Ayodhya rama mandir: ಅಯೋಧ್ಯೆ ರಾಮನ ಮೂರ್ತಿಗೆ ಕರ್ನಾಟಕದಿಂದ ಕಲ್ಲು ಕಳಿಸಿದ ವ್ಯಕ್ತಿಗೆ 80,000 ದಂಡ ವಿಧಿಸಿದ ರಾಜ್ಯ ಸರ್ಕಾರ !!

Ayodhya rama mandir: ಅಯೋಧ್ಯೆಯ (Ayodhay) ರಾಮಮಂದಿರದಲ್ಲಿ ಬಾಲರಾಮನ (Balarama) ಪ್ರಾಣಪ್ರತಿಷ್ಠಾಪನೆಯಾಗಿದೆ. ಈ ಸುಂದರ ಮೂರ್ತಿಗೆ ಇಡೀ ದೇಶದ ಜನ ಮನಸೋತಿದ್ದಾರೆ. ಈ ಬಾಲರಾಮನ ವಿಗ್ರಹ ಕನ್ನಡಿಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರ ಮೂಡಿ ಬಂದಿದ್ದು, ಅರುಣ್ ಅವರ ಕೈ ಚಳಕಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೀಗ ಈ ಬೆನ್ನಲ್ಲೇ ಶಾಕಿಂಗ್ ವಿಚಾರವೊಂದು ಹೊರಬಿದ್ದಿದ್ದು, ಮೂರ್ತಿ ಕೆತ್ತನೆಗೆ ಕಲ್ಲು ಹುಡುಕಿ, ಅಯೋಧ್ಯೆಗೆ ಕಳಿಸಿಕೊಟ್ಟ ಶ್ರೀನಿವಾಸ್ ಅವರಿಗೆ ರಾಜ್ಯ ಸರ್ಕಾರವು 80, 000 ದಂಡವನ್ನು ವಿಧಿಸಿದೆ.

ಇದನ್ನೂ ಓದಿ: Wakf Board: ರಾಜ್ಯದ ಮದರಸಾಗಳಲ್ಲಿನ್ನು ‘ಭಗವಾನ್ ಶ್ರೀರಾಮ’ ನ ಪಾಠ ಬೋದನೆ – ವಕ್ಫ್ ಮಂಡಳಿ ಘೋಷಣೆ!!

ಹೌದು, ಆಯೋಧ್ಯೆಯ ಶ್ರೀರಾಮ ಮಂದಿರದಲ್ಲಿ(Ayodhya rama mandir) ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವ ‘ಬಾಲರಾಮ’ನ ‌ಮೂರ್ತಿ ಕೆತ್ತಲು ಬಳಸಿದ ಕೃಷ್ಣಶಿಲೆಯನ್ನು ಒದಗಿಸಿದ ಶ್ರೀನಿವಾಸ್ ಅವರಿಗೆ ಕಲ್ಲು ಗಣಿಗಾರಿಕೆ ಗುತ್ತಿಗೆದಾರನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಂಡ ವಿಧಿಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದ್ದು, ಭಾರೀ ಆಕ್ರೋಶ ಕೇಳಿಬರುತ್ತಿದೆ.

ಅಂದಹಾಗೆ ಎಚ್‌.ಡಿ. ಕೋಟೆ ರಸ್ತೆಯ ಹಾರೋಹಳ್ಳಿ-ಗುಜೇಗೌಡನ ಪುರದಲ್ಲಿ ಜಮೀನಿನ ಮಾಲೀಕ ರಾಮದಾಸ್ ನೆಲ ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್‌ಗೆ ಗುತ್ತಿಗೆ ನೀಡಿದ್ದರು. ಈ ವೇಳೆ ಜಮೀನಿನಲ್ಲಿ ಶಿಲ್ಪ ಮಾಡಲು ಯೋಗ್ಯವಾದ ಕೃಷ್ಣಶಿಲೆ ದೊರೆಯುತ್ತಿದ್ದವು. ವಿಷಯ ತಿಳಿದ ಹಲವು ಶಿಲ್ಪಿಗಳು ಇಲ್ಲಿಗೆ ಬಂದು ಕೃಷ್ಣಶಿಲೆಯನ್ನು ತೆಗೆದುಕೊಂಡು ಹೋಗಿದ್ದರು. ಕೆಲವರು ಈ ಜಮೀನಿನಲ್ಲಿ ಅನಧಿಕೃತ ಗಣಿಗಾರಿಕೆ ನಡೆಯುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು, ಭಾರಿ ಗಾತ್ರದ ಕಲ್ಲುಗಳನ್ನು ಹೊರ ತೆಗೆಯಬೇಕಾದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಿಂದ ಅನುಮತಿ ಪಡೆದುಕೊಳ್ಳಬೇಕು. ಈಗ ಕಲ್ಲು ತೆಗೆದಿರುವುದು ಅನಧಿಕೃತ ಎಂದು ಹೇಳಿ 80 ಸಾವಿರ ರೂ. ದಂಡ ವಿಧಿಸಿದ್ದರು. ಗುತ್ತಿಗೆದಾರರು ಅನ್ಯ ಮಾರ್ಗವಿಲ್ಲದೆ ದಂಡವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದರು. ಅಲ್ಲದೆ ದಂಡ ಪಾವತಿಸಲು ಹಣವಿಲ್ಲದ ಕಾರಣ ಹೆಂಡತಿಯ ಒಡವೆಯನ್ನು ಅಡವಿಟ್ಟು ಹಣ ಪಾವತಿಸಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಅವರು ‘ನಾನು ಗುತ್ತಿಗೆ ಪಡೆದಿದ್ದ ರಾಮದಾಸ್‌ ಅವರ ಜಮೀನಿನಲ್ಲಿ ಸಿಕ್ಕ ಕೃಷ್ಣಶಿಲೆಯಲ್ಲಿ ಶ್ರೀರಾಮನ ಮೂರ್ತಿ ಅರಳಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಗೊಳ್ಳುತ್ತಿರುವುದು ಸಂತಸ ತಂದಿದೆ. ಆದರೆ 80 ಸಾವಿರ ರೂ. ದಂಡವೂ ಸೇರಿದಂತೆ ಸಾಕಷ್ಟು ಹಣ ನನಗೆ ನಷ್ಟವಾಗಿ ಸಾಲ ಮಾಡಿಕೊಂಡಿದ್ದೇನೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಹೆಂಡತಿ ಒಡವೆ ಅಡ ಇಟ್ಟದ್ದು ಬೇಸರ ತಂದಿದೆ. ಏನೇ ಆದರೂ ನನಗೆ ನನ್ನ ಕೆಲಸದ ಬಗ್ಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.

ಇನ್ನು ಈ ಕುರಿತಂತೆ ಸರ್ಕಾರದ ವಿರುದ್ಧ ಸರ್ಕಾರದ ಈ ನಡೆಗೆ ಬಿಜೆಪಿ ತೀವ್ರ ಕಿಡಿಕಾರಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ರಾಮಭಕ್ತರ ಮೇಲಿನ ಕೋಪ ಇನ್ನೂ ತಣ್ಣಗಾದಂತಿಲ್ಲ ಎಂದು ಕಿಡಿಕಾರಿದ್ದಾರೆ.

Leave A Reply

Your email address will not be published.