Kodi Mutt Shri: ಜಗತ್ತಿನ ಇಬ್ಬರು ಪ್ರಭಾವಿ ಪ್ರಧಾನಿಗಳು ಸಾಯುತ್ತಾರೆ – 2024ರ ಬಗ್ಗೆ ಬೆಚ್ಚಿಬೀಳಿಸೋ ಭವಿಷ್ಯ ನುಡಿದ ಕೋಡಿ ಮಠದ ಶ್ರೀ!!

Kodi mutt shri: ಕೋಡಿ ಮಠದ ಶ್ರೀಗಳ ಭವಿಷ್ಯ ಅಂದರೆ ಅದಕ್ಕೆ ತುಂಬಾ ಮಹತ್ವವಿದೆ. ಶ್ರೀಗಳು ಈಗಾಗಲೇ ನುಡಿದ ಹಲವು ಭವಿಷ್ಯಗಳು ನಿಜವಾಗಿದ್ದು, ಅಚ್ಚರಿ ಮೂಡಿಸಿವೆ. ಅಂತೆಯೇ ಇದೀಗ ಶ್ರೀಗಳು 2024 ವರ್ಷದ ಬಗ್ಗೆ ಬೆಚ್ಚಿಬೀಳಿಸೋ ಭವಿಷ್ಯ ನುಡಿದಿದ್ದಾರೆ.

ಹೌದು, 2024ರ ಕುರಿತು ಕೋಡಿ ಮಠದ ಶ್ರೀಗಳು(Kodi mutt shri) ನುಡಿದ ಭವಿಷ್ಯ ನಿಜಕ್ಕೂ ಭಯ ಹುಟ್ಟಿಸಿದೆ. ಯಾಕೆಂದರೆ 2024 ಭಯಾನಕ ವರ್ಷ ಆಗಲಿದ್ದು, ಈ ವರ್ಷ ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವಾಗುವ ಸಂಭವಗಳು ಎದ್ದು ಕಾಣುತ್ತವೆ. ಜಾತಿ-ಧರ್ಮಗಳ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ ಎಂದು ಬೆಚ್ಚಿಬೀಳೋ ಭವಿಷ್ಯ ನುಡಿದ್ದಾರೆ.

ಇಷ್ಟೇ ಅಲ್ಲದೆ ದೇಶದಲ್ಲಿ ಅಸ್ಥಿರತೆ, ಯುದ್ಧ ಭೀತಿ, ಅಣುಬಾಂಬ್ ಸ್ಫೋಟಗೊಳ್ಳುವ ಅವಕಾಶವಿದೆ. ಇದರೊಂದಿಗೆ ಜಗತ್ತಿಗೆ ಮತ್ತೊಮ್ಮೆ ರೋಗ ಹರಡುವ ಸಾಧ್ಯತೆ ಇದೆ. ಜೊತೆಗೆ ದೊಡ್ಡ ಸುನಾಮಿಯೊಂದು ಎದ್ದು ಜಗತ್ತಿಗೆ ಅಪಾಯವಾಗಲಿದೆ. ಅಕಾಲಿಕ ಮಳೆಯಾಗಿ ಲಕ್ಷಾಂತರು ಜನರು ತೊಂದರೆಗೊಳಗಾಗುತ್ತಾರೆ ಎಂದು ಶ್ರೀಗಳು ಹೇಳಿದ್ದಾರೆ. ಒಟ್ಟಿನಲ್ಲಿ 2024 ಜಗತ್ತಿಗೆ ಕಂಟಕವಾಗಲಿದ್ದು ದೈವ ನಂಬುವುದೊಂದೇ ಪರಿಹಾರ. ದೈವದ ಮೊರೆ ಹೋಗಬೇಕು ಎಂದು ಶ್ರೀಗಳು ಸಲಹೆ ನೀಡಿದ್ದಾರೆ.

1 Comment
  1. […] ಇದನ್ನೂ ಓದಿ: Kodi Mutt Shri: ಜಗತ್ತಿನ ಇಬ್ಬರು ಪ್ರಭಾವಿ ಪ್ರಧಾನಿ… […]

Leave A Reply

Your email address will not be published.