Heart Attack: ಕ್ರಿಕೆಟ್‌ ಆಡಿದ ಮರುಕ್ಷಣವೇ ಕುಸಿದ ಯುವಕ!! ಹೃದಯಾಘಾತ, ಸಾವು!!!

Heart Attack News: ಇತ್ತೀಚೆಗೆ ಹದಿಹರೆಯದವರಲ್ಲಿ, ಯುವಕ/ಯುವತಿಯರಲ್ಲೇ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗಿ ಬಾಧಿಸುತ್ತಿದ್ದು, ಇದೀಗ ಈ ಘಟನೆಗೆ ಸಂಬಂಧ ಪಟ್ಟಂತೆ ಕ್ರಿಕೆಟ್‌ ಆಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಬಲಿ ಆಗಿರುವ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Arun yogiraj: ರಾಮನ ಮೂರ್ತಿ ಕೆತ್ತುವಾಗ ಪ್ರತೀ ದಿನವೂ ಒಂದು ಕೋತಿ ಬರುತ್ತಿತ್ತು, ಬಂದು ಏನು ಮಾಡ್ತಿತ್ತು ಅಂದ್ರೆ… !! ಅಚ್ಚರಿ ಸಂಗತಿ ಬಿಚ್ಚಿಟ್ಟ ಅರುಣ್ ಯೋಗಿರಾಜ್

ಬೆಂಗಳೂರು ನಗರದ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ತಮಿಳುನಾಡು ತಿರುವಣಾಮಲೈ ಮೂಲದ ರಾಬಿನ್‌ (22) ಎಂದು ತಿಳಿದು ಬಂದಿದೆ. ಇವರು ರಾಜಾಜಿನಗರದ ಬೋವಿ ಕಾಲೋನಿ (ಬಸವೇಶ್ವರ ನಗರ) ನಿವಾಸಿ ಎಂದು ತಿಳಿದು ಬಂದಿದೆ. ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಗಣರಾಜ್ಯೋತ್ಸವದ ಸಂದರ್ಭ ಬ್ಯಾಂಕಿನ ವತಿಯಿಂದ ಕ್ರೀಡಾ ಕೂಡ ಆಯೋಜನೆ ಮಾಡಲಾಗಿತ್ತು. ಕ್ರೀಡಾಕೂಟದಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡಿದ್ದ ರಾಬಿನ್‌ ಎರಡು ಮೂರು ಆಟಗಳಲ್ಲಿ ಜಯಗಳಿಸಿದ್ದಾರೆ ಎನ್ನಲಾಗಿದೆ. ಅನಂತರ ಈ ಘಟನೆ ನಡೆದಿದೆ.

ಬಹುಮಾತ ವಿತರಣೆ ಸಂದರ್ಭ ರಾಬಿನ್‌ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಹೈಡ್ರೇಟ್‌ ಆಗಿರುವುದರಿಂದ ರಾಬಿನ್‌ ಅವರಿಗೆ ಹೃದಯಾಘಾತದಿMದ ಮೃತ ಪಟ್ಟಿರುವುದಾಗಿ ವೈದ್ಯರು ಹೇಳಿರುವುದಾಗಿ ವರದಿಯಾಗಿದೆ.

 

ಈ ಕುರಿತು ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.