Suicide Tragedy: 6ನೇ ಮಹಡಿಯಿಂದ ಜಿಗಿದು PES ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ!

PES College: ಪಿಇಎಸ್‌ ಕಾಲೇಜಿನ ಆರನೇ ಅಂತಸ್ತಿನಿಂದ ಜಿಗಿದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬೆಂಗಳೂರಿನ ಹೊಸರೋಡ್‌ ಬಳಿಯಿರುವ ಕಾಲೇಜಿನಲ್ಲಿ ನಡೆದಿದೆ.

 

ಇದನ್ನೂ ಓದಿ: Schoking news: 8 ವರ್ಷದ ಪ್ರೀತಿಯ ಮದುವೆಗೆ ಕೆಲವೇ ದಿನ ಬಾಕಿ, ಭಾವಿ ಗಂಡ ಹೇಳಿದ್ದನ್ನು ಕೇಳಿ ಕುಸಿದು ಬಿದ್ದ ಮದುಮಗಳು !!

ವಿಘ್ನೇಶ್‌ ಕೆ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.

ಈ ಘಟನೆ ಮಂಗಳವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಘ್ನೇಶ್‌ ಪಿಇಎಸ್‌ ಕಾಲೇಜಿನಲ್ಲಿ ಬಿಬಿಎ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ. ಸಂಜೆ ಹೊತ್ತಿಗೆ ಇಂಜಿನಿಯರ್‌ ವಿಭಾಗದ ಆರನೇ ಮಹಡಿಗೆ ಬಂದವನೇ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕೃತ್ಯಕ್ಕೆ ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಬಿದ್ದ ರಭಸಕ್ಕೆ ವಿಘ್ನೇಶ್‌ ಸ್ಥಳದಲ್ಲೇ ಮೃತ ಹೊಂದಿದ್ದಾನೆ. ಸ್ಥಳಕ್ಕೆ ಅಗ್ರಹಾರ ಪೊಲೀಸರು ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.