

ಇವುಗಳನ್ನು ನಾಟಿಗೆ ಮುನ್ನ 15 ದಿನ ಮುಂಚಿತವಾಗಿ ಬಳಸುವುದು ಸೂಕ್ತ. ನಾಟಿಗೆ 6 ತಿಂಗಳ ಒಳಗಿನ ಗಿಡಗಳು ಸೂಕ್ತವಾಗಿರುತ್ತವೆ. ಸದೃಢವಾಗಿ ಬೆಳೆಯುತ್ತದೆ. ಗಿಡಗಳ ನಾಟಿಗೆ ಸೂಕ್ತ ಸಮಯ ಜೂನ್ ಮತ್ತು ಜುಲೈ ತಿಂಗಳುಗಳು. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಸಸಿ ನಾಟಿ ಮಾಡುವವರು ಗಿಡಗಳನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸಬೇಕಾಗುತ್ತದೆ. ಅದಕ್ಕಾಗಿ ದಕ್ಷಿಣಕ್ಕೆ ಅಡ್ಡಲನ್ನು ಹೂಡ ಬೇಕಾಗುತ್ತದೆ .

ಇತ್ತೀಚೆಗೆ ರೈತರು ಸಸ್ಯ ಸಂರಕ್ಷಣೆಯ ಬಗ್ಗೆ ಯೋಚಿಸುತ್ತಿಲ್ಲ. ಅಡಿಕೆಗೆ ಪ್ರಮುಖವಾಗಿ ಬುಡ ಕೊಳೆ ರೋಗ, ಸುಳಿ ಕೊಳೆಯುವ ರೋಗ, ಕಾಯಿ ಕೊಳೆರೋಗ ಕಾಣಿಸಿಕೊಳ್ಳುತ್ತದೆ. ಗಿಡ ನಾಟಿ ಮಾಡಿದ ಮೊದಲನೇ ವರ್ಷದಿಂದಲೇ ಸಸ್ಯ ಸಂರಕ್ಷಣೆ ಮಾಡಬೇಕು. ಬೋಡೋ ದ್ರಾವಣ 200 ಲೀಟರ್ ನೀರಿಗೆ. 2 ಕೆಜಿ ಮೈಲುತುತ್ತು 1ಕೆಜಿ ಸುಣ್ಣ, 200ಮೀ ಸ್ಪೆಂಡರ್ ಗಳನ್ನು ಬಳಸಿಕೊಂಡು ಗಿಡದ ಎಲ್ಲಾ ಹಸಿರು ಭಾಗಗಳಿಗೂ ಸಿಂಪಡಿಸಬೇಕು. ಜೂನ್ ತಿಂಗಳಲ್ಲಿ ಮೊದಲನೇ ವಾರದಲ್ಲಿ ಆಗಸ್ಟ್ ಎರಡನೇ ವಾರದಲ್ಲಿ ಮಾಡಬೇಕು.

ನಂತರ ಪ್ರತಿ ತಿಂಗಳಿಗೊಮ್ಮೆ ಮಾಡಬೇಕಾಗುತ್ತದೆ. ಅಡಿಕೆ ಗಿಡಕ್ಕೆ ಗೊಬ್ಬರ ನೀಡುವುದು ಬಹಳ ಮುಖ್ಯವಾಗಿದ್ದು. ಗೊಬ್ಬರ ನೀಡುವ ಮುನ್ನ ನೀರನ್ನು ಕಟ್ಟಬೇಕು. ನಂತರ ಯಾವುದೇ ಗೊಬ್ಬರವನ್ನು ನೀಡುವುದು ಸೂಕ್ತ. ಮೊದಲನೆಯ ವರ್ಷದಲ್ಲಿ ತಿಂಗಳಿಗೊಮ್ಮೆ ಎರಡನೇ ವರ್ಷದಲ್ಲಿ ತಿಂಗಳಿಗೆ ಎರಡು ಬಾರಿ ಮೂರನೇ ವರ್ಷದಲ್ಲಿ ತಿಂಗಳಿಗೆ ಮೂರು ಬಾರಿ ಹೀಗೆ ಗೊಬ್ಬರವನ್ನು ಕೊಡುವುದು ಸೂಕ್ತ.

ಎಲ್ಲಾ ಕ್ರಮಗಳನ್ನು ರೈತರು ಅನುಸರಿಸಿದರೆ ಇಳುವರಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಸ್ಯಸಂರಕ್ಷಣೆಯು ಸಾಧ್ಯವಾಗುತ್ತದೆ. ಕೃಷಿಕರು ತಮ್ಮ ಬದುಕನ್ನು ಕಟ್ಟಿಕೊಳ್ಳಬಹುದು.

Leave A Reply

Your email address will not be published.