Hanumadhwaja case : ಮಂಡ್ಯ ಹನುಮಧ್ವಜ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಭಾರೀ ಕುತೂಹಲ ಕೆರಳಿಸಿದ ಸರ್ಕಾರದ ಹೊಸ ನಡೆ !!

Hanumadhwaja case: ಮಂಡ್ಯ (Mandya) ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಕಳೆದ ಶನಿವಾರ ರಾತ್ರಿ ಹನುಮಧ್ವಜ (Hanuma Dhwaja) ಹಾರಿಸಿದ್ದನ್ನು ಪೊಲೀಸರನ್ನು ಬಳಸಿ ಕೆಳಗೆ ಇಳಿಸಿದ್ದ ಪ್ರಕರಣದ ಹೋರಾಟ ಇದೀಗ ಹಿಂಸಾಚಾರದ ಸ್ವರೂಪ ಪಡೆದುಕೊಂಡಿದೆ. ಈ ವಿಚಾರವಾಗಿ ಬಿಜೆಪಿ ಭಾರೀ ಪ್ರತಿಭಟನೆ ನಡೆಸುತ್ತಿದೆ. ಆದರೀಗ ಈ ವಿಚಾರವಾಗಿ ಸರ್ಕಾರದ ನಡೆ ಬಾರಿ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: CM Siddaramaiah: ಲೋಕಸಭಾ ಚುನಾವಣೆ- ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಹೌದು, ಕೆರಗೋಡು(Keragodu) ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂತಿರುವ ಹನುಮಧ್ವಜ ಇಳಿಸಿದ ಘಟನೆ ಸಂಬಂಧ ಹಾಗೂ ದು ಭಾರೀ ವಿವಾದ ಸೃಷ್ಟಿ ಹಾಕಿದ್ದ ಹಿನ್ನೆಲೆಯಲ್ಲಿ ಸರ್ಕಾರದಿಂದ ಗ್ರಾಮ ಪಂಚಾಯಿತಿ ಅಧಿಕಾರಿಯನ್ನು (ಪಿಡಿಒ) ತಲೆದಂಡ ಮಾಡಲಾಗಿದೆ. ಅಂದರೆ ಈ ಇಡೀ ಪ್ರಕರಣವನ್ನು ಪಿಡಿಓ ತಲೆಗೆ ಕಟ್ಟಿ ಅವರನ್ನು ಅಮಾನತು ಮಾಡಲಾಗಿದೆ. ಅಮಾನತಿಗೆ ಐದು ಕಾರಣಗಳನ್ನು ಸಹ ನೀಡಲಾಗಿದೆ.

ಅಮಾನತ್ತಿಗೆ ಸರ್ಕಾರ ನೀಡಿದ ಐದು ಕಾರಣಗಳು

• ಗ್ರಾಮ ಪಂಚಾಯಿತಿ ಸ್ವತ್ತನ್ನು ಖಾಸಗಿಯವರಿಗೆ ನೀಡುವುದಕ್ಕೆ ಸರ್ಕಾರದ ಅನುಮತಿ ಕಡ್ಡಾಯ. ಆದ್ರೆ, ಸದರಿ ನಿಯಮ ಉಲ್ಲಂಘಿಸಿ ಖಾಸಗಿಯವರಿಗೆ ನೀಡಿರುವುದು.

• ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿ ಕರ್ತವ್ಯ ಲೋಪ.

• ಧ್ವಜ ಸ್ತಂಭದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲು ಅನುಮತಿ ನೀಡಿ, ಷರತ್ತು ಉಲ್ಲಂಘಿಸಿದ್ರು ಕ್ರಮಕೈಗೊಳ್ಳದೆ ನಿರ್ಲಕ್ಷ.

• ರಾಷ್ಟ್ರ ಧ್ವಜದ ಬದಲು ಹನುಮ ಧ್ವಜ‌ ಹಾರಿಸಲು ಅವಕಾಶ ನೀಡಿರುವುದು.

• ಹನುಮ‌ ಧ್ವಜ‌ಹಾರಿಸಿದ್ದರು ಯಾವುದೇ ಕ್ರಮ ಕೈಗೊಳ್ಳದಿರುವುದು.

 

ಅಂದಹಾಗೆ ಕೆರಗೋಡು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜೀವನ್‌.ಬಿ.ಎಂ ಅಮಾನತು ಆಗಿರುವ ಅಧಿಕಾರಿಯಾಗಿದ್ದಾರೆ. ಈ ಮೇಲೆ ಐದು ಕಾರಣಗಳನ್ನು ನೀಡಿ ಕೆರಗೋಡು ಗ್ರಾಮ ಪಂಚಾಯಿತಿ ಪಿಡಿಓ ಜೀವನ್‌.ಬಿ.ಎಂ ಅವರನ್ನು ಅಮಾನತು ಮಾಡಿ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ತನ್ವೀರ್ ಆಶೀಫ್ ಸೇಠ್ ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.