Belagavi: ಬೆಳಗಾವಿಯಲ್ಲಿ ಬೆಚ್ಚಿಬೀಳಿಸೋ ಘಟನೆ- ಮದುವೆಯಾಗಿ ತಿಂಗಳಿಗೇ ಲವರ್ ಜೊತೆ ಎಸ್ಕೇಪ್ ಆದ ಪತ್ನಿ, ಇಬ್ಬರ ಹೆಣ ಉರುಳಿಸಿದ ಪತಿ !!

Belagavi: ಬೆಳಗಾವಿಯಲ್ಲಿ ಬೆಚ್ಚಿಬೀಳಿಸೋ ಘಟನೆಯೊಂದು ನಡೆದಿದ್ದು, ಮದುವೆಯಾಗಿ 30ದಿನಕ್ಕೆ ಲವರ್ ಜೊತೆ ಎಸ್ಕೇಪ್ ಆದ ತನ್ನ ಪತ್ನಿಯನ್ನು ಹಿಗೂ ಆಕೆಯ ಲವರ್ ಅನ್ನು ಹುಡುಕಿ ಗಂಡನು ಇಬ್ಬರ ಹೆಣ ಉರುಳಿಸಿದ ಪ್ರಕರಣ ಬೆಳಕಿಗೆ ಬಂದಿದೆ !!

ಇದನ್ನೂ ಓದಿ: MLA Balakrishna: ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಿಸದಿದ್ರೆ ಗ್ಯಾರಂಟಿ ಯೋಜನೆ ಬಂದ್ ಮಾಡ್ತೇವೆ – ಕಾಂಗ್ರೆಸ್ ಶಾಸಕರಿಂದ ಜನರಿಗೆ ಬ್ಲಾಕ್ ಮೇಲ್ !!

ಹೌದು, ಬೆಳಗಾವಿ(Belgavi) ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರ ವಲಯದಲ್ಲಿ ಮದುವೆಯಾಗಿ ಕೇವಲ ಒಂದು ತಿಂಗಳಿಗೆ ಕೈಕೊಟ್ಟು ಓಡಿ ಹೋದ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಹುಡುಕಿದ ಗಂಡ ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಯಾಸಿನ ಬಾಗೊಡೆ (21) ಹಾಗೂ ಹೀನಾಕೌಸರ್ ಸುದಾರಾಣೆ (19) ಕೊಲೆಯಾದ ಜೋಡಿಯಾಗಿದ್ದಾರೆ. ತೌಫಿಕ್ ಕ್ಯಾಡಿ (24) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇಷ್ಟೇ ಅಲ್ಲದೆ ಇಬ್ಬರ ಮೇಲೆ ಹಲ್ಲೆ ಮಾಡುವ ವೇಳೆ ಬಿಡಿಸಲು ಬಂದಿದ್ದ ತಾಯಿ ಅಮಿನಾಬಾಯಿ ಬಾಗೂಡ ಹಾಗೂ ಮಾವ ಮುಸ್ತಫಾ ಮುಲ್ಲಾನ ಮೇಲು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ತೌಫಿಕ್.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಏನಿದು ಘಟನೆ?

ಕಳೆದ 4 ತಿಂಗಳ ಹಿಂದೆ ತೌಫಿಕ್ ಹಾಗೂ ಹೀನಾ ಕೌಸರ್‌ಳಿಗೆ ಮದುವೆಯಾಗಿತ್ತು. ಮದುವೆಯಾಗಿ ಕೇವಲ 1 ತಿಂಗಳಿಗೆ (30 ದಿನಗಳು) ಹೆಂಡತಿ ಹೀನಾ ಕೌಸರ್ ಆಕೆಯ ಹಳೆ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಬಳಿಕ ಸಮಾಜದ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿದಾಗ ತಾನು ತೌಫಿಕ್‌ ಜೊತೆಗೆ ಸಂಸಾರ ಮಾಡುವುದಿಲ್ಲ, ಯಾಸೀನ್‌ನೇ ಬೇಕು ಎಂದು ಹೀನಾ ಹಠ ಮಾಡಿದ್ದಾಳೆ. ಆಗ ಗ್ರಾಮಸ್ಥರೆಲ್ಲರೂ ಸೇರಿ ತೌಫಿಕ್‌ ಜೊತೆಗಿನ ವಿವಾಹವನ್ನು ಮುರಿದು ಯಾಸಿನ್ ಬಾಗೊಡೆ ಜೊತೆಗೆ ಹಿರಿಯರೆಲ್ಲರು ಸೇರಿ ಮದುವೆ ಮಾಡಿಸಿದ್ದರು. ಆದರೆ ಇದನ್ನು ಕಂಡು ಸಹಿಸಿಕೊಳ್ಳಲಾಗದ ತೌಫಿಕ್‌ ತನ್ನ ಮಾಜಿ ಪತ್ನಿ ಹಾಗೂ ಆಕೆಯ ಹಾಲಿ ಗಂಡನನ್ನು ಹುಡುಕಿ ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆರೋಪಿ ತೌಫಿಕ್‌ ನಾಪತ್ತೆಯಾಗಿದ್ದು, ಪತ್ತೆಗಾಗಿ ಪೊಲೀಸರು ಎರಡೂ ತಂಡಗಳಾಗಿ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.

Leave A Reply

Your email address will not be published.