Bigg Boss ಡ್ರೋನ್‌ ಪ್ರತಾಪ್‌ ಸೋಲು, ಅರ್ಧ ಗಡ್ಡ, ಮೀಸೆ ತೆಗೆದ ಕಡಬದ ಯುವಕ!!!

Kadaba: ಬಿಗ್‌ಬಾಸ್‌ ಸೀಸನ್‌ 10 ರಲ್ಲಿ ಡ್ರೋನ್‌ ಪ್ರತಾಪ್‌ ಮೊದಲ ರನ್ನರ್‌ ಅಪ್‌ ಆಗಿದ್ದಾರೆ. ಅವರು ಕಪ್‌ ಗೆಲ್ಲದೇ ಇರುವುದರಿಂದ ಅವರ ಅಭಿಮಾನಿಯೋರ್ವರು ಕಡಬದ ಯುವಕ ಇದೀಗ ವೈರಲ್‌ ಆಗಿದ್ದಾರೆ.

ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್‌ ಆಬಿದ್‌ ಬಿಗ್‌ಬಾಸ್‌ನಲ್ಲಿ ಡ್ರೋನ್‌ ಪ್ರತಾಪ್‌ ಅವರನ್ನು ಬೆಂಬಲಿಸುತ್ತಾ ಬಂದವರು.

ಡ್ರೋನ್ ಪ್ರತಾಪ್‌ ಅವರು ಬಿಗ್‌ಬಾಸ್‌ ನಲ್ಲಿ ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಇವರು ಚಾಲೆಂಜ್‌ ಹಾಕಿದ್ದರು. ಅಲ್ಲದೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಇನ್ನೊಂದು ವೀಡಿಯೋ ಹಾಕಿದ್ದರು.

 

View this post on Instagram

 

A post shared by Abi razz_ (@abirazz_daily_blogger)

ಜನರ ಅಪಾರವಾದ ಮತದಿಂದ ಇದೀಗ ಕಾರ್ತಿಕ್‌ ಅವರು ಬಿಗ್‌ಬಾಸ್‌ ಸೀಸನ್‌ 10 ರ ವಿನ್ನರ್‌ ಆಗಿಯೂ, ಪ್ರತಾಪ್‌ ಅವರು ರನ್ನರ್‌ ಆಗಿ ಸಮಾಧಾನ ಪಟ್ಟುಕೊಂಡಿದ್ದಾರೆ. ಫಲಿತಾಂಶ ಹೊರಬರುತ್ತದೇ ಆಬಿದ್‌ ಅವರು ತಾವು ಚಾಲೆಂಜ್‌ ಮಾಡಿದ ಪ್ರಕಾರ, ತಮ್ಮ ಮಾತಿನ ಪ್ರಕಾರ ನಡೆದುಕೊಂಡಿದ್ದಾರೆ. ಅದರ ಪ್ರಕಾರ ಅರ್ಧ ಗಡ್ಡ ಮೀಸೆ ಬೋಳಿಸಿಕೊಂಡು ಹಸಿಮೆಣಸಿನಕಾಯಿ ತಿಂದು ವೀಡಿಯೋ ಅಪ್ಲೋಡ್‌ ಮಾಡಿದ್ದಾರೆ.

Leave A Reply

Your email address will not be published.